ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಎದ್ದು ಬರುತಾರೆ ನೋಡೆ

ರಾ ಗ - ಮಧ್ಯಮಾವತಿ: ತಾಳ - ಆದಿತಾಳ ಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ | ಮುದ್ದು ಬೃಂದಾವನ ಮಧ್ಯದೊಳಗಿದ್ದು | ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊಪ್ಪುತೀಗ | ಅ ಪ | ಗಳದೊಳು ಶ್ರೀತುಳಸಿ-ನಳಿನಾಕ್ಷಿ ಮಾಲೆಯು | ಚಲುವ ಮುಖದೊಳು-ಪೊಳೆವೊ ದಂತಗಳಿಂದ | ೧ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ

ರಾ ಗ - ಮಧ್ಯಮಾವ ತಿ: ತಾಳ - ಆದಿತಾಳ ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ | ಬಾರೋ ಮಹಾ ಪ್ರಭುವೆ | ಪ | ಚಾರುಚರಣ ಯುಗ ಸಾರಿ ನಮಿಪೆ ಬೇಗ | ಬಾರೋ ಹೃದಯ ಸುಜಸಾರ ರೂಪವ ತೋರೋ | ಅ ಪ | ಎಲ್ಲಿ ನೋಡಲು ಹರಿ ಅಲ್ಲಿ ಕಾಣುವನೆ೦ದು | ಕ್ಷುಲ್ಲ ಕಂಭವನೊಡೆದ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಗುರು ರಾಘವೇಂದ್ರ

ರಾ ಗ - ಮಧ್ಯಮಾವತಿ : ತಾಳ - ಅಟ್ಟತಾಳ ಬಾರೋ ಗುರು ರಾಘವೇಂದ್ರ | ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ | ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ | ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು | ಅ | ಪ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಳುವಿಕೆಗಿಂತ ತಪವು ಇಲ್ಲ

ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ| ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು ಕಷ್ಟ ಬಂದರೆ ತಾಳು ಕಂಗೆಡದೆ ತಾಳು| ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು|| ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಭಜನೆ ಮಾಡೋ

ಹರಿ ಭಜನೆ ಮಾಡೋ ನಿರಂತರ |ಪ| ಪರಗತಿಗಿದು ನಿರ್ಧಾರ ನೋಡೊ |ಅ.ಪ| ಮೊದಲೆ ತೋರತದೆ ಮಧುರ ವಿಷಯ ಸುಖ ಕಡೆಯಲ್ಲಿ ದುಃಖ ಅನೇಕ| ವೇದಶಾಸ್ತ್ರಗಳನೋದಿದರೇನು ಸಾಧನೆಗಿದು ನಿರ್ಧಾರ| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಹಯವದನನ್ನ|
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಬನ್ನಿರೋ ಜನರು

(ರಾಗ ಪೂರ್ವಿ ಅಟತಾಳ ) ನೋಡ ಬನ್ನಿರೋ ಜನರು, ಶ್ರೀ ಕೃಷ್ಣನ ಜೋಡು ದೀವಟಿಗೆ ಸೇವೆ ||ಪ|| ನೋಡಿಯ ನಮ್ಮಯೆ ಮನದ ಇಷ್ಟಾರ್ಥವ ಬೇಡಿ ಶರಣು ಪೊಗುವ ಪದಯುಗವ ||ಅ|| ಅಂಜಿಕೆ ಪರಿಹರ ಅಸುರ ಭಂಜನನಾದ ಕಂಜಾಕ್ಷ ಶ್ರೀ ಕೃಷ್ಣನಿದಿರೊಳು ನಿಂದು ಸಂಜೆಯ ವೇಳ್ಯದಿ ರಾಜಿಪ ರಜತದ ಪಂಜುಸೇವೆಯ ಕರಾಂಜಲಿಯನೆ ಮುಗಿದು || ನೆರೆದ ಜನರ ಮುಂದೆ ಗುರುರಾಯ ತಾ ಬಂದು ಕರವ ಮುಗಿದು ನಿಂದಿರುತಿಪ್ಪ ಸಮಯದಿ ಪರಿಪರಿ ವಿನಿಯೋಗದವರೆಲ್ಲ ತಾವ್ತಮ್ಮ ಸರತಿ ತಪ್ಪದೆ ಬಂದು ಇರುತಿಪ್ಪ ಸೊಬಗನು || ಪಂಚ ಮುಖದ ಜ್ಯೋತಿ ಬೆಳಗಲು ಎಡಬಲ ಸಂಚರಿಸುವ ಪೊಮ್ಮರಿ ಮೃಗ ಚೌರಿಯ ಕಾಂಚನಮಯದ ಕಟ್ಟಿಗೆ ಕೋಲ ಹಸುವಿನ(/ಹಸುರಿನ?) ಲಾಂಛನವಾದಗೆ ಹಾಕುವ ಪರಿಯ || ಬಟ್ಟಲ ವೀಳ್ಯ ವಿಶಿಷ್ಟ ಲಾಜಾಕ್ಷತೆ ಪುಟ್ಟ ಕದಳಿ ಬೆಲ್ಲ ಕಸ್ತೂರಿಗಳಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿಡೆನು ಬಿಡೆನು ನಿನ್ನ

ಬಿಡೆನು ಬಿಡೆನು ನಿನ್ನ ಚರಣಕಮಲವ ಎನ್ನ |ಪ| ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ|ಅ.ಪ| ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ ನಳಿನೋದ್ಭವ ಬಂದು ಪಾದವ ತೊಳೆಯೆ| ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ ಹರಿಪಾದ ತೀರ್ಥವೆಂದು ಹರ ಧರಿಸಿದನಾಗ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಂಜನೇಯನೆ ಅಮರವಂದಿತ

ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ |ಪ| ಸಂಜೀವಿನಿಯನು ತಂದು ಕಪಿಗಳ ನಂಜುಕಳೆದ ಪ್ರಖ್ಯಾತನೆ |ಅ.ಪ| ಕಾಮನಿಗ್ರಹನೆನಿಸಿ ಸುರರಭಿಮಾನ್ಯ ದೇವತೆ ಎನಿಸಿದೆ ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ| ಸಿಂಧುಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಪಾವನ ಪಾದವೊ ರಂಗಯ್ಯ

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಾರಾಯಣ ನಾರಾಯಣ

ನಾರಾಯಣ ನಾರಾಯಣ ನಾರಾಯಣ ||ಪ|| ನಳಿನೋದರ ನಾರದಪ್ರಿಯ ನಾಮ ಜಯ ನಾರಾಯಣ ನರಕಾಂತಕ||ಅ.ಪ|| ಸುರಸಂಚಯ ಸುಖಕಾರಣ ದಿತಿಜಾಂತಕ ದೀನಶರಣ| ಪರತ ಪರ ಪಾಂಡವಪ್ರಿಯ ಪರಿಪೂರ್ಣ ಜಯ|| ಅಘಕುಲವನದಾವಾನಲ ಅಗಣಿತ ಗುಣಗಣ ನಿರ್ಮಲ| ತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು