ಏನೆಂದು ಕೊಂಡಾಡಿ ಸ್ತುತಿಸಲೋ ದೇವ

ಏನೆಂದು ಕೊಂಡಾಡಿ ಸ್ತುತಿಸಲೋ ದೇವ

ಏನೆಂದು ಕೊಂಡಾಡಿ ಸ್ತುತಿಸಲೋ ದೇವ || ಪಲ್ಲವಿ|| ನಾನೇನು ಬಲ್ಲೆ ನಿಮ್ಮ ಮಹಿಮೆಗಳ ಮಾಧವ || ಅನುಪಲ್ಲವಿ || ಹರಿ ಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನು ಗರುಡ ಗಮನನು ನೀನು ಮರುಳ ಪಾಪಿಯು ನಾನು ಪರಂಜ್ಯೋತಿಯು ನೀನು ತಿರುಕನು ನಾನು || ೧ || ವಾರಿಧಿಶಯನನಾದ ಕಾರುಣ್ಯಪತಿ ನೀನು ಘೋರದಿಂದಿಹ ಕಾಮಿ ಕ್ರೋಧಿಯು ನಾನು ಈರೇಳು ಭುವನದೊಳು ಇರುವ ಮೂರುತಿ ನೀನು ದೂರಿ ನಿಮ್ಮನು ಬೈವ ದುಷ್ಟನು ನಾನು || ೨ || ಅಣುರೇಣು ತೃಣಗಳಲಿ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅನುಗುಣದ ಕರ್ಮಿ ನಾನು ವಾಣಿಯರಸನ ಪೆತ್ತ ವೈಕುಂಠಪತಿ ನೀನು ತನು ನಿತ್ಯವಲ್ಲದ ಬೊಂಬೆಯು ನಾನು || ೩ || ಕಂಬದಲಿ ಬಂದ ಆನಂದ ಮೂರುತಿ ನೀನು ನಂಬಿಕಿಲ್ಲದ ಪ್ರಪಂಚಿಗನು ನಾನು ಅಂಬರೀಷನಿಗೆ ಒಲಿದ ಅಕ್ರೂರ ಸಖ ನೀನು ಡಂಭಕರ್ಮಿಯು ನಾನು ನಿರ್ಜಿತನು ನೀನು || ೪|| ತಿರುಪತಿಯವಾಸ ಶ್ರೀ ವೆಂಕಟೇಶನು ನೀನು ಸ್ಮರಿಸಿ ನಿನ್ನಯ ನಾಮ ಬದುಕುವವ ನಾನು ಬಿರುದುಳ್ಳವನು ನೀನು ಮರೆಹೊಕ್ಕವನು ನಾನು ಸಿರಿಕಾಗಿ ನೆಲೆಯಾದು ಕೇಶವನೆ ನೀನು || ೫ ||
ದಾಸ ಸಾಹಿತ್ಯ ಪ್ರಕಾರ
ಬರೆದವರು