ಜಗದಂತರ್ಯಾಮಿಯೆನ್ನ ಸ್ವಾಮಿ

ಜಗದಂತರ್ಯಾಮಿಯೆನ್ನ ಸ್ವಾಮಿ

(ರಾಗ ಆನಂದಭೈರವಿ ಆದಿತಾಳ) ಜಗದಂತರ್ಯಾಮಿಯೆನ್ನ ಸ್ವಾಮಿ ||ಪ|| ಅಗಣಿತಗುಣ ನೀನು ನಿನ್ನ ಗುಣವಲ್ಲವೆಂದು ಬಗೆವವ ಜಗದೊಳಗೆ ಬ್ರಹ್ಮಹತ್ಯಗಾರ ||ಅ|| ಜಗತುಕರ್ತು ನೀನಿರಲು ಅನ್ಯರನ್ನೆ ದೈವವೆಂದು ಬಗೆವವ ಜಗದೊಳಗೆ ಸ್ವರ್ಣಸ್ತೇಯಿ || ಜಗತುಕರ್ತು ನೀನಿರಲು ಅನ್ಯದೈವರೊಡೆಯರೆಂದು ಬಗೆವವ ಜಗದೊಳಗೆ ಮದ್ಯಪಾಯಿ || ಜಗದ ತಾಯಿ ತಂದೆ ನೀನು , ನಿನ್ನ ತಾನೇ ಎಂದು ಬಗೆವವ ಜಗದೊಳಗೆ ಗುರುತಲ್ಪಗ || ಅವರ ತತ್ಸಂಯೋಗಿಗಳು ಪಂಚಮಹಾಪಾತಕರು ದಾಸರ ಸಂಗದೊಳಿಡು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು