ವಿಜಯದಾಸ

ರಾಮ ರಾಮ ಎಂಬೆರಡಕ್ಷರ

ರಾಗ - ಧನ್ಯಾಸಿ ತಾಳ - ಆದಿ ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ|| ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||೧|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ| ಕುಂಜರ ರವಿಸುತ ಬಲ್ಲವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಲಿಂಗ ರಾಮಲಿಂಗ ಎನ್ನಂತರಂಗ

ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪ|| ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ಘನ ವಿದ್ಯಾತುರಗೆ ಮಂತ್ರ ಕಲಾಪವೇ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೈಲಾಸವಾಸ ಗೌರೀಶ ಈಶ

ರಚನೆ -ವಿಜಯದಾಸರು ಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ|| ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ

ರಾಗ - ಹಿಂದುಸ್ತಾನಿ ತಾಳ - ಕಾಪಿ ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ ||ಪಲ್ಲವಿ|| ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ ||ಅನು ಪಲ್ಲವಿ|| ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ಪಾದ ತೋರಿಸೊ ತಂದೆ ಮಾಡೆಲೊ ಸತ್ಕೃಪೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ|| ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ಜಲ ಕಾಷ್ಟ ಶೈಲ ಗಗನ ನೆಲ ಪಾವಕ ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ ||ಪಲ್ಲವಿ|| ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನು ||ಅನು|| ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲಿ ವೇಣುಲೋಲನ ಕುಳ್ಳಿರಿಸಿ ಮೋದದಿಂದ ಭಜಿಸುವೆನು ||೧|| ಭಕ್ತಿ ರಸವೆಂಬ ಮುದ್ದು ಮಾಣಿಕ್ಯದ ಹರಿವಾಣದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಸಿಂಹ ಸುಳಾದಿ

ನರಸಿಂಹ ಸುಳಾದಿ ರಚನೆ - ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ ದುರಿತ ಸಂಹಾರ ಮಾಯಾಕಾರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ್ವಂತರಿ ಸುಳಾದಿ

ಧನ್ವಂತರಿ ಸುಳಾದಿ ರಚನೆ - ವಿಜಯದಾಸರು ಧ್ರುವ ತಾಳ ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು ಕಾರ್ಯನಿರ್ಮಲಿನ ಕಾರಣವಾಗುವುದು. ಮಾಯಾ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ದುರ್ಗಾ ಸುಳಾದಿ

ಶ್ರೀ ದುರ್ಗಾ ಸುಳಾದಿ ಧ್ರುವ ತಾಳ ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ