Skip to main content

ವಂದಿಪೆನಮ್ಮಾ ಮುದ್ದುಶಾರದೆ

( ರಾಗ ಮಧ್ಯಮಾವತಿ(ಕಾಫಿ) , ಅಟತಾಳ (ತೀನ್ ತಾಳ)

ವಂದಿಪೆನಮ್ಮಾ ಮುದ್ದುಶಾರದೆ ಶರ-
ಚ್ಚಂದಿರವದನೆ ಶಾರದೆ ||ಪ||

ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ
ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ||

ಸಿತಾಬ್ಜಾಸನೆ ಸುಖದಾಯಕಿ, ಸುರ
ನಾಥಾರಾಧಿತೆ ವಿಶ್ವನಾಯಕೀ
ವೀತದುರಿತೆ ಶಿವಮಾತೆ ಸದ್ಗುಣಮಣಿ
ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧||

ಕೋಕಿಲವಾಣಿ ಕವಿಸೇವಿತೆ ಎನ್ನ
ವಾಕು ಲಾಲಿಸೆ ಮುನಿವಂದಿತೆ
ತೋಕನೆಂದು ಸುವಿವೇಕ ಬುದ್ಧಿಯನಿತ್ತು
ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨||

ಪಾತಕಿಗಳೊಡನಾಡಿ ನಾ ನಿನ್ನ
ಪೂತಾಬ್ಜಪದ ಭಜಿಸದ್ಹೋದೆ ನಾ
ಪಾತಕವೆಣಿಸದೆ ಸೀತಾರಮಣ ಜಗ-
ನಾಥವಿಟ್ಠಲನಂಘ್ರಿಗೀತಾಮೃತವನುಣಿಸು ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Comments

"ಶರ ಚಂದಿರವದನೆ"

ಇದು ಶರಚ್ಚಂದಿರವದನೆ ಆಗಬೇಕಿತ್ತಲ್ಲವೆ?

ಮತ್ತು ಸುಖದಯಕಿ ಅನ್ನುವುದು ಟೈಪೋ. ಅದು ಸುಖದಾಯಕಿ ಆಗಬೇಕಿತ್ತು

ಶರಚ್ಚಂದಿರವದನೆ ಸರಿ ಅಂತ ಕಾಣುತ್ತದೆ . ನಾನು ಇಟ್ಟುಕೊಂಡ ಪುಸ್ತಕದಲ್ಲಿ ಹಾಗೆ ಇತ್ತು. ಸುಖದಯಕಿ ನೀವು ಯೋಚಿಸಿದ ಹಾಗೆ ಟೈಪಿಸುವಾಗ ಆದ ತಪ್ಪು . ಎರಡನ್ನೂ ತಿದ್ದಿದ್ದೇನೆ. ತುಂಬ ಧನ್ಯವಾದಗಳು.