ಇಂದು ಕಾಯಲಾ ಭಕ್ತವತ್ಸಲಾ

ಇಂದು ಕಾಯಲಾ ಭಕ್ತವತ್ಸಲಾ

(ತಿಲಂಗ ರಾಗ ದಾದರಾ ತಾಳ) ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡೆಲಾ ||ಪ|| ಮೊರೆಯ ಕೇಳೆಲಾ ಹರಿಯೆ ನಿಶ್ಚಲಾ ಕರುಣದಿಂದ ಒದಗಿ ಬೇಗ ದುರಿತ ಹರಿಸೆಲಾ ||೧|| ಸುಳುಹುದೋರೆಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ ||೨|| ತಂದೆ ನೀನೆಲಾ ತಾಯಿ ನೀನೆಲಾ ಬಂಧು ಬಳಗ ದೈವ ಕುಲಕೋಟಿ ನೀನೆಲಾ ||೩|| ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ ||೪|| ಅಂದು ಒದಗಿ ನೀ ಬಂದು ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನದೆಲಾ ||೫|| ದೀನಜನರಿಗೇ ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ ||೬|| ಪುಣ್ಯಪ್ರಭೆಯದಾ ಕಣ್ಣದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು