ಮಧ್ವಾಚಾರ್ಯರ ಮೂರು ಅವತಾರಗಳು

ಮಧ್ವಾಚಾರ್ಯರ ಮೂರು ಅವತಾರಗಳು

 

ಬಂದೆ ಗುರುರಾಯ ನಿನ್ನ ಸಂದರ್ಶನವ ಬಯಸಿ |

ನೊಂದು ಸಂಸಾರದಲ್ಲಿ ಬೆಂದು ಬೇಡುತ ನಾ ||

 

ರಾಮದೂತನಾಗಿ ತ್ರಿಜಗದೊಳಗೆ ಮೆರೆದವರ |

ಕಾಮಿನೀಮಣಿಗೆ ನೇಮದಿಂದುಂಗುರವನಿತ್ತೆ ||

 

ಇನಕುಲದಿ ಜನಿಸಿ ಗುಣಸಾಂದ್ರನಾಗಿ ಬಂಡಿ |

ಅನ್ನವನುಂಡು ದುರುಳರ ಚೆಂಡಾಡಿದ್ದು ಕೇಳಿ ||

 

ಕಟ್ಟಕಡೆಯಲ್ಲಿ ಯತಿಯಾಗಿ ಕೆಟ್ಟ ಮರಗಳ ತರಿದು |

ಪುಟ್ಟ ಜಗನ್ನಾಥ ವಿಠ್ಠಲನ ದಾಸರ ಪೊರೆವುದ ಕೇಳಿ ||

ದಾಸ ಸಾಹಿತ್ಯ ಪ್ರಕಾರ
ಬರೆದವರು