ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ದಾರಿಯ ತೋರೋ ಗೋಪಾಲ

ದಾರಿಯ ತೋರೋ ಗೋಪಾಲ ವಾರಿಜನಾಭ ಶ್ರೀ ವೈಕುಂಠಲೋಲ| ಸಿಕ್ಕಿದೆ ಭವಪಾಶದೊಳಗೆ ಲೆಕ್ಕವಿಲ್ಲದ ಜಂತುಗಳಿಗೆ| ದಿಕ್ಕೊಬ್ಬರಿಲ್ಲವೋ ಎನಗೆ ಕಕ್ಕಸ ಕಳೆದು ನಿನ್ನಯ ಪಾದಗಳಿಗೆ|| ಗಜರಕ್ಷಕನು ನೀನೆಂದು ಅಜರುದ್ರಾದಿಗಳಂದು| ನಿಜವಾಗಿ ಪೇಳಿದರೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕುದುರೆ ಬಂದಿದೆ ಚೆಲುವ

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ| ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ| ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಿಲಸುರರ ಒದೆವ ಕುದುರೆ| ರಂಗನೆಂದರೆ ಸಲಹೊ ಕುದುರೆ ತುಂಗ ಹಯವದನ ಕುದುರೆ|| ಹಲ್ಲಣದೊಳಗೆ ನಿಲ್ಲದು ಕುದುರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಮುದ್ದು ಕೃಷ್ಣನ

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ|| ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ| ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೋಕ ಭರಿತನೋ

ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ| ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬೇಗ ಬಾರೋ

ಬಾರೋ ಬೇಗ ಬಾರೋ ನೀಲಮೇಘ ವರ್ಣ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ| ಇಂದಿರೆ ರಮಣ ಗೋವಿಂದ ಬೇಗ ಬಾರೋ ನಂದನಕಂದ ಮುಕುಂದ ಬೇಗ ಬಾರೋ| ರಂಗ ಉತ್ತುಂಗ ನರಸಿಂಗ ಬೇಗ ಬಾರೋ ಮಂಗಳ ಮಹಿಮ ಶುಭಾಂಗ ಬೇಗ ಬಾರೋ| ರುದ್ಧ ಅನಿರುದ್ಧ ನಿರವದ್ಯ ಬೇಗ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನಂದಮಯಗೆ ಚಿನ್ಮಯಗೆ

ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ|| ವೇದವ ತಂದು ಬೆಟ್ಟವ ಪೊತ್ತು ಧರಣೀಯ ಸಾಧಿಸಿ ಕಂಭದೊಳುದಿಸಿದಗೆ| ಭೂದಾನವ ಬೇಡಿ ನೃಪರ ಸಂಹರಿಸಿದ ಆದಿ ಮೂರುತಿಗೆ ಆರತಿ ಎತ್ತಿರೆ|| ಇಂದುವದನೆ ಸೀತೆ ಸಹಿತಲರಣ್ಯದಿ ನಂದಗೋಕುಲದಲ್ಲಿ ನಲಿದವಗೆ|
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವ ಕಡೆಯಿಂದ ಬಂದೆ

ಆವ ಕಡೆಯಿಂದ ಬಂದೆ ವಾಜಿವದನನೆ ಭಾವಿಸುವ ವಾದಿರಾಜ ಮುನಿಯ ಕಾಣುತ| ಮೇವರೀಸಿ ಮೈವ ತಡವಿ ಸ್ನೇಹದಿಂದಲಿ ಮೇಲು ನೈವೇದ್ಯವನು ಮಿಲಿಯ ಬಂದಿಯಾ| ಮತಿಯ ದೈತ್ಯ ಹೃದಯ ಲೋಭೆ ಮಧ್ವವಲ್ಲಭ ವಲಿಯ ವಾದಿರಾಜ ಮುನಿಗೆ ಸಲಹೋ ಬಂದಿಯಾ| ಇಂತ ಭಕುತಿ ಬೆಲ್ಲಗಡಲೆ ವೈರಾಗ್ಯವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧವಳ ಗಂಗೆಯ ಗಂಗಾಧರ ಮಹಾಲಿಂಗ

ರಾಗ: ಮೋಹನ ತಾಳ: ಝಂಪಾ ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ ಧವನ ತೋರೋ ಗುರುಕುಲೋತ್ತುಂಗಾ ಅರ್ಚಿಸಿದವರಿಗಭೀಷ್ಟವ ಕೊಡುವ ಹೆಚ್ಚಿನ ಅಘಗಳ ತರಿದು ಬಿಸುಟುವಾ ದುಶ್ಚರಿತಗಳೆಲ್ಲ ದೂರದಲ್ಲಿಡುವ ನ ಮ್ಮಚ್ಚುತಗಲ್ಲದ ಅಸುರರ ಬಡಿವಾ ಮಾರನ ಗೆದ್ದ ಮನೋಹರ ಮೂರ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊ

ರಚನೆ - ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ ಶಾಂತನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹನುಮನ ಮನೆಯವರು ನಾವು

ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಅನುಮಾನ ಪಡದೆಲೆ ಸ್ಥಳವ ಕೊಡಿರಿ ಎಮಗೆ ||ಪಲ್ಲವಿ|| ಊರ್ಧ್ವಪುಂಡ್ರವ ನೋಡಿ, ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನು ನೋಡಿ ಇದ್ದುದನಿಲ್ಲೆಂದು ಅಪದ್ಧ ನುಡಿವರಲ್ಲಾ ಮಧ್ವ ಮುನಿಯು ನಮ್ಮ ತಿದ್ದಿರುವುದ ನೋಡಿ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು