ಯಾತರ ಭಯ ಶ್ರೀನಾಥನ ಪರಮ ಪ್ರೀತಿಯ ಪಡೆದವಗೆ

ಯಾತರ ಭಯ ಶ್ರೀನಾಥನ ಪರಮ ಪ್ರೀತಿಯ ಪಡೆದವಗೆ

---ರಾಗ ಜಂಜೂಟಿ (ಭೈರವಿ) ಆದಿತಾಳ(ಕಹರವಾ) ಯಾತರ ಭಯ ಶ್ರೀನಾಥನ ಪರಮ- ಪ್ರೀತಿಯ ಪಡೆದವಗೆ ||ಪ|| ಕಾತರಗೊಳದಲೆ ಪಾತಕಹರವಿಧಿ- ತಾತನೆ ನಿಜಸುಖದಾತನೆಂದರಿತಗೆ|| ಅ.ಪ|| ದುಸುಮುಸುಗುಟ್ಟುವ ಶಶಿಮುಖಿಯಿಂದಲಿ ಹಸಗೆಟ್ಟಿದ್ದೇನೋ ಅಶನಾಚ್ಛಾದನ ತರಲಿಲ್ಲವೆನುತಲಿ ವ್ಯಸನ ಪಡುವುದೇನೋ ಕುಸುಮನಾಭ ಸುಮನಸ ವಂದಿತ ಪದ ವಸುದೇವನ ಸುತನೊಶದೊಳಗಿರುವಗೆ ||೧|| ಬಂಧುಜನರು ತನಗೊಂದಿಸಿದಾಕ್ಷಣ ಬಂದ ಭಾಗ್ಯವೇನೊ ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ ಮಂದರಧರ ಗೋವಿಂದನ ಮಾನಸ- ಮಂದಿರದೊಳು ತಂದಿಟ್ಟಿರುವವಗೆ ||೨|| ಕಾಶಿ ಕಂಚಿ ಕಾಳಹಸ್ತಿಯೆ ಮೊದಲಾದ ದೇಶ ತಿರುಗಲೇನೊ ಘಾಸಿಯಿಂದ ಆಯಾಸಪಡುತ ಆ- ವಾಸದೊಳಿರಲೇನೊ ಈಶಧೀಶ ಜಗನ್ನಾಥವಿಠ್ಠಲನ ದಾಸನೆನಿಸಿ ಸಂತೋಷದೊಳಿರುವವಗೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು