ಇಂದು ಕಾಯಲಾ ಭಕ್ತವತ್ಸಲಾ

(ತಿಲಂಗ ರಾಗ ದಾದರಾ ತಾಳ) ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡೆಲಾ ||ಪ|| ಮೊರೆಯ ಕೇಳೆಲಾ ಹರಿಯೆ ನಿಶ್ಚಲಾ ಕರುಣದಿಂದ ಒದಗಿ ಬೇಗ ದುರಿತ ಹರಿಸೆಲಾ ||೧|| ಸುಳುಹುದೋರೆಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ ||೨|| ತಂದೆ ನೀನೆಲಾ ತಾಯಿ ನೀನೆಲಾ ಬಂಧು ಬಳಗ ದೈವ ಕುಲಕೋಟಿ ನೀನೆಲಾ ||೩|| ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ ||೪|| ಅಂದು ಒದಗಿ ನೀ ಬಂದು ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನದೆಲಾ ||೫|| ದೀನಜನರಿಗೇ ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ ||೬|| ಪುಣ್ಯಪ್ರಭೆಯದಾ ಕಣ್ಣದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯನರಿಯದ ಜನುಮ ಧರೆಯೊಳಗಧಮಾಧಮ

(ಭೀಮಪಲಾಸ್ ರಾಗ ಝಪ್ ತಾಳ ) ಹರಿಯನರಿಯದ ಜನುಮ ಧರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ||ಧ್ರುವ|| ಹರಿಗೆ ನಮಿಸದ ಶಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣೆಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರಕ ಕೀಲಿಯ ಕೈಯು ಹರಿಯ ಕೊಂಡಾಡದ ನಾಲಿಗೆ ಒಡಕ ಸೊಲಿಗೆಯು ||೧|| ಹರಿಯ ಸ್ತುತಿಸದ ಮುಖವು ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಿಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು ||೨|| ಹರಿಯ ಸೇವೆಗೊದಗದ ಕಾಲು ಮುರಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವೆಂದು ಸಲೆ ಮೊರೆಹೊಕ್ಕಿಹ ಮೂಢ ಮಹಿಪತಿಯು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೊ ಕರುಣಾಭಯ ಕೃದ್ಭಯನಾಶನ

(ಸೋಹನಿ ರಾಗ ಝಂಪೆತಾಳ ) ಕಾಯೊ ಕರುಣಾಭಯ ಕೃದ್ಭಯನಾಶನ ||ಧ್ರುವ|| ಕಂದ ಪ್ರಹ್ಲಾದಗಾಗಿ ಸಂಧಿಸೊದಗಿ ನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ ||೧|| ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರಮಹಿಮ ||೨|| ಕರಿಯ ಮೊರೆಯನು ಕೇಳಿ ಸೆರೆಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು ||೩|| ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರದ ಮುನಿಗಳ ||೪|| ಶರಣು ಹೊಕ್ಕೆನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ

(ಪಹಾಡಿ ರಾಗ ಕೇರವಾ ತಾಳ) ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ||ಧ್ರುವ|| ಒಳ್ಳೆ ಒಳ್ಳೆ ವರು ಬಂದು ಕೇಳಿರೋ ನೀವಿನ್ನು ತಿಳಿದುಕೊಳ್ಳಿ ಇದಕೆ ಬೀಳುವುದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದು ನೋಡಿ ಕಣ್ಣು ಕೊಳ್ಳಲರಿಯದವನ ಬಾಯಾಗ ಬೀಳುದು ಮಣ್ಣು ||೧|| ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ಸಮ್ಯಕ್ ಜ್ಞಾನ ಪ್ಯಾಟಿಯೊಳು ತುಂಬಿ ತುಳುಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ ||೨|| ಇಹಪರ ಸಾರ್ಥಕಿದೆ ಕೇಳಿರೊ ನೀವೆಲ್ಲ ದೇಹ ಅಭಿಮಾನಿಗಿದು ಸಾಧ್ಯವಾಗುವುದಲ್ಲ ಸೋಹ್ಯವರಿತು ಸೂರೆಗೊಂಡ ಮಹಿಮ ತಾ ಬಲ್ಲ ಗುಹ್ಯವಾಕ್ಯ ತಿಳಿದು ನೋಡಿ ಮಹಿಪತಿ ಸೊಲ್ಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ

(ಭೈರವಿ ರಾಗ ದಾದರಾ ತಾಳ) ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ||ಧ್ರುವ|| ಧ್ಯಾನ ಮೌನ ಸ್ನಾನ ಸಂಧ್ಯಾ ಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ ||೧|| ಹೀನದೀನ ಜ್ಞಾನಶೂನ್ಯ ದಾನಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣದಿ ಕೃಪಾನಿಧೆ ||೨|| ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ತೋರಿಸೆನ್ನ ಹೊರೆಯೊ ದಯಾನಿಧೆ ||೩|| ಅರುಹುಕುರುಹುನರಿಯದಿಹ ಮರುಳ ಮಂಕ ತರಳ ನಾ ಕರವ ಪಿಡಿದು ಧರೆಯೊಳಿನ್ನು ತಾರಿಸೊ ದಯಾನಿಧೆ ||೪|| ಆಶಪಾಶದಲ್ಲಿ ವಾಸವಾದ ದೋಷರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ ||೫|| ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲವೆನಗೆ ನೀನೆ ಶ್ರೀಹರಿಯೆ

(ಜೋಗಿ ರಾಗ ದಾದರಾ ತಾಳ) ಸಕಲವೆನಗೆ ನೀನೆ ಶ್ರೀಹರಿಯೆ ||ಧ್ರುವ|| ತಂದೆತಾಯಿ ಸ್ವಹಿತಾತ್ಮನು ನೀನೆ ಬಂಧುಬಳಗ ಸರ್ವಾತ್ಮನು ನೀನೆ ||೧|| ದೈವಗುರು ಕುಲಗೋತ್ರನು ನೀನೆ ಕಾವ ಕರುಣ ಸೂತ್ರಾಂತ್ರನು ನೀನೆ ||೨|| ದ್ರವ್ಯಧನವು ಸಕಲಾಶ್ರಯ ನೀನೆ ದಿವ್ಯಾಲಂಕೃತ ಭೂಷಣ ನೀನೆ ||೩|| ಭಾಸುತ ಬಾಹ್ಯಾಂತರದೊಳಿಹ ನೀನೆ ಭಾಸ್ಕರ ಕೋಟಿ ಸುತೇಜರೂಪನು ನೀನೆ ||೪|| ಮಹಿಪತಿ ಮನೋಹರಮೂರ್ತಿಯು ನೀನೆ ಸಾಹ್ಯ ಸಕಲಕೆ ಸಾರಥಿಯು ನೀನೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ

(ಬಾಗೇಶ್ರೀ ರಾಗ ದಾದರಾ ತಾಳ) ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ||ಧ್ರುವ|| ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ ||೧|| ಸ್ವಾಮಿ ನಿಮ್ಮ ಖೂನ ನಮ್ಮ ನಿಜಸ್ಥಾನ ಸ್ವಾಮಿ ನಿಮ್ಮ ಜ್ಞಾನ ನಮ್ಮ ನಿಜ ಧ್ಯಾನ ||೨|| ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ ||೩|| ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ ||೪|| ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ

(ಭೈರವಿ ರಾಗ ದಾದರಾ ತಾಳ) ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ ಹರಿ ||ಪ|| ಆಡಿಸಿದರಾಡುವೆ ನೋಡಿಸಿದರೆ ನೋಡುವೆ ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗೆ ||೧|| ನಡಿಸಿದರೆ ನಡೆವೆ ಕೂಡಿಸಿದರೆ ಕೂಡುವೆ ನುಡಿಸಿದರೆ ನಾ ನುಡಿವೆ ಚೇತಿಸಿದಂತೆ ||೨|| ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ ಇಡಿಸಿದರೆ ನಾ ಇಡುವೆ ಸರ್ವ ಭೂಷಣಾ ||೩|| ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ ||೪|| ಕಲಿಸಿದರೆ ಕಲಿವೆ ಬಲಿಸಿದರೆ ಬಲಿವೆ ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗೆ ||೫|| ನೇಮಿಸಿದರೆ ನೀ ಒಂದು ನಾ ಮಾಡುವುದು ಒಂದು ನಿಮಿತ್ಯ ಮಾಡಿ ದೋರುದು ಸೋಜಿಗಿದೊಂದು ||೬|| ಎನ್ನ ಬಾಹ್ಯಾಂತ್ರ ಪೂರ್ಣ ಚೆನ್ನಾಗಿರೆ ನೀ ಕರುಣಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ

(ಕಾಫಿ ರಾಗ ತೀನ್ ತಾಳ) ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲ ||ಧ್ರುವ|| ಗುರುಕರುಣಕೃಪೆಯಿಂದ ಪರಮದಿವ್ಯಾಮೃತವು ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ ||೧|| ಅನುದಿನ ಸೇವಿಸುವ ಅನುಭವಿಗಳೂಟ ಏನೆಂದುಸುರಲಿ ನಾ ಅನಂದೋಬ್ರಹ್ಮವಾ ||೨|| ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ ||೩|| ಆಲಸ್ಯಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ ಸುಲಲಿತವಾಗಿಹುದು ತಿಳಿದುಕೊಂಬವರಿಗೆ ||೪|| ಇರುಳ್ಹಗಲ ಪೂರ್ಣ ಸುರುವುತಿಹ ಅಮೃತ ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೊ ಕರುಣಾನಂದ ಶ್ರೀಗುರು

(ಕೇದಾರ ರಾಗ ಝಪ್ ತಾಳ) ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮನಿಧೆ ||ಧ್ರುವ|| ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿವೈರಾಗ್ಯವ ದೃಢಗೊಳಿಸು ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯ ವಿವೇಕಪಥದಲಿ ಕೂಡಿಸೊ ನಿಜ ಸುಖಬೋಧವ ಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧|| ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವ ಗುಟ್ಟಿನೊಳು ನಿಜಘಟ್ಟಿಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವ ನಿಟಿಲನಯನ ಭ್ರೂಮಧ್ಯದೆರೆಸಿ ನೀ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯದ ||೨|| ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ
ದಾಸ ಸಾಹಿತ್ಯ ಪ್ರಕಾರ
ಬರೆದವರು