ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ

ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ

(ರಾಗ ಕಾಂಭೋಜ ಅಟತಾಳ) ಇಬ್ಬರ್ಹೆಂಡಿರ ಸುಖವು ಇಂದು ಕಂಡೆನಯ್ಯ ||ಪ|| ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ ||ಅ|| ಒಬ್ಬಳಲಿ ಪೋಗಿ ಪೋಗರವ ಮಾಡೆನ್ನಲು ಬೊಬ್ಬೆ ಏನಿದು ಕೊಬ್ಬೆ? ನಡೆ ಎಂದಳು ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು ಅಬ್ಬಾ ಬಿಸಿ ಮುಟ್ಟಲಾಪೆನೆ ಎಂದಳು || ಹಿರಿಯವಳ ಕೂಡೆ ನಾ ಸರಸವಾಡುವೆನೆಂದು ಇರುಳು ಉಪ್ಪರಿಗೆ ನೇನೇರುತಿರಲು ಚರಣವೊಬ್ಬಳು ಪಿಡಿದು ಶಿರವನೊಬ್ಬಳು ಪಿಡಿದು ಸರಸರನೆ ಕೆಳಗೆ ಮೇಲೆಳೆಯುತಿಹರಯ್ಯ || ಅವಳ ಮಗ್ಗುಲೊಳಿರಲು ಇವಳ ಮಗ್ಗುಲ ಕಾಟ ಇವಳ ಮಗ್ಗುಲೊಳಿರಲು ಅವಳ ಕಾಟ ಅವಳಿಂದ ಸುಖವಿಲ್ಲ ಇವಳಿಂದ ಫಲವಿಲ್ಲ ಇವರಿಬ್ಬರ ಸಂಗ ಅಭಿಮಾನ ಭಂಗ || ಎರೆದುಕೊಂಬುವೆನೆಂದು ಎಣ್ಣೆ ಬಿಸಿಮಾಡಿ ನಾ ಕಿರಿಯವಳ ಕೂಡಿ ಒರಸಿಕೊಳುತಿರಲು ಹಿರಿಯವಳು ಮುನಿದು ಬಂದಾಗ ನೀರಿನ ಗಡಿಗೆ ಒಡೆದು ನಿರ್ವಾಣದಲಿ ಕುಳ್ಳಿರಿಸಿದಳು || ಅಂಗವರ್ಧಭಾಗ ಅನುದಿನದಿ ಹಿಂಗದೆ ತಾವು ಕೂಡಿ ಒತ್ತುತಿರಲು ಮಂಗಳಾಂಗ ಶ್ರೀ ಪುರಂದರವಿಠಲನೆ ಅಂಗವನೆ ಮುರಿದು ಮೂಲೆ ಕುಳಿಸಿದರೆನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು