ರಾಘವೇ೦ದ್ರ

ಬಾರೋ ರಾಘವೇ೦ದ್ರ - ಬಾರೋ

ಬಾರೋ ರಾಘವೇ೦ದ್ರ - ಬಾರೋ ಕಾರುಣ್ಯವಾರಿಧಿಯೆ ಬಾರೋ ಆರಾಧಿಪ ಭಕ್ತರಭೀಷ್ಟವ ಪೂರೈಸುವ ಪ್ರಭುವೆ ಬಾರೋ || ಪ || ರಾಜವ೦ಶೋದ್ಭವನ ಪಾದ ರಾಜೀವಭೃ೦ಗನೆ ಬಾರೋ ರಾಜಾಧಿರಾಜರೊಳು ವಿ ರಾಜಿಸುವ ಚೆಲುವ ಬಾರೋ || ೧ || ವ್ಯಾಸರಾಯನೆನಿಸಿ ನೃಪನಾ ಕ್ಲೇಶ ಕಳೆದವನೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರೆದರೆ ಬರಬಾರದೆ?

ಕರೆದರೆ ಬರಬಾರದೆ? ಗುರುವೆ || ಪ || ವರಮಂತ್ರಾಲಯ ಪುರಮಂದಿರ ತವ ಚರಣ ಸೇವಕರು ಕರವ ಮುಗಿದು || ೧ || ಹರಿದಾಸರು ಸುಸ್ವರ ಸಮ್ಮೇಳದಿ ಪರವಶದಲಿ ಬಾಯ್ದೆರೆದು ಕೂಗಿ || ೨ || ಪೂಶರಪಿತ ಕಮಲೇಶವಿಠ್ಠಲನ ದಾಸಾಗ್ರೇಸರರೀ ಸಮಯದಿ || ೩ ||
ದಾಸ ಸಾಹಿತ್ಯ ಪ್ರಕಾರ

ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ

ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ || ಪ || ರಾಕ್ಷಸ ಕುಲದಲಿ ಜನಿಸಿತು ಕೂಸು ರಾಧಾಕೃಷ್ಣನ ಭಜಿಸಿತು ಕೂಸು ರಾಗದ್ವೇಷಗಳ ಬಿಟ್ಟಿತು ಕೂಸು ರಾಮನ ಪಾದವ ನೆನೆಯುವ ಕೂಸು || ೧ || ಘನಹರಿ ಕಂಭದಿ ತೋರಿತು ಕೂಸು ಗಳಿಸಿತು ಕೃಷ್ಣನ ಪ್ರೇಮವ ಕೂಸು
ದಾಸ ಸಾಹಿತ್ಯ ಪ್ರಕಾರ
ಬರೆದವರು