ಶ್ರೀಪಾದರಾಯ

ಭಕ್ತಿ ಬೇಕು ವಿರಕ್ತಿ ಬೇಕು

(ಶಂಕರಾಭರಣರಾಗ ಅದಿತಾಳ) ಭಕ್ತಿ ಬೇಕು ವಿರಕ್ತಿ ಬೇಕು ಸರ್ವ- ಶಕ್ತಿ ಬೇಕು ಮುಕ್ತಿಯ ಬಯಸುವಗೆ ||ಪ|| ಸತಿ ಅನುಕೂಲ ಬೇಕು ಸುತನಲಿ ಗುಣಬೇಕು ಮತಿವಂತನಾಗಬೇಕು ಮತ ಒಂದಾಗಿರಬೇಕು ||೧|| ಜಪದ ಜಾಣುವೆ ಬೇಕು ತಪದ ನೇಮವೆ ಬೇಕು ಉಪವಾಸ ವ್ರತ ಬೇಕು ಉಪಶಾಂತವಾಗಿರಬೇಕು ||೨|| ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಮನೆಗೆ ಗೋವಿಂದ

(ಆರಭಿ ರಾಗ ಅಟ್ಟತಾಳ) ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವ ತೋರೋ ಎನಗೆ ಮುಕುಂದ ನಲಿದಾಡು ಮನದಲಿ ಮಾರಪಿತ ಆನಂದನಂದನ್ನ ಕಂದ ||ಪ|| ಚಾರುತರ ಶರೀರ ಕರುಣಾ- ವಾರಿನಿಧಿ ಭವ ಘೋರನಾಶನ ವಾರಿಜಾಸನ ವಂದ್ಯ ನಿರಜ ಸಾರ ಸದ್ಗುಣ ಹೇ ರಮಾಪತೆ ||ಅ.ಪ|| ನೋಡೋ ದಯದಿಂದೆನ್ನ, ಕರಪದುಮ ಶಿರದಲಿ ನೀಡೋ ಭಕ್ತಪ್ರಸನ್ನ , ನಲಿದಾಡೊ ಮನದಲಿ ಬೇಡಿಕೊಂಬೆನೊ ನಿನ್ನ , ಆನಂದ ಘನ್ನ ಮಾಡದಿರು ಅನುಮಾನವ , ಕೊಂ- ಡಾಡುವೆನು ತವ ಪಾದಮಹಿಮೆಗಳನು ಜೋಡಿಸುವೆ ಕರಗಳನು ಚರಣಕೆ ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು ಕ್ಲೇಶ ಪಡುವುದು ಬಲ್ಲಿ , ಘನ ಯುವತಿಯರ ಸುಖ ಲೇಸು ಎಂಬುದನು ಕೊಲ್ಲಿ , ಆಸೆ ಬಿಡಿಸಿಲ್ಲಿ ಏಸು ಜನುಮದ ದೋಷದಿಂದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲೊಳಗದ್ದು ನೀರೊಳಗದ್ದು

(ಮಧ್ಯಮಾವತಿರಾಗ ಆದಿತಾಳ) ಪಾಲೊಳಗದ್ದು ನೀರೊಳಗದ್ದು ಹರಿ ನಾ ನಿನ್ನ ನಂಬಿದೆನೋ ||ಪ|| ಜಲಜನಾಭ ನೀನಿಟ್ಟ ತೆರದಲಿ ಇರುವೆನಯ್ಯ ||ಅ.ಪ|| ಸುಖದುಃಖದೊಳಗಿಡು ಸುಕೃತ ದುಷ್ಕೃತ ಮಾಡು ನಿಖಿಳ ದುಃಖದೊಳೆನ್ನನೋಲ್ಯಾಡಿಸು ಅಖಿಳ ಖಿಳನೆನಿಸು ಅಭಯ ಭಯವ ಸೂಸು ಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ ||೧|| ಜ್ಞಾನಾಜ್ಞಾನದೊಳಗಿಡು ಮಾನಾಪಮಾನವ ಮಾಡು ಅನಾಥನಾಥರೊಳೆನ್ನ ಅನವರತಾಗಿರಿಸು ದೀನಾದೀನತೆಯೊಳೆನ್ನ ನೀನೀಡ್ಯಾಡು ಶ್ರೀನಾಥ ನಿನ್ನಯ ಮತ ಮತವೇ ಸನ್ಮತವಯ್ಯ ||೨|| ವ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸು ಘನದಾರಿದ್ರ್ಯದಿ ನೂಕು ಸುಖವೆ ಸುರರೊಳಗ್ಹಾಕು ಮುನಿಜನರ ಸಂಗ ಪೊರೆವ ರಂಗವಿಠಲ ನಿನ್ನಯ ಮತ ಮತವೇ ಸನ್ಮತವಯ್ಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಬಲ್ಲಿದನೋ ರಂಗ

(ರಾಗ ಭೈರವಿ ಆದಿತಾಳ) ನೀನೇ ಬಲ್ಲಿದನೋ ರಂಗ ನಿನ್ನ ದಾಸರೇ ಬಲ್ಲಿದರೋ ||ಪ|| ನಾನಾ ತೆರದಿ ನಿಧಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ ||ಅ.ಪ|| ಪರಮಪುರುಷ ಪರಬೊಮ್ಮನೆಂದೆನುತಲಿ ನಿರುತದಿ ಶ್ರುತಿಯು ಕೊಂಡಾಡಲು ನಿನ್ನನು ನರ ಧರ್ಮಜನರಮನೆಯ ಒಳಗೆ ನಿಂ- ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ ||೧|| ಖ್ಯಾತಿಯಿಂದ ಪುರುಹೂತ ಸಹಿತ ಸುರ ವ್ರಾತವು ನಿನ್ನನು ವಾಲೈಸುತಿರೆ ಭೂತಳದೊಳು ಸಂಪ್ರೀತಿಯಿಂದ ಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ ||೨|| ಜಲಜಭವಾಂಡದೊಡೆಯನೆಂದೆನಿಸುವ ಬಲು ಬಲು ದೊಡ್ಡವನಹುದಹುದಾದಡೆ ಒಲಿದು ಸದ್ಗತಿಯೀವೆ ಅನುದಿನದಲಿ ನೀ ಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ ||೩|| ಧುರದೊಳು ವಡೆಯನೆಚ್ಚೊಡೆದ ಭೀಷ್ಮನ ಮರಳಿಪುದೆನುತಲಿ ಚಕ್ರವ ಪಿಡಿಯಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ

(ಸಾರಂಗರಾಗ , ಧ್ರುವತಾಳ) ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ ನಿನ್ನಾಧೀನ ಬಂಧ ಮೋಕ್ಷ ನಿರಯಗಳು ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ ನಿನ್ನಾಧೀನ ಸುಕೃತ ದುಷ್ಕೃತ ಫಲವು ನಿನ್ನಾಧೀನ ವಿಷಯಾತ್ಮ ಬುದ್ಧಿಗಳೆಲ್ಲ ನಿನ್ನಾಧೀನ ಚರಾಚರವೆಂದು ಶ್ರುತಿ ಸಾರುತಲಿವೆ ಇಂತು ಪುಣ್ಯಪಾಪವೆಲ್ಲ ನಿನ್ನ ಲೇಪಿಸವೋ ದೇವ ಎಂತು ಜೀವರನು ಪುಣ್ಯಪಾಪಂಗಳನುಣಿಸುವೆ ಅಂತರಾತ್ಮನೆನ್ನ ಮಹಿಮೆಗೆ ನಮೋ ಎಂಬೆ ಎಂತೋ ಚಿತ್ತವಿನ್ನೆಂತೋ ಪಾಲಿಸೋ ರಂಗವಿಠಲ (ಮಠ್ಯ ತಾಳ) ಮುನ್ನ ನಿನ್ನ ಚರಣಕಮಲವ ನಂಬಿದೆ ಭವಭವಂಗಳಲಿ ಬಂದೆನೊ ಪನ್ನಗೇಶಶಯನ ಶ್ರೀ ಹರೇ ಇನ್ನು ಬಿಡೆನು. ಬಿಡೆನಯ್ಯ ಸಂಪನ್ನ ಎನ್ನ ಗುಣದೋಷವರಸದೆ ಇನ್ನು ಕಾಯೊ ರಂಗವಿಠಲ (ರೂಪಕತಾಳ) ಕರಣಗಳು ಬಿಡದೆ ತಮ್ಮ ತಮ್ಮ ವಿಷಯಂಗಳಿಗೆ ಎಳೆಯುತಲಿವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಿನ್ನ ನಂಬಿದೆ

(ರಾಗಶಂಕರಾಭರಣ ಅಟ್ಟತಾಳ) ನಾರಾಯಣ ನಿನ್ನ ನಂಬಿದೆ , ಲಕ್ಷ್ಮೀ- ರಮಣ ನಿನ್ಹೊರತು ಪೊರೆವ ದೈವವೆಲ್ಲಿದೆ ||ಪ|| ನಾ ಮೀರಿ ದುಷ್ಕರ್ಮವ ಮಾಡಿದೆ ಅಪಾರಮಹಿಮ ದಯಾನಿಧೇ ||ಅ.ಪ|| ನಾನಾ ಯೋನಿಗಳಿಂದ ಬಂದೆನೋ ಮಾನ ತಾಳಲಾರದೆ ಬಲು ನೊಂದೆನೋ ದೀನರಕ್ಷಕ ಎನ್ನ ಗತಿ ಮುಂದೇನೋ ಮಾನದಿಂದಲಿ ರಕ್ಷಿಸುವಂಥ ದೊರೆ ನೀನೋ ||೧|| ದಾಸರ ಮನ ಉಲ್ಲಾಸನೆ ಶ್ರೀಶ ಆಶ್ರಿತ ಜನರ ಪೋಷನೆ ಸಾಸಿರ ಅನಂತ ಮಹಿಮನೆ ಕ್ಲೇಶ ನಾಶಪಡಿಸೋ ಶ್ರೀನಿವಾಸನೆ ||೨|| ರಂಗನಗರ ಉತ್ತುಂಗನೆ ಗಂಗಾಜನಕ ಗರುಡತುರಂಗನೆ ಉ- ತ್ತುಂಗ ಗುಣಗಳಂತರಂಗನೆ ಅ- ನಂಗನ ಪೆತ್ತ ರಂಗವಿಠಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂದನಂದನ ಪಾಹಿ ಗುಣವೃಂದ

(ವಸಂತ ರಾಗ ಅಟ್ಟತಾಳ) ನಂದನಂದನ ಪಾಹಿ ಗುಣವೃಂದ ಸುಂದರರೂಪ ಗೋವಿಂದ ಮುಕುಂದ ||ಪ|| ದಿನಕರಭವಪಾಲ ಕನಕಾಂಕಿತ ಚೇಲ ಜನಕಜಾಲೋಲ ಜನಕಾನುಕೂಲ ||೧|| ಪವನಜಪರಿವಾರ ಯವನವಿದಾರ ನವರತ್ನಹಾರ ನವನೀತಚೋರ ||೨|| ತುಂಗ ವಿಹಂಗತುರಂಗ ದಯಾಪಾಂಗ ರಂಗವಿಠಲ ಭವಭಂಗ ಶುಭಾಂಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧ್ಯಾನವು ಕೃತಯುಗದಿ

ಧ್ಯಾನವು ಕೃತಯುಗದಿ ಯಜನ ಯಜ್ಞವು ತ್ರೇತಾಯುಗದಿ ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು ಕಲಿಯುಗದಿ ಗಾನದಲಿ ಕೇಶವಯೆನಲು ಕೈಗೂಡುವನು ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ

( ಆನಂದಭೈರವಿ ಆದಿತಾಳ) ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ ಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ||ಪ|| ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾ ಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿ ಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿ - ದುಟ್ಟು ಮೇಗಿಲ್ಲದೆ ಬೆಲೆಯಾದ ಪಟ್ಟದುಡುದಾರವಿಟ್ಟು ||೧|| ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿ ಪರಿಪರಿ ಪದಕ ಮುತ್ತು ಸರ ವೈಜಯಂತಿ ಕೊರಳ ಕೌಸ್ತುಭ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತ್ತಿನ ಜಲ್ಲೆ ||೨|| ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳು ಬಗೆಬಗೆ ರತುನಂಗಳ ನಗಗಳನಿಟ್ಟು ನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪು ನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲ ಭಾನುವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡಿ ಸಲಹಯ್ಯ ಭಯನಿವಾರಣನೆ

(ಮುಖಾರಿ ರಾಗ ಝಂಪೆತಾಳ) ದಯಮಾಡಿ ಸಲಹಯ್ಯ ಭಯನಿವಾರಣನೆ ಹಯವದನ ನಿನ್ನ ಚರಣ ನಂಬಿದೆನೊ ಜೀಯ ||ಪ|| ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನು ಎಣಿಸಲಳವಲ್ಲ ಅಷ್ಟಿಷ್ಟು ಎಂದು ಫಣಿಶಾಯಿ ನೀನೆನ್ನ ಅವಗುಣಗಳೆನಿಸದೆ ನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ ||೧|| ಕಂಡ ಕಂಡ ಕಡೆಗೆ ಪೋಪ ಚಂಚಲ ಮನವು ಪಿಂಡ ತಿಂಬಲ್ಲಿ ಬಹು ನಿಷ್ಠ ತಾನು ಭಂಡಾಟದವನೆಂದು ಬಯಲಿಗೆ ತಾರದೆ ಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ ||೨|| ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆ ಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯ ವಾತಜನ ಪರಿಪಾಲ ಶ್ರೀರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು