ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ

ರಾ ಗ - ಮಧ್ಯಮಾವತಿ: ತಾಳ - ಆದಿತಾಳ ಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ | ಮುದ್ದು ಬೃಂದಾವನ ಮಧ್ಯದೊಳಗಿದ್ದು | ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊಪ್ಪುತೀಗ | ಅ ಪ | ಗಳದೊಳು ಶ್ರೀತುಳಸಿ-ನಳಿನಾಕ್ಷಿ ಮಾಲೆಯು | ಚಲುವ ಮುಖದೊಳು-ಪೊಳೆವೊ ದಂತಗಳಿಂದ | ೧ | ಹೃದಯ ಸದನದಲ್ಲಿ ಪದುಮನಾಭನ ಭಜಿಸಿ | ಮುದಮನದಿಂದ ನಿತ್ಯ-ಸದಮಲ ರೂಪತಾಳಿ | ೨ | ದಾತ ಗುರುಜಗನ್ನಾಥವಿಟ್ಠಲನ್ನ | ಪ್ರೀತಿಯ ಬಡಿಸುತ ದೂತರ ಪೊರೆಯುತ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು