ಕಾಯೊ ಕಾಯೊ ಕಮಲಾಯತಾಕ್ಷ

ಕಾಯೊ ಕಾಯೊ ಕಮಲಾಯತಾಕ್ಷ

-- ರಾಗ ಬೇಹಾಗ್ (ಜೋಗಿಯಾ) ಆದಿತಾಳ(ದೀಪಚಂದಿ) ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ||ಪ|| ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಭವ ತೋಯನಿಧಿಯೊಳು ಬಿದ್ದು ಬಾಯ ಬಿಡುವೆ ಬೇಗದಿ ಬಂದು ||ಅ,ಪ|| ಅದ್ವೈತತ್ರಯ ದಧ್ವಪ್ರವರ್ತಕ ಸದ್ವೈಷ್ಣವ ಪಾದದ್ವಯ ತೋರಿ ||೧|| ಸಂಜೆಯ ತೋರಿ ಧನಂಜಯನುಳುಹಿದೆ ಮಂಜುಳ ಚರಿತ ನಿರಂಜನ ಮೂರ್ತೇ ||೨|| ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂತೆ ಪ್ರತಿ ಪ್ರತಿ ಕ್ಷಣದಿ ||೩|| ಅಧಮನು ನಾನಹುದು ದಧಿಶಯನ ಸನ್- ಮುದಮುನಿ ಮತ ಪೊಂದಿದ ರಣುಗನ ನೀ ||೪|| ನೀ ದಯಮಾಡದಡೇ ದಿವಿಜರು ಒಲಿ- ದಾದರಿಸುವರೇ ವೃಕೋದರ ವಂದ್ಯ ||೫|| ಸತ್ಯಾತ್ಮಕ ಭವಭೃತ್ಯಗೆ ಬಂದಪ- ಮೃತ್ಯು ಕಳೆದು ಸಂಪತ್ತು ಪಾಲಿಸಿ ||೬|| ಎಲ್ಲರೊಳಿಹ ಕೈವಲ್ಯದರಸೆ ನೀ ಬಲ್ಲಿದನೆಂಬುದ ಬಲ್ಲೆ ಬಹುಬಗೆ ||೭|| ಕ್ಷುದ್ರ ಭೂಮಿಪರುಪದ್ರವ ಕಳೆದು ಸು- ಭದ್ರವೀಯೊ ಕಲ್ಪದ್ರುಮದಂತೆ ||೮|| ವೀತಭಯ ಜಗನ್ನಾಥವಿಠಲ ಸು- ಖೇತರ ಕಳೆದು ಮಹಾತಿಶಯದಲಿ ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು