ದಾಸರಿಗುಂಟೇ ಭಯ ಶೋಕ

ದಾಸರಿಗುಂಟೇ ಭಯ ಶೋಕ

------ರಾಗ- ನಾದನಾಮಕ್ರಿಯೆ (ಕಾಲಿಂಗಡಾ) ಅಟತಾಳ( ಕಹರವಾ) ದಾಸರಿಗುಂಟೇ ಭಯ ಶೋಕ , ಹರಿ- ||ಪ|| ದಾಸರಿಗುಂಟೇ ಭಯ ಶೋಕ ವಾಸುದೇವನ ಸದಾ ಸ್ಮರಿಸುವ ಹರಿ- ದಾಸರಿಗುಂಟೇ ಭಯ ಶೋಕ ||ಅ.ಪ|| ಕಾಮಧೇನು ವರ ಕಲ್ಪವೃಕ್ಷ ಚಿಂ- ತಾಮಣಿ ಕೈಸೇರಿದಕಿಂತ ನಾಮತ್ರಯದಿಂದಪ್ಪುದು ಸುಖವು ಸು- ಧಾಮನೆ ಸಾಕ್ಷಿದಕೆಂಬ ಹರಿ ||೧|| ರಾಮಚಂದ್ರ ಶಬರಿ ತಿಂದೆಂಜಲ- ಜಾಮಿಳ ಮಾಡ್ದ ಕುಕರ್ಮಗಳ ಧೂಮಕೇತು ತಾ ಭುಂಜಿಸುವಂದದಿ ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ ||೨|| ನೇಮ ಮಂತ್ರ ಜಪ ದೇವತಾರ್ಚನ ಸ- ಕಾಮುಕವಾಗಲು ತ್ಯಜಿಸುತಲಿ ಧೀಮಂತರಾಗತಿಪ್ರಿಯವಾಗಲು ಬಹು ತಾಮಸ ಕರ್ಮವ ಮಾಳ್ಪುದೆಂಬ ಹರಿ ||೩|| ಏನು ಮಾಡಿದಪರಾಧವ ಕ್ಷಮಿಸುವ ಏನು ಕೊಟ್ಟುದನು ಕೈಗೊಂಬ ಏನು ಬೇಡಿದಿಷ್ಟಾರ್ಥವ ಕೊಡುವ ದ- ಯಾನಿಧಿ ಅನುಪಮನೆಂಬ ಹರಿ ||೪|| ಪ್ರಹ್ಲಾದವರದ ಪ್ರಕಟನಾಗದಲೆ ಎಲ್ಲರೊಳಿಪ್ಪನು ಪ್ರತಿದಿನದಿ ಬಲ್ಲಿದವರಿಗೆ ಬಲ್ಲಿದ ಜಗನ್ನಾಥ ವಿಠ್ಠಲ ವಿಶ್ವವ್ಯಾಪ್ತನೆಂಬ ಹರಿ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು