ಈ ವನದೆಡೆಗಳು ಈ ಲತೆವನಗಳು
(ಭೈರವಿ ರಾಗ )
( ಧ್ರುವತಾಳ)
ಈ ವನದೆಡೆಗಳು ಈ ಲತೆವನಗಳು
ಈನದಿಪುಳಿನಗಳೀ ಶಶಿಶಿಲೆಗಳು
ಸುರತರು ನೆಳಲು ಶುಕಪಿಕರವ
ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ
ಆ ಮುಗುಳುನಗೆಯ ಆ ಸೊಬಗ
ಈಸುರತರು ನೆಳಲೀ ರತಿಯ
ಈ ಸುರತವನರಿದ ಬಾಲೆಯರೆಂತೊ
ಈ ಸುಗುಣಮಯ ರಂಗವಿಠಲನೆ ಕೆಳದಿ ೧
(ಮಠ್ಠ್ಯ ತಾಳ)
ಇನ್ನು ರಂಗನಂಗಸಂಗವು ಎತ್ತಣದು ಗೋಪಿಯರಿಗೆ
ಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನ
ಮಧುರೆಯ ಮಾನಿನಿಯರು ರತಿವಿದಗ್ಧರಾ
ವಧುಗಳು ರಸಿಕ ನಮ್ಮ ರಂಗವಿಠಲ ೨
(ತ್ರಿಪುಟ ತಾಳ)
ಇನ್ಯಾತಕೆ ರಂಗ ಇಲ್ಲಿಗೆ ಬಾಹಾ
ಮಧುರಾಪುರಿಯರಸನಾದ
ಮಲ್ಲರ ಕೊಂದು ಮಾವನ್ನ ಮಡುಹಿದ
ಮಧುರಾಪುರಿಯರಸನಾದ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಈ ವನದೆಡೆಗಳು ಈ ಲತೆವನಗಳು
- Log in to post comments