Skip to main content

ಜಗನ್ನಾಥದಾಸ

ಮನವೆ ಮರೆವರೇನೊ ಹರಿಯ

---- ರಾಗ ಯರಕಲ ಕಾಂಬೋಧಿ (ಕಾಫಿ) ಅಟತಾಳ(ತೀನ್ ತಾಲ್)

ಮನವೆ ಮರೆವರೇನೊ ಹರಿಯ ಬಹು ||ಪ||
ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ||

ವಿಷಯ ಚಿಂತನೆ ಮಾಡೆ ಸಲ್ಲ ಮೇಷ
ವೃಷಣನಾದನು ಪೌಲೋಮಿಯ ನಲ್ಲ
ಝಷಕೇತುವಿನ ಮೇಳಹೊಲ್ಲ ನಿ-
ರಶನನಾಗೊ ಯಮರಾಯ ಎಂದೆಂದು ಕೊಲ್ಲ ||೧||

ಧನವೆ ಜೀವನವೆಂಬೆ ನೀನು, ಸುಯೋ-
ಧನನ ನೋಡು, ಧನದಿಂದ ಏನಾದ ಕೊನೆಗೆ
ಅನಿರುದ್ಧದೇವನ ಮನೆಗೆ ಪೋಪ
ಘನವಿಜ್ಞಾನ ಸಂಪಾದಿಸೊ ಕೊನೆಗೆ ||೨||

ಹರಿದಾಸನಾಗಿ ನೀ ಬಾಳೋ , ಗುರು-
ಹಿರಿಯರ ಪಾದಕಮಲಕೆ ನೀ ಬೀಳೊ
ನರರ ನಿಂದಾಸ್ತುತಿ ತಾಳೋ, ದೇಹ
ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ ||೩||

ಜಿತನಾಗಿ ಪೇಳುವೆ ಸೊಲ್ಲ, ಹರಿ-
ಕಥೆಯಲ್ಲಿ ನಿರತನಾಗಿರು, ಲೋಹಕಲ್ಲ
ಪ್ರತಿಮೆ ಪೂಜಿಸಲಲ್ಲೇನಿಲ್ಲ , ಪರೀ-
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು

---ರಾಗ ಮೋಹನ (ಭೂಪ್) ಝಂಪೆತಾಳ

ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು
ಪರಮ ಪಾಪಿಷ್ಠ ನಾನು || ಪ||
ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ವ್ಯರ್ಥ
ನರಕಕ್ಕೆ ಗುರಿಯಾದೆನೊ ಇನ್ನು ||ಅ.ಪ||

ಕೆರೆ ಭಾವಿ ದೇವಮಂದಿರಗಳನು ಕೆಡಿಸಿ , ದಿವ್ಯ ಹಿರಿದಾಗಿ ಮನೆ ಕಟ್ಟಿದೆ
ನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯ ಮರ ಕಡಿಸಿ ಕೊರೆಸಿ ಬಾಗಿಲ ಮಾಡಿದೆ
ಪವನ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸೌಖ್ಯ ಸುರಿದೆ ಮೆರೆದೆ ||೧||

ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸವಸದಿ ಬಣ್ಣಿಸುತ ಹಸನಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶಿ ದಿನದಲಿ ಅಶನವೆರಡ್ಹೊತ್ತುಣ್ಣುತ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಪಿಡಿಯೆನ್ನ ಕೈಯ್ಯ ರಂಗಯ್ಯ

----ರಾಗ ಮಧ್ಯಮಾವತಿ (ಭೂಪ) ಅಟತಾಳ(ದೀಪಚಂದಿ)

ಪಿಡಿಯೆನ್ನ ಕೈಯ್ಯ ರಂಗಯ್ಯ ||ಪ||

ಪಿಡಿಯೆನ್ನ ಕೈಯ್ಯ ಪಾಲ್ಗಡಲೊಡೆಯನೆ ಮೋಹ-
ಮಡುವಿನೊಳ್ಬಿದ್ದು ಬಾಯ್ಬಿಡುವೆ, ಬೇಗನೆ ಬಂದು ||ಅ.ಪ||

ನೀರಜನಾಭ ನಂಬಿದೆ ನಿನ್ನ ನೀರಪ್ರದಾಭಾ
ಕಾರುಣ್ಯನಿಧಿ ಲಕ್ಷ್ಮೀನಾರಸಿಂಹನೆ ಪರಿ-
ವಾರ ಸಹಿತ ಈ ಶರೀರದೊಳಡಗಿದ್ದು
ಘೋರತರ ಸಂಸಾರ ಪಂಕದಿ
ಚಾರಿವರಿದೆನೊ ದೂರನೋಳ್ಪರೆ
ಹೇ ರಮಾಪತೆ ಗಾರುಮಾಡದೆ
ಚಾರುವಿಮಲ ಕರಾರವಿಂದದಿ ||೧||

ಅನಿಮಿತ್ತ ಬಂಧು ನೀನೇ ಗತಿ ಗುಣಗಣಸಿಂಧು
ಅನಘನೆ ಸೇವಿಸುವೆನೊ ವಿಧಿಭವಸಕ್ರಂ-
ದನ ಮುಖ್ಯದೇವ ಸನ್ಮುನಿಗಣಾರ್ಚಿತ ಪಾದ
ಅನುಜ ತನುಜಾಗ್ರಜ ಸದಾಣುಗ
ಜನನಿ ಜನಕ ಪಶು ಕೃಷೀ ಧನ
ಘನಸದನ ಸಂಹನನ ಮೊದಲಾ-

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಇದು ನಿನಗೆ ಧರ್ಮವೆ ಇಂದಿರೇಶ

----ರಾಗ ಕಾಂಬೋಧಿ (ಸಾರಂಗ) ಝಂಪೆತಾಳ

ಇದು ನಿನಗೆ ಧರ್ಮವೆ ಇಂದಿರೇಶ ||ಪ||
ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ||

ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನವನ ಈ ಪರಿಯ ಬನ್ನಬಡಿಸುವದು ||೧||

ದುರುಳನಲ್ಲವೊ ನಿನ್ನ ಚರಣ ಸೇವಕರವನೊ
ಪರಿಪಾಲಿಪುದು ನಿನಗೆ ಪರಮಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨||

ಶೋಕನಾಶಕ ವಿಗತಶೋಕನೆಂಬೋ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧು
ನಿರಾಕರಿಸದೆಮ್ಮನು ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕ ರಕ್ಷಾಮಣಿ||೩||

ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣ ಪಾಲಕ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages