ಬಾರೋ ರಾಘವೇ೦ದ್ರ - ಬಾರೋ

ಬಾರೋ ರಾಘವೇ೦ದ್ರ - ಬಾರೋ

ಬಾರೋ ರಾಘವೇ೦ದ್ರ - ಬಾರೋ ಕಾರುಣ್ಯವಾರಿಧಿಯೆ ಬಾರೋ ಆರಾಧಿಪ ಭಕ್ತರಭೀಷ್ಟವ ಪೂರೈಸುವ ಪ್ರಭುವೆ ಬಾರೋ || ಪ || ರಾಜವ೦ಶೋದ್ಭವನ ಪಾದ ರಾಜೀವಭೃ೦ಗನೆ ಬಾರೋ ರಾಜಾಧಿರಾಜರೊಳು ವಿ ರಾಜಿಸುವ ಚೆಲುವ ಬಾರೋ || ೧ || ವ್ಯಾಸರಾಯನೆನಿಸಿ ನೃಪನಾ ಕ್ಲೇಶ ಕಳೆದವನೆ ಬಾರೋ ಶ್ರೀಸುಧೀ೦ದ್ರರ ಕರಸ೦ಜಾತ ವಾಸುದೇವಾರ್ಚಕನೆ ಬಾರೋ || ೨ || ಸನ್ಯಾಸ ಕುಲದೀಪ ಬಾರೋ ಸನ್ನುತ ಮಹಿಮನೆ ಬಾರೋ ಮಾನ್ಯ ಜಗನ್ನಾಥವಿಠ್ಠಲಾ ಪನ್ನಜನರ ಪ್ರಿಯನೆ ಬಾರೋ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು