ಪುರಂದರದಾಸ

Compositions of Purandara dasa

ಹೇಗೆ ಬರೆದೀತು ಪ್ರಾಚೀನದಲ್ಲಿ

ಹೇಗೆ ಬರೆದೀತು ಪ್ರಾಚೀನದಲ್ಲಿ ಹಾಗೆ ಇರಬೇಕು ಸಂಸಾರದಲ್ಲಿ ಪಕ್ಷಿ ಕೂತಿತು ಅಂಗಳದಲ್ಲಿ ಹಾರಿ ಹೋಯಿತು ಆ ಕ್ಷಣದಲ್ಲಿ ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದೋಡಿದರು ಸಂತೆ ನೆರೆದೀತು ನಾನಾ ಪರಿ ತಿರುಗಿ ಆಯಿತು ತಮ್ಮ ತಮ್ಮ ದಾರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ ಎಂಟೆರಡು ಮೂರಾಚಮನಕೆ ಪರಿಹರವೊ ದೃಷ್ಟಿಸಿ ನೋಡಿದರೆ ಥಟ್ಟನೆ ಜಲದಲ್ಲಿ ಐನೂರು ಸ್ನಾನದಿ ಶುದ್ಧ ಮೆಟ್ಟಿದಡೆ ಕುಳಿತ ಸ್ಥಳ ಮೂರುದಿನ ವರ್ಜಿಸಲುಬೇಕು ಉಚ್ಚಿಷ್ಟ ಸೋಂಕಲು ಐದು ನಿರಾಹಾರವಣ್ಣ ಇಷ್ಟು ಮಾಡಿದರೆ ಪಾಪ ಪರಿಹರವಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು

ನೀನೆ ಕರ್ತನು ಅಕರ್ತ ಸಿರಿ ಅಜಭವಾದಿ ಇಂದ್ರಾದ್ಯಮರರು ನೀನೆ ಸ್ವತಂತ್ರ ಅಸ್ವತಂತ್ರರವರು ನೀನೆ ಸರ್ವಾತ್ಮನಾಗಿ ಸ್ವೀಕರಿಸುವಾ ಜ್ಞಾನ ನಿನ್ನಾಧೀನ ಕರ್ಮ ನಿನ್ನಾಧೀನ ಅನಾದಿಕಾಲದಿ ಇರುವ ಜೀವರಿಗೆ ನೀನೆ ಸುಖವನೀವೆ ರುದ್ಧಕರ್ಮಗಳಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಅಕ್ಷರದಿಂದ ವ್ಯಾಹೃತಿಯಿಂದ

ಆರು ಅಕ್ಷರದಿಂದ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ ಈ ಪರಿ ಇಪ್ಪತ್ತುನಾಲ್ಕು ಅಕ್ಷರದಿಂದ ತೋರುತಲಿ ಗಾಯತ್ರಿ ರಚಿಸಿದ ಹರಿಯ ಮೆರೆವುದೈ ಪುರುಷಸೂಕ್ತದಿ ಅನಂತವೇದರಾಶಿ ಧೊರೆಯೆಂದು ಪೊಗಳುವುವೊ ಓಂಕಾರ ಶ್ರೀಕಾರ ಮೆರೆವುದೈವತ್ತೊಂದು ಲಕ್ಷಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿ ಬುದ್ಧಿಪೂರ್ವಕದಿಂದ ಗೆಯ್ಯುತಲಿರಬೇಕು ಮುದ್ದುಮೂರುತಿ ನಮ್ಮ ಪುರಂದರವಿಠಲನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡಾನಿಶದಲ್ಲಿ ಅರ್ಘ್ಯವನು

ಕಂಡಾನಿಶದಲ್ಲಿ ಅರ್ಘ್ಯವನು ಪ್ರಾತರದಿ ಮಂಡಲಾಕಾರ ಮಧ್ಯಾಹ್ನದಲ್ಲಿ ಪುಂಡಗಾರನಾಗಿ ಚರಿಸದಲೆ ಇದ್ದರೆ ಅವಗೆ ಪಂಡಿತ ಶ್ರೀಪುರಂದರವಿಠಲ ಒಲಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು

ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು ಪರದೋಷಿಯಾಗೆ ಪಾಪಗೆಯ್ದು ಪರಪತ್ನಿಯನಯ್ದಿರೆ ಶ್ರೀಪತಿ ಗೋಪಿಚಂದನಲಿಪ್ತಾಂಗಗೆ ಭೂಪತಿ ಪುರಂದರವಿಠಲ ಪಾದವ ತೋರ್ಪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ ಶ್ರೀಕೃಷ್ಣ ಎಂದರೆ ದುರಿತ ನಿವಾರಣ ಎಚ್ಚತ್ತಿರು ಎಲೆ ಮನ ಮನವೆ ಎಚ್ಚತ್ತಿರೆಲೆ ಮನವೆ ಏಕೆ ಬೈಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ ನಾಮದಲಿ ಎಚ್ಚತ್ತಿರೆಲೆ ಮನವೆ ಏಕೆ ಬಯಲ ನೆನೆವೆ ಅಚ್ಯುತನೆ ಆದಿಕೇಶವನೆ ಅನಾಥಬಂಧೋ ಸಲಹೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಸಿವಾಯಿತೇಳಿ ದೇವರ ತೊಳೆಯೆಂಬರು

ಹಸಿವಾಯಿತೇಳಿ ದೇವರ ತೊಳೆಯೆಂಬರು ಹಸನಾಗಿ ಮನದಲ್ಲಿ ಮುಟ್ಟಿ ಪೂಜೆಯ ಮಾಡರು ಹಸಿ ಹಾವಿನ ಬುಟ್ಟಿಯಂತೆ ಮುದ್ದಿಟ್ಟುಕೊಂಡು ವಸುಧೆಯೊಳಗೆ ಉರಗಗಾರನಾಟ ಮಾಡುವರಯ್ಯ ಪರಧನ ಪರಸತಿ ಪರದ್ರವ್ಯಕ್ಕೆರಗೋರು ತ್ವರೆಗಳಾಗಿದ್ದರೆ ದುರಿತ ಪೋಗುವುದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಭೀತಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಬಾಧೆ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾ ಆಪತ್ತು ಬರಲಿ , ಮ-
ದಾಸ ಸಾಹಿತ್ಯ ಪ್ರಕಾರ
ಬರೆದವರು