ವಿಜಯದಾಸ

ನೋಡಿದೆ - ಗುರುಗಳ ನೋಡಿದೆ

ನೋಡಿದೆ - ಗುರುಗಳ ನೋಡಿದೆ ನೋಡಿದೆನು ಗುರುರಾಘವೇ೦ದ್ರರ ಮಾಡಿದೆನು ಭಕುತಿಯಲಿ ವ೦ದನೆ ಬೇಡಿದೆನು ಕೊ೦ಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳ ಮೊದಲು ಗಾ೦ಗೇಯ ಶಯ್ಯಜನು ಈ ನದಿಯ ತೀರದಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ- ಲದನು ತಮ್ಮೊಳು ತಿಳಿದು ತವಕದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದಿಗಾಹುದೋ ನಿನ್ನ ದರ್ಶನ

ರಾಗ: ಆರಭಿ ರೂಪಕ ತಾಳ ಎಂದಿಗಾಹುದೋ ನಿನ್ನ ದರ್ಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.|| ಗಾನಲೋಲ ಶ್ರೀವತ್ಸ ಲಾಂಛನ ದಾನವಾಂತಕ ದೀನ ರಕ್ಷಕ ಆರಿಗೆ ಮೊರೆಯಿಡಲೊ ದೇವನೆ ಸಾರಿ ಬಂದು ನೀ ಕಾಯೊ ಬೇಗನೆ ಗಜವ ಪೊರೆದೆಯೊ ಗರುಡ ಗಮನನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆದು ಕೊಂಬ ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸುಕೊಂಬ ಕಳ್ಳದೊರೆಗೆ ಜಯ ಮಂಗಳಂ| ನಿತ್ಯ ಶುಭ ಮಂಗಳಂ| ತನ್ನ ನೋಡೇನೆಂದು ಮುನ್ನೂರು ಗಾವುದ ಬರಲು ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ದರುಶನಕೆ ಬಂದವನಲ್ಲವೊ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳ ನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ|| ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು | ಇಲ್ಲಿಗೇ ಬರುವ ಕಾರಣವಾವುದೋ | ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೀತೆಯ ಭೂಮಿ ಜಾತೆಯ

ಸೀತೆಯ ಭೂಮಿ ಜಾತೆಯ

ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ||

 

ಕ್ಷೀರವಾರಿಧಿಯ ಕುಮಾರಿಯ ತನ್ನ

ಸೇರಿದವರ ಭಯಹಾರೆಯ

ತೋರುವಳು ಮುಕ್ತಿದಾರಿಯ

ಸರ್ವಸಾರ ಸುಂದರ ಶ್ರೀ ನಾರಿಯ ||ಸೀತೆಯ||

 

ವಿಜಯ ವಿಠಲನ ರಾಣಿಯ

ಪಂಕಜ ಮಾಲೆ ಪಿಡಿದ ಪಾಣಿಯ

ವಿಜಯಲಕ್ಷ್ಮಿ ಗಜಗಮನೆಯ

ಸುಜನ ವಂದಿತೆ ಅಳಿವೇಣಿಯ ||ಸೀತೆಯ||

ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ