ಅರಿತವರನು ಕಾಣೆ ನಿನ್ನ ದೇವ

ಅರಿತವರನು ಕಾಣೆ ನಿನ್ನ ದೇವ

ಅರಿತವರನು ಕಾಣೆ ನಿನ್ನ ದೇವ
ಅರವಿದೂರನೆ ತವ ಮಹಿಮೆಯು ಘನ್ನ
ಭಂಡಿಕಾಲನು ಪಿಡಿದೆಯಂತೆ , ಹತ್ತು
ಭಂಡಿರಾಯನ ಸುತ ನೀನಾದೆಯಂತೆ
ಭಂಡಿಸುರನ ಕೊಂದೆಯಂತೆ , ಧುರದಿ
ಭಂಡಿನಡಿಸಿ ನರನ ಸಲಿಹಿದೆಯಂತೆ
ತಂದೆತಂದೆಗೆ ತಂದೆಯಂತೆ , ಜಗದ
ತಂದೆ ನಿನ್ನಗೆ ತಾಯಿತಂದೆಗಳಂತೆ
ತಂದೆ  ವಿಪ್ರಜರ ನೀನಂತೆ ಸ್ವಾಮಿ
ತಂದೆ ನೃಪಾಲನ ಸುತೆಗೀಶನಂತೆ
ಸಿಂಧೂರದ್ವಯವರದನಂತೆ , ಮಧ್ಯ
ಸಿಂದೂರವದನವು ನಿನಗಿಹುದಂತೆ
ಸಿಂಧುಮಂದಿರ ನೀನಂತೆ , ಶ್ಯಾಮ-
ಸುಂದರ ನಿನಗೆ ಭಕ್ತರ ಚಿಂತೆಯಂತೆ


---ಶ್ಯಾಮಸುಂದರದಾಸರು 

ದಾಸ ಸಾಹಿತ್ಯ ಪ್ರಕಾರ
ಬರೆದವರು