ದೇವ ಹನುಮ ಶೆಟ್ಟಿ

ದೇವ ಹನುಮ ಶೆಟ್ಟಿ

ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ ಕಾವೋದು ಭಾವಿ ಪರಮೇಷ್ಠಿ ಪಾವನ ಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ವಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸು ವಾನರ ಕುಲ ನಾಯಕ ಜಾನಕಿ ಶೋಕ ಕಾನನ ತೃಣ ಪಾವಕ ಹೀನ ಕೌರವ ನಾಶಕ ಸನ್ಮೌನಿ ತಿಲಕ ಆನಂದತೀರ್ಥ ನಾಮಕ ಶೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ ಮಾಣದೆ ಅನುದಿನ ಪಾಣಿ ಪಿಡಿದು ಪೊರೆ ಸ್ಥಾಣು ಜನಕ ಗೀರ್ವಾಣ ವಿನುತ ಜಗ- ತ್ಪ್ರಾಣ ರಮಣ ಕಲ್ಯಾಣ ಮೂರುತಿ ಮರುತ ನಂದನ ಹನುಮ ಪುರಹರ ರೋಮ ಪರಮ ಪುರುಷ ಶ್ರೀ ಭೀಮ ಕರುಣಾಸಾಗರ ಜಿತಕಾಮ ಸದ್ಗುಣಭೌಮ ಪರವಾದಿ ಮತವ ನಿರ್ನಾಮ ಗಿರಿಸುತ ಪಾಲಕ ಜರಿಜ ವಿನಾಶಕ ಹರಿಮತ ಸ್ಥಾಪಕ ದುರಿತ ವಿಮೋಚಕ ಶರಣು ಜನರ ಸುರತರು ಭಾರತಿವರ ಮರೆಯದೆ ಪಾಲಿಸು ನಿರುಪಮ ಚರಿತ ದಿಟ್ಟ ಶ್ರೀ ಶ್ಯಾಮಸುಂದರ ವಿಠ್ಠಲ ಕುವರ ದುಷ್ಟ ರಾವಣ ಮದಹರ ಜಿಷ್ಣು ಪೂರ್ವಜ ವೃಕೋದರ ರಣರಂಗ ಶೂರ ಶಿಷ್ಟ ಜನರ ಉದ್ಧಾರ ನಿಷ್ಠೆಯಿಂದಲಿ ಮನ ಮುಟ್ಟಿ ನಿನ್ನ ಪದ ಥಟ್ಟನೆ ಪಾಡುವ ಶ್ರೇಷ್ಠ ಸುಜನರೊಳು ಇಟ್ಟು ಸಲಹೋ ಸದಾ ಸೃಷ್ಟಿ ಮಂಡಲದಿ ಪುಟ್ಟ ಗ್ರಾಮ ಬಲ್ಲಟಗಿಯ ವಾಸ
ದಾಸ ಸಾಹಿತ್ಯ ಪ್ರಕಾರ
ಬರೆದವರು