ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ
(ಆಹರಿರಾಗ ಅಟ್ಟತಾಳ)
ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ
ತನು ಹೊರೆಯನೊಲ್ಲೆನವ್ವಾ ||ಪ||
ಹಾರ ಕೊರಳಿಗೆ ಭಾರ ಹುವ್ವಿನ
ಭಾರ ಸೈರಿಸಲಾರೆ ನೆ
ಮಾರನಯ್ಯನು ಬಾರದಿದ್ದರೆ
ಮಾರನಂಬಿಗೆ ಗುರಿಯ ಮಾಡಿ ||೧||
ಎಲ್ಲದೇವರ ವಲ್ಲಭನೆಂದು
ಒಲಿದೆ ಮನ ನಿಲ್ಲದೆ
ನಿಲ್ಲದೆ ರಂಗ ಪೋದ ಮಧುರೆಗೆ
ಬಿಲ್ಲಹಬ್ಬದ ನೆವನ ಮಾಡಿ ||೨||
ಮಂದಾನಿಲವ ಸಹಿಸಲಾಗದು
ನೊಂದೆ ಶುಕಪಿಕರವಗಳಿದ
ಚಂದ್ರಕಿರಣಗಳಿದಿ ಬೆಂದೆ ಇನ್ನೀ
ವೃಂದಾವನವೇಕವನನಗಲಿ ||೩||
ಮುನ್ನ ಆಡಿದ ಮಾತನು ಮರೆತು
ಎನ್ನ ವನದೊಳಗೀಡಾಡಿ
ವನ್ನಜಾಕ್ಷನು ಬಾರ ಪುರದ
ವನ್ನಿತೆಯರನು ಮೆಚ್ಚಿ ಪೋದ ||೪||
ವೊಂಗೊಳಲ ಧ್ವನಿಗೆ ಸಿಲುಕಿ
ಭಂಗಬಟ್ಟೆನಂಗಜನಿಂದಲಿ
ಪೆಂಗಳಿಗುಚಿತವಲ್ಲ
ರಂಗವಿಠಲನ ತೋರದಿದ್ದಡೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments