ಈತ ರಂಗನಾದ ಹರಿಯು ಆತ ಲಿಂಗನಾದ ಹರನು

ಈತ ರಂಗನಾದ ಹರಿಯು
ಆತ ಲಿಂಗನಾದ ಹರನು ||ಪ||

ಗಿರಿಜಾಪತಿಯಾದನಾತ
ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ
ಸ್ಮರನ ಜನಕನಾದನೀತ ||೧||

ಶೇಷಭೂಷಣನಾದನಾತ
ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ
ದೋಷದೂರನಾದನೀತ ||೨||


ಕಂಗಳ ಮೂರುಳ್ಳವನಾತ
ಮಂಗಳ ದೇವೇಶನೀತ
ತುಂಗ ಹೆಳವನಕಟ್ಟೆ
ರಂಗನೀತ ಲಿಂಗನಾತ    ||೩||

-- ಹೆಳವನಕಟ್ಟೆ ಗಿರಿಯಮ್ಮ

ದಾಸ ಸಾಹಿತ್ಯ ಪ್ರಕಾರ

ಏಸೇಸು ಕಲ್ಪಕ್ಕು ಈಶನು ನೀನಯ್ಯ

ಏಸೇಸು ಕಲ್ಪಕ್ಕು ಈಶನು ನೀನಯ್ಯ

ಆಸಾಸು ಕಲ್ಪಕ್ಕು ದಾಸನು ಇವನಯ್ಯ , ಉ-

ದಾಸೀನ ಮಾಡದೆ ಪೋಷಿಸಬೇಕಯ್ಯ

ವಾಸವ ನೀ ಮಾಡಿ ವಾಸನಾಮಯರೂಪ

ಸೋಸಿಲಿತೋರಿಸಿ ದಾಸನ ಮಾಡಿಕೋ

ಆಶಯ ಬಿಡಿಸಿ ವಿಶೇಷ ಭಕುತಿ ಜ್ಞಾನವ 

ಲೇಸಾಗಿ ನೀನಿತ್ತು ಕೀಶ ಗುರುಜಗನ್ನಾಥವಿಠಲ ವರ-

ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸಿ ಬದುಕಿರೋ

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ೭ ||

ದಾಸ ಸಾಹಿತ್ಯ ಪ್ರಕಾರ

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

 ರಾಗ ಬಿಲಹರಿ - ಆದಿತಾಳ. 

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು? 
ಸತ್ಯ ಸದಾಚಾರ ಇಲ್ಲದವನು ಜಪ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ವೇದವ್ಯಾಸರ ಸ್ತೋತ್ರ ಪದ

ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ ನಾಶನಗೈಸು ಮೌನೀಷ |

ಸಾಸಿರ ಮಹಿಮನ ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||

 

ಸತ್ಯವತಿ ವರಸೂನು ಭವತಿದುರ ಭಾನು |ಭೃತ್ಯವರ್ಗದ ಸುರಧೇನು ||

ಸತ್ಯಮೂರುತಿಯು ನೀನು ಸ್ತುತಿಪೆ ನಾನು | ನಿತ್ಯ ನಿನ್ನಂಘ್ರಿಯರೇಣು ||

ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರತಿಗದು ಅತ್ಯಂತ ಸುಖಕರ ||

ಸುತ್ತುವ ಸುಳಿಯಿಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ || ೧ ||

 

ಲೋಕ ವಿಲಕ್ಷಣ ಋಷಿ ಗುಣವಾರಿ | ರಾಸಿ ವೈಕುಂಠ ನಗರ ನಿವಾಸಿ ||

ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಿಸಿ ||

ಶೋಕ ಮಾಡುವುದು ಅನೇಕ ಪರಿಯಿಂದ | ಆ ಕುರುವಂಶದ ನಿಕರ ತರಿಸಿದೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಯತಿಗಳ ತಾರತಮ್ಯಗಳ ಪದ

ಗುರುಮಧ್ವರಾಯರಿಗೆ ನಮೋ ನಮೋ |

ಗುರು ಜಯರಾಯರಿಗೆ ನಮೋ ನಮೋ || ಪ||

 

ಶ್ರಿಪಾದರಾಜರಿಗೆ ಗುರುವ್ಯಾಸರಾಜರಾಯರಿಗೆ |

ವಾದಿರಾಜರಿಗೆ ನಮೋ ನಮೋ || ೧||

 

ರಾಘವೇಂದ್ರರಾಯರಿಗೆ ವೈಕುಂಠದಾಸರಿಗೆ

ಪುರಂದರ ದಾಸರಿಗೆ ನಮೋ ನಮೋ ||೨||

 

ಗುರು ವಿಜಯದಾಸರಿಗೆ ಭಾರ್ಗವದಾಸರಿಗೆ

ರಂಗವಲಿದ ದಾಸರಿಗೆ ನಮೋ ನಮೋ ||೩||

 

ಪರಮವೈರಾಗ್ಯಶಾಲಿ ತಿಮ್ಮಣ್ಣದಾಸರಿಗೆ

ಹುಂಡೆಕಾರದಾಸರಿಗೆ ನಮೋ ನಮೋ ||೪||

 

ಗುರು ಶ್ರೀ ವಿಠಲನ ಪರಮ ಭಕ್ತರ ಚರಣ

ಸರಸಿಜಯುಗಳಿಗೆ ನಮೋ ನಮೋ ||೫||

 

 

 

 

 

 

 

ದಾಸ ಸಾಹಿತ್ಯ ಪ್ರಕಾರ

ಕನ್ನಡಪದ್ಯ

                                              

                                       ವೇದಪೀಠ ವಿರಿಂಚಿ ಭವ ಶ|ಕ್ರಾದಿ ಸುರ  ವಿಜ್ಞಾನದಾಯಕ|

                                       ಮೊದಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ||

                                       ಚೆದಭೇದ ವಿಷಾದ ಕುಟಿಲಾ೦ |ತಾದಿ ಮಧ್ಹ್ಯವಿದೂರ ಆದಾ|

                                       ನಾದಿಕಾರಣ ಬಾದರಾಯಣ ಪಾಹಿ ಸತ್ರಾಣ||೦೭||

ಶ್ರೀ ಹರಿಕಥಾಮೃತಸಾರ ಎಂಬ ಜಗನ್ನಾಥದಾಸರ ಮೇರು ಕೃತಿಯ (ಕನ್ನಡಭಾಷೆ ಯಲ್ಲಿದೆ) ಮಂಗಳಾಚರಣ ಸಂಧಿಯಲ್ಲಿನ ಈ ಪದ್ಯದಲ್ಲಿ ಕನ್ನಡ ಶಬ್ದ ಹುಡುಕಿರಿ?

ಲಕ್ಷ್ಮಿ ಶೋಭಾನ

ರಾಗ: ಪಂತುರಾವಳಿ ಧ್ರುವ ತಾಳ

ಶೋಭಾನವೆನ್ನೀರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ || ಶೋಭಾನೆ || ಪ ||

 

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||

 

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||

 

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿರ್ದು
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||

 

ದಾಸ ಸಾಹಿತ್ಯ ಪ್ರಕಾರ
ಬರೆದವರು