ಕೊಡೊ ಕೊಡೊ ಕೊಡೊ ಕೊಡೊ

(ರಾಗ ಪರೋಜ ಆದಿತಾಳ) ಕೊಡೊ ಕೊಡೊ ಕೊಡೊ ಕೊಡೊ ರಂಗಾ ಕೊಡೊ ಮಡದಿಯರುಡುವ ಸೀರೆಗಳ ||ಪ|| ಭಂಡುಮಾಡದಿರು ಭಾವಜನಯ್ಯನೆ ನೀರಜನಾಭನೆ ದಯಮಾಡೋ || ಗರತಿಯರೆಲ್ಲರು ಗುಲ್ಲು ಮಾಡುವರು ದೀನನಾಥನೆ ದಯಮಾಡೊ || ಸುರಹೊನ್ನೆಮರವೇರಿ ಅಡಗಿದ ನಿಪುಣನೆ ಆನಂದಭರಿತನೆ ದಯಮಾಡೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಭೈರವಿ ಛಾಪುತಾಳ ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಸಚ್ಚಿದಾನಂದ ಸರ್ವಗುಣಪೂರ್ಣಗೆ ಅತ್ಯಂತ ಸುಜ್ಞಾನಗಬ್ಜಾಕ್ಷಗೆ ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ ನಿತ್ಯಕಲ್ಯಾಣ ನಿರ್ದೋಷಗೆ || ವ್ಯಾಸಾವತಾರಗೆ ವೇದಉದ್ಧಾರಗೆ ಸಾಸಿರನಾಮದಾ ಸರ್ವೇಶಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯಬೇಕೆನ್ನ ಗೋಪಾಲ

(ರಾಗ ಕಾಪಿ ಅಟತಾಳ) ಕಾಯಬೇಕೆನ್ನ ಗೋಪಾಲ , ಒಂದು- ಪಾಯವನರಿಯೆನು ಭಕ್ತರಪಾಲ ||ಪ|| ಹಲವು ಜನ್ಮಗಳೆತ್ತಿ ಬಂದೆ, ಮಾಯಾ- ಬಲವೆಂದರಿಯದೆ ಭವದೊಳು ನೊಂದೆ ಒಲಿದು ಭಯವಾಯಿತು ಮುಂದೆ , ನೀನು ಸುಲಭನೆಂದು ಕೇಳಿ ಶರಣೆಂದು ತಂದೆ || ವಿತ್ತದೊಳಗೆ ಮನವಿಟ್ಟು, ನಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ

(ರಾಗ ಮಧ್ಯಮಾವತಿ ಆದಿತಾಳ) ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ ||ಪ|| ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತ್ತಿದೆ ಒದಗಿದ್ದ ಪಾಪವು ಹೋದೀತು ಹೊರಗೆಂದು ||ಅ|| ಭಾರತ ರಾಮಾಯಣ ಪಂಚರಾತ್ರಾಗಮ ಸಾರತತ್ವದ ಬಿಂದು ಸೇರೀತು ಒಳಗೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ

(ರಾಗ ಮುಖಾರಿ ಛಾಪು ತಾಳ) ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ ||ಪ|| ಸೃಷ್ಟಿ ಪರಿಪಾಲಕನೆ ಇದು ನಿನಗೆ ಸರಿಯೆ ||ಅ|| ಅರ್ಥವಿಲ್ಲದ ಚಿಂತೆ ಆಪ್ತರಿಲ್ಲದ ಚಿಂತೆ ವ್ಯರ್ಥವಾಯಿತು ಬದುಕು ಎಂಬ ಚಿಂತೆ ಅರ್ಥಿಯಲಿ ಇತ್ತ ಬಾರೆಂಬರಿಲ್ಲದ ಚಿಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

(ರಾಗ ರೇಗುಪ್ತಿ ಅಟತಾಳ) ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಪ|| ಮರಣವನೊಲ್ಲೆ ಜನನವನೊಲ್ಲೆ ದುರಿತ ಸಂಸಾರ ಕೋಟಲೆಯ ನಾನೊಲ್ಲೆ ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ ಚರಣಕಮಲದ ಸ್ಮರಣೆಯೊಳಿರಿಸೆನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದು ಏನು ನೋಡೆ

ಇದು ಏನು ನೋಡೇ ,ಇದು ರಂಗನ ಮುಖ, ಚಂದದಿ ಬಾಡೆ ಸಖಿ ||ಪ|| ನೀರೊಳಾಡಿದನೆ , ಬೆನ್ನಲಿ ದೊಡ್ಡ ಭಾರ ಪೊತ್ತನೆ ಕೋರೆದಾಡೆಯಿಂದ ಸೀಳಿ ಕಶಿಪಿನ ಕರುಳ ಮಾಲೆಯ ಧರಿಸಿದ ನರಸಿಂಹ ರೂಪನೆ || ಧರೆಯನಳೆದ ಪಾದದಲೊಂದು , ಪರಚ್ಛೆಯ ತರಿದ ನಾರವಸ್ತ್ರವನು ಉಟ್ಟು ನಂದಗೋಕುಲದಲಿ ಮಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಡಗಿದನೊ ಹರಿ, ಎನ್ನಯ ದೊರಿ

ತೋಡಿ ರಾಗ, ಆದಿ ತಾಳ ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪಲ್ಲವಿ|| ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ ಅಲ್ಲಲ್ಲಿ ಪುಸಿಮಾಡಿ ಫುಲ್ಲಲೋಚನ ಕೃಷ್ಣ ||೧|| ಶರಣೆಂದವರ ಕಾಯ್ವ ಕರುಣ ಸಮುದ್ರನು ಕರುಣವನರಿಯದೆ ಹರಿಣಾಂಕ ನಿಭವ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೀನರಕ್ಷಕನೆ ನಿನ್ನ ಧ್ಯಾನವೇನೋ

( ರಾಗ ಕಾಂಭೋಜ ಆದಿತಾಳ) ದೀನರಕ್ಷಕನೆ ನಿನ್ನ ಧ್ಯಾನವೇನೋ ವಿಟ್ಠಲ ಏನನಿತ್ತು ಮೆಚ್ಚಿಸುವೆನೋ ನಿನ್ನ ವಿಟ್ಠಲ || ಓದಿ ನಿನ್ನ ಮೆಚ್ಚಿಸುವೆನೊ ವೇದವ ಅಜಗೆ ಇತ್ತೆ ಓದಿಸಿ ಮೆಚ್ಚಿಸುವೆನೊ ವರಶೇಷಶಯನ ನಿನ್ನ || ಪಾಡಿ ನಿನ್ನ ಮೆಚ್ಚಿಸುವೆನೊ ಪವನಜ ಸ್ವಾಮಿ ನೀನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧಣಿಯ ನೋಡಿದೆನೋ ವೆಂಕಟನ

(ರಾಗ ಕಾಪಿ ಅಟತಾಳ) ಧಣಿಯ ನೋಡಿದೆನೋ ವೆಂಕಟನ , ಮನ- ದಣಿಯೆ ನೋಡಿದೆ ಶಿಖಾಮಣಿ ತಿರುಮಲನ || ಚರಣದಂದುಗೆ ಗೆಜ್ಜೆಯವನ , ಪೀತಾಂ- ಬರ ಉಡಿಗೆ ಒಡ್ಯಾಣವಿಟ್ಟವನ ಮೆರೆಯುವ ಮಾಣಿಕ್ಯದವನ , ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿದವನ || ಕೊರಳೊಳು ವೈಜಯಂತಿ ಇಹನ , ಕಿರು
ದಾಸ ಸಾಹಿತ್ಯ ಪ್ರಕಾರ
ಬರೆದವರು