Skip to main content

ಜಗನ್ನಾಥದಾಸ

ದಾಸರಾಯ ಪುರಂದರದಾಸರಾಯ

-----ರಾಗ-ಸಾವೇರಿ(ಭೈರವಿ) ಅಟತಾಳ (ದೀಪಚಂದಿ)

ದಾಸರಾಯ ಪುರಂದರದಾಸರಾಯ ||ಪ||
ದಾಸರಾಯ ಪ್ರತಿದಾಸರದಲಿ ಶ್ರೀನಿ-
ವಾಸನ ತೋರೊ ದಯಾಸಾಂದ್ರ ಪುರಂದರ ||ಅ.ಪ||

ವರದನಾಮಕ ಭೂಮಿಸುರನ ಮಡದಿ ಬ-
ಸುರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||೧||

ಕುಲಿಶಧರಾಹ್ವಯ ಪೊಳಲೊಳು ಮಡದಿ ಮ-
ಕ್ಕಳ ಕೂಡೆ ಸುಖದಿ ಕೆಲವು ಕಾಲದೊಳಿದ್ಯೊ ||೨||

ವ್ಯಾಸರಾಯರಲಿ ಭಾಸುರ ಮಂತ್ರೋಪ-
ದೇಶವ ಕೊಂಡು ರಮೇಶನ ಭಜಿಸಿದೆ ||೩||

ಮನೆ ಧನ ಧಾನ್ಯ ವಾಹನ ವಸ್ತುಗಳೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ||೪||

ಪ್ರಾಕೃತಭಾಷೆಯೋಳ್ ನೀ ಕೃತಿ ಪೇಳಿ ಆ
ಪ್ರಾಕೃತಹರಿಯಿಂದೆ ಸ್ವೀಕೃತನಾದೆ ||೫||

ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ ||೬||

ಪಾತಕ ವನನಿಧಿ ಪೋತನೆನಿಪ ಜಗ-

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಗೋಪಾಲದಾಸರಾಯ ನಿನ್ನಯ ಪಾದ

---- ರಾಗ ಮೋಹನ(ಭೂಪ್ ) ಅಟತಾಳ (ದೀಪಚಂದಿ)

ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನು ನಿಶ್ಚಯ ||ಪ||
ಈ ಪೀಡಿಪ ತಾಪತ್ರಯಗಳನೋಡಿಸಿ
ಕೈಪಿಡಿದೆನ್ನನು ನೀ ಪಾಲಿಸನುದಿನ ||ಅ.ಪ||

ಘೋರವ್ಯಾಧಿಗಳ ನೋಡಿ ವಿಜಯರಾಯ
ಭೂರಿಕರುಣವ ಮಾಡಿ
ತೋರಿದರಿವರೇ ಉದ್ಧಾರಕರೆಂದಂದಿ-
ನಾರಭ್ಯ ತವಪಾದ ಸೇರಿದೆ ಸಲಹೆಂದು|
ಸೂರಿಜನ ಸಂಪ್ರೀಯ ಸುಗುಣೋ-
ದಾರ ಎನ್ನಯ ದೋಷನಿಚಯವ
ದೂರಗೈಸು ದಯಾಂಬುಧಿಯೆ ನಿ-
ವಾರಿಸದೆ ಕರಪಿಡಿದು ಬೇಗ ||೧||

ಅಪಮೃತ್ಯುವನು ತೊಡೆದೆ ಎನ್ನೊಳಗಿಪ್ಪ
ಅಪರಾಧಗಳ ಮರೆದೆ
ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದಲಿ |
ಕೃಪಣವತ್ಸಲ ನಿನ್ನ ಕರುಣಕೆ
ಉಪಮೆಗಾಣೆನೊ ಸಂತತವು ಕಾ-
ಶ್ಯಪಿಯೊಳಗೆ ಬುಧರಿಂದ ಜಗದಾ-
ಧಿಪನ ಕಿಂಕರನೆನಿಸಿ ಮೆರೆದೆ ||೨||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಕರುಣಿಗಳೊಳಗೆಣೆ ಕಾಣೆನೊ ನಿನಗೆ

---ರಾಗ ಧನಶ್ರೀ (ಭೀಮ್ ಪಲಾಸ್ ) ಅಟತಾಳ (ದೀಪಚಂದಿ)
ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ-
ದ್ಗುರುವರ ರಾಘವೇ೦ದ್ರ || ಪ ||
ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ
ಹರಕೆಯ ನಿರುತದಲೀವೆ-ನೀ ಕಾವೇ || ಅ ||

ರಾಘವೇ೦ದ್ರ ಗುರುವೇ ಗತಿ ಎ೦ದನು-
ರಾಗದಿ೦ದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆ-
ನ್ನಾಗಿ ಸ೦ತೈಸುವೆ ನೀ ಸನ್ಮೌನಿ || ೧ ||

ಸುಧೀ೦ದ್ರಯತಿಕರ ಪದುಮಸ೦ಭವ ಮಧು
ವಧ ಪಾದಾ೦ಬುಜ ಮಧುಪ
ತ್ರಿದಶಭೂರುಹದ೦ತೆ ಬುಧಜನರೀಪ್ಸಿತ
ಒದಗಿ ಪಾಲಿಸಿ ಪೊರೆವೆ ಮದ್ಗುರುವೆ || ೨ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ರಾಘವೇ೦ದ್ರಯತಿಸಾರ್ವಭೌಮ

ರಾಗ - ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ)

ರಾಘವೇ೦ದ್ರಯತಿಸಾರ್ವಭೌಮ ದುರಿತೌಘದೂರ ತೇ ನಮೋ ನಮೋ
ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ ||ಪ||

ಶ್ಲಾಘಿತಗುಣಗಣ ಸೂರಿಪ್ರಸ೦ಗ ಸದಾಗಮಜ್ಞ ತೇ ನಮೋ ನಮೋ
ಮೇಘಶ್ಯಾಮಲ ರಾಮಾರಾಧಕಮೋಘ ಬೊಧ ತೇ ನಮೋ ನಮೋ || ೧ ||

ತು೦ಗಭದ್ರ ಸುತರ೦ಗಿಣಿತೀರಗ ಮ೦ಗಳಚರಿತ ಶುಭಾ೦ಗ ನಮೋ
ಇ೦ಗಿತಜ್ಞ ಕಾಳಿ೦ಗಮರ್ದನ ಯದುಪು೦ಗವ ಹೃದಯಸುರ೦ಗ ನಮೋ
ಸ೦ಗಿರಚಿಹ್ನಿತ ಶೃ೦ಗಾರಾನನ ತಿ೦ಗಳ ಕುರುಣಾಪಾ೦ಗ ನಮೋ
ಗಾ೦ಗೇಯ ಸಮಭಾ೦ಗ ಕುಮತ ಮಾತ೦ಗ ಸ೦ಘ ಶಿತಪಿ೦ಗ ನಮೋ || ೨ ||

ಕೋವಿದಮಸ್ತಕಶೋಭಿತಮಣಿ ಸ೦ಭಾವಿತಮಹಿಮ ಪಾಲಯ ಮಾ೦
ಸೇವಿ(/ವಾ?)ಪರ ಸರ್ವಾರ್ಥಪ್ರದ ಬೃ೦ದಾವನಮ೦ದಿರ ಪಾಲಯ ಮಾ೦
ಭಾವಜಮಾರ್ಗಣ ಭುಜಗವಿನಾಯಕ ಭಾವಜ್ಞಪ್ರಿಯ ಪಾಲಯ ಮಾ೦

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages