ಪಾಲೊಳಗದ್ದು ನೀರೊಳಗದ್ದು
(ಮಧ್ಯಮಾವತಿರಾಗ ಆದಿತಾಳ)
ಪಾಲೊಳಗದ್ದು ನೀರೊಳಗದ್ದು ಹರಿ
ನಾ ನಿನ್ನ ನಂಬಿದೆನೋ ||ಪ||
ಜಲಜನಾಭ ನೀನಿಟ್ಟ ತೆರದಲಿ ಇರುವೆನಯ್ಯ ||ಅ.ಪ||
ಸುಖದುಃಖದೊಳಗಿಡು ಸುಕೃತ ದುಷ್ಕೃತ ಮಾಡು
ನಿಖಿಳ ದುಃಖದೊಳೆನ್ನನೋಲ್ಯಾಡಿಸು
ಅಖಿಳ ಖಿಳನೆನಿಸು ಅಭಯ ಭಯವ ಸೂಸು
ಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ ||೧||
ಜ್ಞಾನಾಜ್ಞಾನದೊಳಗಿಡು ಮಾನಾಪಮಾನವ ಮಾಡು
ಅನಾಥನಾಥರೊಳೆನ್ನ ಅನವರತಾಗಿರಿಸು
ದೀನಾದೀನತೆಯೊಳೆನ್ನ ನೀನೀಡ್ಯಾಡು
ಶ್ರೀನಾಥ ನಿನ್ನಯ ಮತ ಮತವೇ ಸನ್ಮತವಯ್ಯ ||೨||
ವ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸು
ಘನದಾರಿದ್ರ್ಯದಿ ನೂಕು ಸುಖವೆ ಸುರರೊಳಗ್ಹಾಕು
ಮುನಿಜನರ ಸಂಗ ಪೊರೆವ ರಂಗವಿಠಲ
ನಿನ್ನಯ ಮತ ಮತವೇ ಸನ್ಮತವಯ್ಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments