Skip to main content

ಪುರಂದರದಾಸ

Compositions of Purandara dasa

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ
ಆಪನ್ನ ರಕ್ಷಕನೆ ಪರಿಪಾಲಿಸು ಇನ್ನು
ಪನ್ನಂಗಶಯನ ಪುರಂದರವಿಠಲ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅತಳದಲ್ಲಿರಿಸೊ ಸುತಳದಲ್ಲಿರಿಸೊ

ಅತಳದಲ್ಲಿರಿಸೊ ಸುತಳದಲ್ಲಿರಿಸೊ
ತಳಾತಳ ಪಾತಾಳದಲ್ಲಿರಿಸೊ
ಯೋನಿಯೊಳಿರಿಸೊ
ಮತ್ತಾವಯೋನಿಯಲ್ಲಿರಿಸೊ
ನೀನೆಲ್ಲಿರಿಸಿದರೆ ನಾನಲ್ಲಿರದಾದೆನೆ?
ನೀನೆಂತು ನಡೆದು ನಡೆಸಿಕೊಂಬುವೆಯೊ
ನಾನಂತಂತೆ ನಡೆಯುವೆ ಪುರಂದರವಿಠಲ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಪಾಯ ಕೋಟಿಗಳಿಗೆ ಉಪಾಯವೊಂದೆ

ಅಪಾಯ ಕೋಟಿಗಳಿಗೆ ಉಪಾಯವೊಂದೆ, ಉಪಾಯವೊಂದೆ
ಹರಿಭಕ್ತರು ತೋರಿಕೊಟ್ಟ ಉಪಾಯವೊಂದೆ
ಪುರಂದರವಿಠಲನೆಂದು ಭೋರಿಟ್ಟು ಕರೆವ
ಉಪಾಯವೊಂದೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ

ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ ||ಪ||
ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ||ಅ||

ಮಿಂದು ಮನುವನ್ನ ಬಿಡಿಸಿ ಮೇಲುವಸ್ತ್ರವನ್ನು ತೊಡಿಸಿ
ಅಂದವಾದ ಆಭರಣವಿಟ್ಟು ಅರ್ತಿಯಿಂದಲಿ ನೋಡುತ
ಗಂಧ ಕಸ್ತೂರಿ ಪುನುಗು ಪೂಸಿ ಗಮಕದಿಂದ ಹೂವ ಮುಡಿಸಿ
ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ ||೧||

ಪೊಂಬಣ್ಣ ಎಸೆವ ಮೈಯದರೊಳು ಒಲಿವ ಕುಚಕ್ಕೆ ಕೈಯನಿಟ್ಟು
ಕಂಬುಕಂಧರವ ನೋಡಿ ಕಸ್ತೂರಿನಿಟ್ಟು ಮುಟ್ಟಿಸುತ
ಹಂಬಲಿಸಿ ಸತಿಯ ನೋಡಿ ಹಲವು ಬಂಧದಿಂದ ಕೂಡಿ
ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ ||೨||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages