ಶ್ರೀಪಾದರಾಯ

ಚಿತ್ತಜನಯ್ಯನ ಚಿಂತಿಸು ಮನವೇ

(ಕಾಂಬೋಧಿ ರಾಗ ಆದಿತಾಳ) ಚಿತ್ತಜನಯ್ಯನ ಚಿಂತಿಸು ಮನವೇ ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ|| ಕಾಲನ ದೂತರು ನೂಲು ಹಗ್ಗವ ತಂದು ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ ಕಾಲಪಾಶದೊಳಿಟ್ಟು ಶೂಲದಿಂದಿರಿವಾಗ ಪಾಲಿಸುವರುಂಟೆ ಜಾಲವ ಮಾಡದೆ ||೧|| ದಂಡಧರನ ಭಟರು ಚಂಡಕೋಪದಿ ಬಂದು ಕೆಂಡದ ನದಿಯ ತಡೆಗೆ ಕೊಂಡೊಯ್ದು ಖಂಡಖಂಡವ ಕಿತ್ತು ಕೆಂಡದೊಳಿಡುವಾಗ ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨|| ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡು ಕಂಗಳಿಗೆ ಸೀಸವ ಕಾಸಿ ಪೊಯ್ಯಲು ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳಿದ್ಯಾ ಕೌತುಕವನು ಕೇಳಿದ್ಯಾ

(ಶಂಕರಾಭರಣ ರಾಗ ಆದಿತಾಳ) ಕೇಳಿದ್ಯಾ ಕೌತುಕವನು ಕೇಳಿದ್ಯಾ ||ಪ|| ಕೇಳಿದ್ಯಾ ಕೌತುಕವನು ನಾ ಕೇಳಿದೆ ನಿನಗಿಂತ ಮುನ್ನು ಆಹಾ ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆ ಕೋಳಿ ಕೂಗದ ಮುನ್ನ ನಾಳೆ ಪಯಣವಂತೆ ||ಅ.ಪ|| ಕರೆಯ ಬಂದಿಹನಂತೆ ಕ್ರೂರ ತಮ್ಮ ಕಿರಿಯಯ್ಯನಂತೆ ಅಕ್ರೂರ ಪುರ ಹೊರವಳಯದಲಿ ಬಿಟ್ಟು ತೇರ ಆಹಾ ಹಿರಿಯನೆಂದು ಕಾಲಿಗೆರಗಲು ರಾಮಕೃ- ಷ್ಣರ ರಕ್ಕಿಸಿಕೊಂಡು ಮರುಳುಮಾಡಿದ ಬುದ್ಧಿ ||೧|| ಸೋದರಮಾವನ ಮನೆಯ ಬೆಳ- ಗಾದರೆ ನಾಳಿನ ಉದಯ ಪರ- ಮಾದರವಂತೆ ತ್ವರೆಯ ಅಲ್ಲಿ ತೋ- ರಿದ ಮನಕೆ ನಾರಿಯ ಆಹಾ ಸಾಧಿಮಲ್ಲ ಮೊದಲಾದ ಬಿಲ್ಲುಹಬ್ಬ ಸಾಧಿಸಿಕೊಂಡು ಬರುವನೆಂಬ ಸುದ್ದಿ ||೨|| ಹುಟ್ಟಿದ ಸ್ಥಳವಂತೆ ಮಧುರೆ ಕಂಸ- ನಟ್ಟುಳಿಗಾರದೆ ಬೆದರಿ ತಂ- ದಿಟ್ಟ ತನ್ನ ತಂದೆ ಚದುರೆ ತೋರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ

( ಮಾಯಾಮಾಳವಗೌಳ ರಾಗ ಅಟ್ಟತಾಳ) ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ||ಪ|| ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ ||೧|| ಮಾತು ಮನಸು ಬಾರದವ್ವಾ ಸೋತೆವವ್ವಾ ಕೃಷ್ಣಗಾಗಿ ಆತನ ಕಾಣದೆ ಮನ ಕಾತರಿಸುತಿದೆಯವ್ವಾ ||೨|| ಅನ್ನೋದಕ ಒಲ್ಲೆವವ್ವಾ ಕಣ್ಣಿಗೆ ನಿದ್ರೆ ಬಾರದು ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ||೩|| ಮನೆಮನೆ ವಾರುತೆಗೆ ಮನವೆಳಸದೆಯವ್ವಾ ಮನಸಿಜಪಿತನೊಡನೆ ಮನ ತೆರಳಿತೆಯವ್ವಾ ||೪|| ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ ಗೋಪಜನರ ಕೂಡಿದ ಶ್ರೀಪತಿ ರಂಗವಿಠಲಾ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಳಬೆಳದಿಂಗಳು ಈ ಸಂಸಾರ

(ರಾಗ ನಾದನಾಮಕ್ರಿಯೆ ಛಾಪುತಾಳ) ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ|| ಸತ್ಯಕ್ಕೆ ಧರ್ಮನು ಲೆತ್ತವನಾಡಲು ಅರ್ಧ ಭಾಂಡಾರವೆಲ್ಲವ ಸೋತು ಮತ್ತೆ ವಿರಾಟರಾಯನ ಮನೆಯಲ್ಲಿ ತೊತ್ತಾದಳು ದ್ರೌಪದಿ ಒಂದು ವರುಷ ||೧|| ಪುಂಡರೀಕಾಕ್ಷ ಪುರುಷೋತ್ತಮ ಹರಿಯು ಬಂಡಿಬೋವನಾದ ಪಾರ್ಥನಿಗೆ ಭೂ - ಮಂಡಲನಾಳುವ ಹರಿಶ್ಚಂದ್ರರಾಯನು ಕೊಂಡವ ಕಾಯಿದನು ಹೊಲೆಯನಾಳಾಗಿ ||೨|| ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಾಗಿಲ ಕಾಯ್ವರು ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಗೋಣ ಮೇಲೆತ್ತುವರು ||೩|| ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ಬೆಂಬಲದಲಿ ನಲಿನಲಿವುತಿಹರು ಬೆಂಬಲತನ ತಪ್ಪಿ ಬಡತನ ಬಂದರೆ ಇಂಬು ನಿನಗಿಲ್ಲ ನಡೆಯೆಂಬರು ||೪|| ಏರುವ ದಂಡಿಗೆ ನೂರಾಳು ಮಂದಿಯು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ

(ಮೋಹನರಾಗ ಛಾಪುತಾಳ) ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ ಕಳ್ಳನೆಂದು ದೂರುತಾರೆ ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯೆ ||ಪ|| ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ ಕೆರೆಯೇನೆ ಹೇಳಮ್ಮಯ್ಯ ಕರೆದು ಅಣ್ಣನ ಕೇಳಮ್ಮ ಉಂಟಾದರೆ ಒರಳಿಗೆ ಕಟ್ಟಮ್ಮಯ್ಯ ||೧|| ಮೀಸಲು ಬೆಣ್ಣೆಯನು ಮೆಲುವುದದು ಎನಗೆ ದೋಷವಲ್ಲವೇನಮ್ಮಯ್ಯ ಆಸೆ ಮಾಡಿದರೆ ದೇವರು ಕಣ್ಣ ಮೋಸದಿ ಕುಕ್ಕೋನಮ್ಮಯ್ಯ ||೨|| ಅಟ್ಟವನೇರಿ ಹಿಡಿವುದು ಅದು ಎನಗೆ ಕಷ್ಟವಲ್ಲವೆ ಹೇಳಮ್ಮಯ್ಯ ನೀ ಕೊಟ್ಟ ಹಾಲು ಕುಡಿಯಲಾರದೆ ನಾನು ಬಟ್ಟಲೊಳಗಿಟ್ಟು ಪೋದೆನೆ ||೩|| ಪುಂಡುತನ ಮಾಡಲು ನಾನು ದೊಡ್ಡ ಗಂಡಸೇನೆ ಹೇಳಮ್ಮಯ್ಯ ಎನ್ನ ಕಂಡವರು ದೂರುತಾರೆ ಗೋಪಮ್ಮ ನಾ ನಿನ್ನ ಕಂದನಲ್ಲವೇನೆ ಅಮ್ಮಯ್ಯ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದುರಿತಗಜ ಪಂಚಾನನ

(ರಾಗ ನಾದನಾಮಕ್ರಿಯೆ ಆದಿತಾಳ) ದುರಿತಗಜ ಪಂಚಾನನ ನರ- ಹರಿಯೆ ದೇವರ ದೇವ ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು ಬಿಸುಡುವನೆ ಕಾಲುಹೊಳೆಗಳ ಗೋವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ||೨|| ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩|| ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ ನಿನ್ನ ಓಲೈಸಲ್ಯಾಕೆ ಗೋವಿಂದ ||೪|| ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫|| ಅರಸು ಮುಟ್ಟಲು ದಾಸಿ ರಂಭೆಯಾದಳು ಗೋವಿಂದ ಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ ||೬|| ಮಾನಾಭಿಮಾನದೊಡೆಯ ರಂಗವಿಠಲ ಜ್ಞಾನಿಗಳರಸನೆ ಕಾಯೋ ಗೋವಿಂದ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಜನೇತ್ರೆ ಶುಭ ಮಂಜುಳಗಾತ್ರೆ

(ರಾಗಶ್ರೀ ಅಟ್ಟತಾಳ) ಕಂಜನೇತ್ರೆ ಶುಭ ಮಂಜುಳಗಾತ್ರೆ ಕುಂಜರದಂತೆ ಗಮನೆ ರಂಜಿತಾಗಿ ನಿರಂಜನಾಂಗಿ ||ಪ|| ಧರೆಯ ಮ್ಯಾಲೆ ಹಿರಿಯಳು ನಾ - ನಿರಲು ಲಜ್ಜೆ ತೊರೆದು ನೀನು ಸರಸವಾಡೋರೆ ಮುರಹರನ ಕರೆದು ಭಾಮಿನಿ ಸುಗುಣೆ ಕಾಮಿನಿ ||೧||| ಪತಿಯ ಪ್ರೀತಿ ನನ್ನ ಮ್ಯಾಲೆ ಅತಿಶಯ ಇರಲು ಜ್ಯೇಷ್ಠ ಸತಿಯಳೇನೇ ನೀನು ನೋಡು ಮತಿಯ ರುಗ್ಮಿಣಿ ಸುಪದ್ಮಗಂಧಿನಿ ||೨|| ಒಂದು ಕಾಲದಲ್ಲಿ ದಾಸಿ- ಯಿಂದ ಪತಿಯು ಸರಸವಾಡಲು ಬಂದಳೇನೇ ಅರಸಿ ಸಮ- ಳೆಂದು ಭಾಮಿನಿ ಸುಗುಣೆ ಕಾಮಿನಿ ||೩|| ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡ ಶ್ರೀಶನ ದಯರಾಶಿ ಇರಲು ದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ ||೪|| ಸಾರೆ ಕೃತ್ಯ ವಾರೆ ಮಾಡಿ ದ್ವಾರಾವತಿಯಿಂದ ಎನ್ನ ಸಾರೆ ಬಂದ ಪ್ರೀತಿಯು [ಅ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣದಿ ತನುಮನಧನಂಗಳೆಲ್ಲವು

ಕರುಣದಿ ತನುಮನಧನಂಗಳೆಲ್ಲವು ನಿನ್ನ ಚರಣಕೊಪ್ಪಿಸಿದ ಬಳಿಕ ಮರಳಿ ಎನ್ನ ಮರುಳು ಮಾಡುವರೆ ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೊ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ

(ಆಹರಿರಾಗ ಅಟ್ಟತಾಳ) ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ ತನು ಹೊರೆಯನೊಲ್ಲೆನವ್ವಾ ||ಪ|| ಹಾರ ಕೊರಳಿಗೆ ಭಾರ ಹುವ್ವಿನ ಭಾರ ಸೈರಿಸಲಾರೆ ನೆ ಮಾರನಯ್ಯನು ಬಾರದಿದ್ದರೆ ಮಾರನಂಬಿಗೆ ಗುರಿಯ ಮಾಡಿ ||೧|| ಎಲ್ಲದೇವರ ವಲ್ಲಭನೆಂದು ಒಲಿದೆ ಮನ ನಿಲ್ಲದೆ ನಿಲ್ಲದೆ ರಂಗ ಪೋದ ಮಧುರೆಗೆ ಬಿಲ್ಲಹಬ್ಬದ ನೆವನ ಮಾಡಿ ||೨|| ಮಂದಾನಿಲವ ಸಹಿಸಲಾಗದು ನೊಂದೆ ಶುಕಪಿಕರವಗಳಿದ ಚಂದ್ರಕಿರಣಗಳಿದಿ ಬೆಂದೆ ಇನ್ನೀ ವೃಂದಾವನವೇಕವನನಗಲಿ ||೩|| ಮುನ್ನ ಆಡಿದ ಮಾತನು ಮರೆತು ಎನ್ನ ವನದೊಳಗೀಡಾಡಿ ವನ್ನಜಾಕ್ಷನು ಬಾರ ಪುರದ ವನ್ನಿತೆಯರನು ಮೆಚ್ಚಿ ಪೋದ ||೪|| ವೊಂಗೊಳಲ ಧ್ವನಿಗೆ ಸಿಲುಕಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉತ್ತಮರ ಸಂಗ ಎನಗಿತ್ತು ಸಲಹೊ

( ಕಾಂಭೋಧಿರಾಗ ಝಂಪೆತಾಳ) ಉತ್ತಮರ ಸಂಗ ಎನಗಿತ್ತು ಸಲಹೊ ||ಪ|| ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ|| ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ ಪರಿಪರಿಯ ಪಾಪಗಳ ಮಾಡಲಾರೆ ಮರಣಜನನಗಳೆರಡು ಪರಿಹರವ ಮಾಡಯ್ಯ ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧|| ಏನ ಪೇಳಲಿ ದೇವ ನಾ ಮಾಡಿದ ಕರ್ಮ ನಾನಾ ವಿಚಿತ್ರವೈ ಶ್ರೀನಿವಾಸ ಹೀನಜನರೊಳಗಾಟ ಶ್ವಾನಾದಿಗಳ ಕೂಟ ಜ್ಞಾನವಂತನ ಮಾಡೊ ಜಾನಕೀರಮಣ ||೨|| ನಿನ್ನ ನಂಬಿದ ಮ್ಯಾಲೆ ಭಯವ್ಯಾತಕೆ ಪನ್ನಗಾಧಿಪಶಯನ ಮನ್ನಿಸಯ್ಯ ಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದ ಎನ್ನೊಡೆಯ ರಂಗವಿಠಲ ಎನ್ನ ದೊರೆಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು