Skip to main content

ಜಗನ್ನಾಥದಾಸ

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ

-----ರಾಗ ನವರೋಜು (ಬಿಲಾವಲ್) ಆದಿತಾಳ(ಕಹರವಾ)

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ || ಪ ||
ಘೋರ ಭವ ವನಧಿ ತಾರಿಸು ಕರುಣದಿ
ಸೂರಿ ಸುಧೀ೦ದ್ರ ಕುಮಾರ ಉದಾರ || ಅ.ಪ ||

ಮುನಿರಾಯ ನಿಮ್ಮ ಪಾದವನರುಹ ಧ್ಯಾನ
ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ
ಧನವ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ಪ್ರತಿದಿನ ದಣಿದಣಿಸುವುದು
ಘನವೇ ಗುರುಪಾವನತರಚರಿತ || ೧ ||

ಮೂಲರಾಮನ ಪಾದಕೀಲಾಲಜ ಮಧುಪ
ಬಾಲನ ಬಿನ್ನಪ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ ಶೀಲ ಸ್ವರೂಪ
ಭೂಲಲನಾಪತಿ ಕೋಲನ೦ದಿನಿ
ಕೂಲಗ ವರಮ೦ತ್ರಾಲಯನಿಲಯ || ೨ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಶಿವ ನೀನ್ಹ್ಯಾಗಾದ್ಯೋ

---ರಾಗ ಮಧ್ಯಮಾವತಿ (ಭೂಪ್ ) ಅಟತಾಳ (ದೀಪಚಂದಿ)

ಶಿವ ನೀನ್ಹ್ಯಾಗಾದ್ಯೋ ನರಪಶು ಶಿವ ನೀನ್ಹ್ಯಾಗಾದ್ಯೋ
ಶಿವ ನೀನಾದರೆ ಶಿವನರಾಣಿ ನಿನಗ್ಯುವತಿ ಆದಳಲ್ಲೊ ಅವಿವೇಕಿ ಮನುಜಾ ||ಪ||

ಗರಗೊರಳೊಲಿ ಧರಿಸಿದ ಮಹದೇವನ
ಸರಿಯಾಗುವಿಯಂತೊದರುತಿಹುವಿ
ಪರಮಾನ್ನದಿ ಮಕ್ಷಿಕ ಬೀಳಲು ಉಂಡು
ಕರಗಿಸಿಕೊಳ್ಳದೆ ಅಳುವ ಮುಗ್ಗಲುಗೇಡಿ ||೧||

ಕುಂಡಲಿಭೂಷಣ ಚಂಡವಿಕ್ರಮ ಕ-
ಮಂಡಲುಧರನು ನಾನೆಂಬೀ
ಕಂಡರೆ ಸರ್ಪನ ಕಳವಳಗೊಳುತೀ
ಹೆಂಡಗಾರ ಹೆಣ ಮುಂಡೇಗಂಡ ||೨||

ನಂದಿವಾಹನ ಪುರಂದರಾದಿ ಸುರ-
ವಂದ್ಯಹರನೇ ನಾನೆಂತೆಂಬೀ
ಮಂದಮತಿಯೆ ಒಂದಿನ ಎತ್ತೇರಲು
ಮಂದಿಯೊಳಗೆ ನೀ ನಿಂದಿತನಾಗುವಿ ||೩||

ಪೀತಾಂಬರ ನಿರ್ಭೀತ ಭೂತಗಣ-
ನಾಥನೆ ನಾನೆಯೆಂತೆಂಬೀ
ಧೋತರ ಬಿಟ್ಟರೆ ಪಾದರಕ್ಷೆಯಲಿ
ಘಾತಿಸುವರು ನಿನ್ನ ಭೂತ ಸೋಕಿತೆಂದು ||೪||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅರಿತವರಿಗತಿಸುಲಭ ಹರಿಯ ಪೂಜೆ

----ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ

ಅರಿತವರಿಗತಿಸುಲಭ ಹರಿಯ ಪೂಜೆ ||ಪ||
ಅರಿಯದವ ನಿರ್ಭಾಗ್ಯತರ ಲೋಕದೊಳಗೆ ||ಅ.ಪ||

ಹೈಮಾಂಡ ಮಂಟಪವು ಭೂಮಂಡಲವೆ ಪೀಠ
ಸೋಮಸೂರ್ಯರೆ ದೀಪ ಭೂರುಹಗಳು
ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ
ಯಾಮಾಷ್ಟಕಗಳಷ್ಟದಳದ ಪದ್ಮವು ಎಂದು ||೧||

ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಮಲಯಜಾನಿಲವೆ ಶ್ರೀಗಂಧಧೂಪ
ಇಳೆಯೊಳಗೆ ಬೆಳೆವ ಧಾನ್ಯಗಳೆಲ್ಲ ನೈವೇದ್ಯ
ಥಳಥಳಿಪ ಮಿಂಚು ಕರ್ಪೂರದಾರತಿ ಎಂದು ||೨||

ನಕ್ಷತ್ರಮಂಡಲವೆ ಲಕ್ಷದೀಪಾವಳಿಯು
ದಕ್ಷಿಣೋತ್ತರ ಅಯನಗಳೆರಡು ಬನವು
ವೃಕ್ಷದಲ್ಲಿಜ ಸಫಲ ಪುಷ್ಪಗಳೊಳಗೆ ಲಕ್ಷ್ಮೀ
ವಕ್ಷವ್ಯಾಪಕನಾಗಿ ತಾನೆ ಭೋಗಿಪನೆಂದು ||೩||

ಗುಡುಗು ಸಪ್ತಸಮುದ್ರ ಸಿಡಿಲು ಘೋಷವೆ ವಾದ್ಯ
ಪೊಡವಿಪರಿಗೀವ ಕಪ್ಪವೆ ಕಾಣಿಕೆ
ಉಡುಪ ಭಾಸ್ಕರರ ಮಂಡಲಗಳಾದರ್ಶಗಳು

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಸಾರಿದ ಡಂಗುರ ಯಮನು

----ರಾಗ - ನಾದನಾಮಕ್ರಿಯೆ (ಸಾರಂಗ) ಅಟತಾಳ (ದೀಪಚಂದಿ)

ಸಾರಿದ ಡಂಗುರ ಯಮನು-ಅಘ-
ನಾರಿಯರೆಳೆದು ತಂದು ನರಕದೊಳಿಡು ಎಂದು ||ಅ.ಪ||

ಹೊತ್ತಾರೆ ಎದ್ದು ಪತಿಗೆ ಎರಗದವಳ
ಮೃತ್ತಿಕೆ ಶೌಚ ಮಾಡದೆ ಇಪ್ಪಳ
ಹೊತ್ತಾಗೆ ಮೈತೊಳೆದತ್ತಿಗೆ ನಾದಿನಿ
ಅತ್ತೆ ಮಾವರ ಬೈವಳೆತ್ತಿ ತನ್ನಿರೊ ಎಂದು ||೧||

ತಿಲಕಾಯುಧವ ಬಿಟ್ಟು ಕುಂಕುಮವಿಡುವಳ
ಬೆಳಗಾದ ಕಾಲಕ್ಕು ಮಲಗಿಪ್ಪಳ
ಮಲಿನ ವಸ್ತ್ರವನುಟ್ಟು ಪತಿಬಳಿ ಪೋಪಳ
ಕಲಹಕಾರಿಯ ಪಿಡಿದೆಳೆತನ್ನಿರೊ ಎಂದು ||೨||

ಉತ್ತಮ ಗುರುಹಿರಿಯರನು ನಿಂದಿಸುವಳ
ಹೆತ್ತ ಮಕ್ಕಳ ಮಾರಿ ಬದುಕುವಳ
ಪ್ರತ್ಯೇಕ ಶಯ್ಯದಿ ಮಲಗಿಪ್ಪಳ ನೀಚ-
ವೃತ್ತಿಯಳ ಪಿಡಿದೆತ್ತಿ ತನ್ನಿರೊ ಎಂದು ||೩||

ಜಲಜಕ್ಕಿಸಾಳಿ ಕಂಬಳಿ ಲೋಳೀ ಬಕ್ಕಿ ಗೊಂ-
ದಲ ಮೊದಲಾದುವು ದೈವವೆಂದು
ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗುವ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages