ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ

ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ

(ರಾಗ ಮಧ್ಯಮಾವತಿ ಆದಿತಾಳ) ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ ||ಪ|| ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತ್ತಿದೆ ಒದಗಿದ್ದ ಪಾಪವು ಹೋದೀತು ಹೊರಗೆಂದು ||ಅ|| ಭಾರತ ರಾಮಾಯಣ ಪಂಚರಾತ್ರಾಗಮ ಸಾರತತ್ವದ ಬಿಂದು ಸೇರೀತು ಒಳಗೆಂದು || ಅಂದುಗೆ ಕಿರುಗೆಜ್ಜೆ ಮುಂಗಾಲಿಲಳವಟ್ಟು ಧಿಂ ಧಿಮಿ ಧಿಮಿಕೆಂದು ಕುಣಿವ ದಾಸರ ಕಂಡು || ನಂದನ ಕಂದ ಗೋವಿಂದ ಮುಕುಂದನ ಚಂದವಾದ ಧ್ವನಿ ಹೋದೀತು ಕರ್ಣಕೆಂದು || ಹರಿಶರಣರ ಪಾದಸರಸಿಜಯುಗಳದ ಪರಮಪಾವನವದ ರಜವು ಬಿದ್ದೀತೆಂದು || ಮಂಗಳಮೂರುತಿ ಪುರಂದರವಿಠಲನ ತುಂಗವಿಕ್ರಮ ಪದದಂಗುಳಿ ಸೋಕೀತೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು