Skip to main content

ಪುರಂದರದಾಸ

Compositions of Purandara dasa

ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ

ಇಂದಿಗೆಂಬ ಚಿಂತೆ  ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ
ಒಡೆಯನುಳ್ಳನಕ ತೊತ್ತಿಗೇತರ ಚಿಂತೆ
ಅಡಿಗಡಿಗೆ ನಮ್ಮನಾಳವ  ಕಾವ ಚಿಂತೆಯವ-
ನೊಡೆಯ ಪುರಂದರವಿಠಲರಾಯನು ಇರುತಿರೆ
ಒಡೆಯನುಳ್ಳ ತೊತ್ತಿಗೇತರ ಚಿಂತೆ  
 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಚ್ಚುತನ ಭಕುತರಿಗೆ ಮನಮೆಚ್ಚದವನು ಪಾಪಿ

ಅಚ್ಚುತನ ಭಕುತರಿಗೆ ಮನಮೆಚ್ಚದವನು ಪಾಪಿ
ಆ ನರನೊಳಾಡಿನೋಡಿ ನುಡಿಯೆ
ಮನುಜವೇಷದ ರಕ್ಕಸನೊಳಾಡಿ ನುಡಿದಂತೆ
ಸಚ್ಚಿದಾನಂದಾತ್ಮ ಪುರಂದರವಿಠಲನು
ಮೆಚ್ಚಿ ಮೆಚ್ಚನು ಕಾಣೋ ಎಂದೆಂದಿಗೂ


 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||

ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೨||

ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೩||

ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ||೪||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅನ್ನಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ

ಅನ್ನಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನಪಾನಾದಿಗಳೀಯೊ ಆ ಚಂಡಾಲ ಸಪ್ತರಿಗೆ
ಅನ್ನಪಾನಾದಿಗಳೀಯೊ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನ್ನರ್ಪಿಸೊ ಪುರಂದರವಿಠಲಗೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages