ಮಧ್ವಾಚಾರ್ಯರ ಮೂರು ಅವತಾರಗಳು
- Read more about ಮಧ್ವಾಚಾರ್ಯರ ಮೂರು ಅವತಾರಗಳು
- Log in to post comments
ಶ್ರೀ:
ಶ್ರೀ ವಾಸುದೇವ ಮಧುಸೂದನ ಕೈಟಭಾರೆ ಲಕ್ಷ್ಮೀಶ ಪಕ್ಷಿವರವಾಹನ ವಾಮನೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೧||
ಗೋವಿಂದ ಗೋಕುಲಪತೇ ನವನೀತ ಚೋರ ಶ್ರೀನಂದನಂದನ ಮುಕುಂದ ದಯಾಪರೇತಿ
ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಕೆಟ್ಟ ಮೇಲೆ ಬುದ್ಧಿ ಬಂದಿತೀಗ
ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ
ಕೆದ್ದು ಬಿದ್ದೆನು ಬರಿಯ ಗರ್ವದಿಂದ
ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು
ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು
ಜ್ಞಾನಸುಖ ಪರಿಪೂರ್ಣ ಏನು ಮಾಡಲು ಇನ್ನು
ಶ್ರೀನಿವಾಸನೆ ನಿನ್ನ ದಾಸ ನಾನು
ಸಾರಿದರ ಬಿಡನೆಂಬ ಬಿರುದನುಳುಹೊ
ಆರಿಗಾರಿಲ್ಲ ನೀನಿಲ್ಲದಿನ್ನು
ನೀರಿನೊಳಗದ್ದು ಕ್ಷೀರದೊಳಗದ್ದು
ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ
--ದಾಸರ ಲಕ್ಷ್ಮೀನಾರಾಯಣರಾಯರು
ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಸಿಂಧುಮಥನದಿ ಸುಧೆಯನಿತ್ತವರಾರು
ನೊಂದು ಮುಳುಗಲು ವಸುಂಧರೆಯ ತಂದವರಾರು
ಕಂದ ಕರೆಯಲು ಬಂದ ಬಂಧುವಾರು
ಇಂದ್ರನೈಶ್ವರ್ಯವನು ತಂದು ಕೊಟ್ಟವರಾರು
ಮಂದನೃಪರನು ಕಾಡಿಕೊಂದವರಾರು
ಸುಂದರಾಂಗಿಯ ಸೆರೆಯ ಬಂದು ಬಿಡಿಸಿದರಾರು
ಕುಂದುಗಳನೆಣಿಸದೆ ಕಾವದಾರು
ನಂದಿನೇರಿದನಿಂಗೆ ಗೆಲುವಿತ್ತವರಾರು
ಬಂದ ಭಯಗಳನೆಲ್ಲ ಬಿಡಿಸುವರಾರು
ಮುಂದೆ ಮುಕ್ತಿಯನೀವ ಶಕ್ತ ಪ್ರಭುವಾರು
ತಂದೆ ಶ್ರೀಕಾಂತನಲ್ಲದೆ ಮತ್ತೆ ಯಾರು
--ದಾಸರ ಲಕ್ಷ್ಮೀನಾರಾಯಣರಾಯರು
ಅಪ್ರಮೇಯ ಆದರಿಸೋ ಎನ್ನ ||ಪ||
ಸ್ವಪ್ರಕಾಶಾನಂದರೂಪನೆ ||ಅ||
ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ||೧||
ನಿನ್ನದರುಶನದಿಂದಾ ಧನ್ಯರಾಗುವರು ಜನರು
ಪುಣ್ಯವಂತರಾಗಿಹವರನ ಪಡೆವರು ||೨||
ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮವಿಠಲ ||೩||
--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ಅಂಜನಾ ಸುಕುಮಾರನೆ ಭವ- ||ಪ||
ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ||
ವಾಯುಪುತ್ರಾ ವಜ್ರಗಾತುರ
ನೋಯುವೆ ನಾ ಸಂಸಾರದೊಳ್
ಕೈಯ ಪಿಡಿದೆತ್ತುವರಾರೈ ||೧||
ಗುರುವರೇಣ್ಯ ತವ ಪಾದಪಂ
ಕರುಹಯುಗವಾಶ್ರಯಿಪರ
ನೆರಲಿನೊಳಗಿಟ್ಟುಯನ್ನನು ||೨||
ಕ್ಷೇಮದಾತನೇ ಶ್ರೀ ಗುರು
ರಾಮವಿಠಲ ಕಿಂಕರ
ಭೂಮಿಜಾಶೋಕನಾಶನ ||೩||
--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ಅಂಕುಡೊಂಕಾದ ಮಂಚ ಅನಂತಕಾಲದ ಮಂಚ
ಶಂಕರನ ಕೊರಳಿಗೆ ಪದಕವಾಗಿಹ ಮಂಚ
ವೆಂಕಟ ಪುರಂದರವಿಠಲ ಮಲಗುವ ಮಂಚ
ಶೃಂಗಾರವಾಗಿದೆ ಶ್ರೀಹರಿ ರಂಗನ ಮಂಚ
ಮಂಗಳಮೂರುತಿ ಪಾಂಡುರಂಗ ಮಲಗುವ ಮಂಚ
ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ
ಜನ್ಮಜನ್ಮದಿ ರಂಗ ಇಂತ ಲಂಡನು ನೋಡಮ್ಮ ||ಪ||
ನೀರಿಗೆ ಹೋಗುವ ನಾರಿಯರನು ಕಂಡು
ಮೋರೆಯ ತಿರುಹಿ ಇದಿರಾಗಿ ನಿಂದು
ದಾರಿಯನಡಗಟ್ಟಿ ನೀರಿಗೆ ಸುಂಕವು
ಊರ ಎಲ್ಲರ ಕೂಡೆ ಭಂಡವ ಮಾಡಿದ ನೋಡಮ್ಮ ||೧||
ಪಶುವ ಕರೆಯುತಿಹ ಶಶಿಮುಖಿಯರ ಕಂಡು
ಹಸನಾಗಿಯೆ ಮುಂದೆ ಬಂದು ನಿಂದು
ಹೊಸಪರಿ ವಿಧದಿ ಹೋರಿಯ ಹಾಗೆ ನಿನ್ನ ಮಗ
ಹೊಸಪರಿಯಲಿ ನಮ್ಮ ಭಂಡು ಮಾಡಿದ ನೋಡಮ್ಮ ||೨||
ಗೋಕುಲದೊಳಗುಳ್ಳ ಬೇಕಾದಂಗನೆಯರ
ಕಾಕು ಮಾಡಿದ ಕಾಣೆ ರಂಗ ನಿನ್ನಾಣೆ
ಸಾಕು ಸಾಕು ನಿನ್ನ ಮಗಗೆ ಬುದ್ಧಿಯ ಹೇಳೆ
ಶ್ರೀಕಾಂತ ಪುರಂದರವಿಠಲ ಬಂದ ಮನೆಗೆ ||೩||
---ಪುರಂದರದಾಸರು
ಅನ್ನದಾಸೆಗೆ ಪರರಮನೆಯ ಬಾಗಿಲ ಕಾಯ್ದು
ಅನೇಕ ಬಾಧೆಗಳಿಂದ ನೊಂದೆನಯ್ಯ
ಅನ್ಯತ್ರ ಪೊಡಮಟ್ಟು ಪೋಗಲೀಸರು ಅವರು
ಮನ್ನಿಸಿ ಕೃಪೆಯಿಂದ ಕೂಡಿಕೊಂಡಿರಲು
ಅನಾಥಬಂಧು ಶ್ರೀಹಯವದನನೇ
ನಿನ್ನ ಮನೆಯ ಕುನ್ನಿಯಂಜಲಿಕ್ಕಿ ನೀನು ಪೊರೆಯೋ ತಂದೆ
----ವಾದಿರಾಜರು
ಅರಿತವರನು ಕಾಣೆ ನಿನ್ನ ದೇವ
ಅರವಿದೂರನೆ ತವ ಮಹಿಮೆಯು ಘನ್ನ
ಭಂಡಿಕಾಲನು ಪಿಡಿದೆಯಂತೆ , ಹತ್ತು
ಭಂಡಿರಾಯನ ಸುತ ನೀನಾದೆಯಂತೆ
ಭಂಡಿಸುರನ ಕೊಂದೆಯಂತೆ , ಧುರದಿ
ಭಂಡಿನಡಿಸಿ ನರನ ಸಲಿಹಿದೆಯಂತೆ
ತಂದೆತಂದೆಗೆ ತಂದೆಯಂತೆ , ಜಗದ
ತಂದೆ ನಿನ್ನಗೆ ತಾಯಿತಂದೆಗಳಂತೆ
ತಂದೆ ವಿಪ್ರಜರ ನೀನಂತೆ ಸ್ವಾಮಿ
ತಂದೆ ನೃಪಾಲನ ಸುತೆಗೀಶನಂತೆ
ಸಿಂಧೂರದ್ವಯವರದನಂತೆ , ಮಧ್ಯ
ಸಿಂದೂರವದನವು ನಿನಗಿಹುದಂತೆ
ಸಿಂಧುಮಂದಿರ ನೀನಂತೆ , ಶ್ಯಾಮ-
ಸುಂದರ ನಿನಗೆ ಭಕ್ತರ ಚಿಂತೆಯಂತೆ
---ಶ್ಯಾಮಸುಂದರದಾಸರು