ಏತರವ ನಾನಯ್ಯ ಇಂದಿರೇಶ

ಏತರವ ನಾನಯ್ಯ ಇಂದಿರೇಶ

--- ರಾಗ - ಮಲಹರಿ ತಾಳ-ಝಂಪೆ ಏತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ||ಪ|| ಕಾಲಗುಣಕರ್ಮ ಸ್ವಭಾವಗಳ ಮನೆಮಾಡಿ ಶ್ರೀಲೋಲ ನೀ ಸರ್ವರೊಳಗೆ ಇದ್ದು ಲೀಲೆಗೈಯುತೆ ಲಿಪ್ತನಾಗದೆ ನಿರಂತರದಿ ಪಾಲಿಸುವೆ ಸಂಹರಿಪೆ ದಿವಿಜ ದಾನವರ ||೧|| ತಿಳಿಸಿಕೊಂಬುವ ನೀನೆ ಶ್ರುತಿತತಿಗಳೊಳಗಿದ್ದು ತಿಳಿಸುವವ ನೀನೆ ಉಪದೇಶಕರೊಳಿದ್ದು ತಿಳಿಯುವವವ ನೀನೆ ಬುದ್ಧ್ಯಾದಿಂದ್ರಿಯದಲಿದ್ದು ನೆಲೆಗೊಂಡು ನಿಖಿಳ ವ್ಯಾಪಾರ ಮಾಡುತಲಿಪ್ಪೆ ||೨|| ಅಗಣಿತ ಮಹಿಮ ಜಗಜ್ಜನ್ಮಾದಿಕಾರಣನೆ ತ್ರಿಗುಣವರ್ಜಿತ ತ್ರಿವಿಕ್ರಮನೇತ್ರಿಧಾಮ ಭೃಗುಮುನಿವಿನುತ ಜಗನ್ನಾಥವಿಠ್ಠಲ ನಿನ್ನ ಪೊಗಳಿ ಹಿಗ್ಗುವ ಭಾಗ್ಯ ಕೊಡು ಜನುಮ-ಜನುಮದಲಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು