ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

(ರಾಗ ರೇಗುಪ್ತಿ ಅಟತಾಳ) ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಪ|| ಮರಣವನೊಲ್ಲೆ ಜನನವನೊಲ್ಲೆ ದುರಿತ ಸಂಸಾರ ಕೋಟಲೆಯ ನಾನೊಲ್ಲೆ ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ ಚರಣಕಮಲದ ಸ್ಮರಣೆಯೊಳಿರಿಸೆನ್ನ || ಬೆಂದ ಸಂಸಾರೆಂಬೋ ಬೇನೆ ಮಧ್ಯದಲಿ ನೊಂದೆನೊ ನಾ ಬಹಳ ಕರಕರೆಯಲ್ಲಿ ನಂದಗೋಪನ ಕಂದ ವೃಂದಾವನಪ್ರಿಯ ಎಂದೆಂದು ನಿನ್ನ ಸ್ಮರಣೆಯೊಳಿರಿಸೆನ್ನ || ಪುತ್ರ ಮಿತ್ರ ಕಳತ್ರ ಬಂಧುಗಳೆಂಬ ಕತ್ತಲೆಯೊಳು ಸಿಲುಕಿ ಕಡು ನೊಂದೆನಲ್ಲ ಮುಕ್ತಿದಾಯಕ ಉಡುಪಿಯ ಕೃಷ್ಣರಾಯ ಭಕ್ತವತ್ಸಲ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು