ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ

ರಾ ಗ - ಮಧ್ಯಮಾವ ತಿ: ತಾಳ - ಆದಿತಾಳ ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ | ಬಾರೋ ಮಹಾ ಪ್ರಭುವೆ | ಪ | ಚಾರುಚರಣ ಯುಗ ಸಾರಿ ನಮಿಪೆ ಬೇಗ | ಬಾರೋ ಹೃದಯ ಸುಜಸಾರ ರೂಪವ ತೋರೋ | ಅ ಪ | ಎಲ್ಲಿ ನೋಡಲು ಹರಿ ಅಲ್ಲಿ ಕಾಣುವನೆ೦ದು | ಕ್ಷುಲ್ಲ ಕಂಭವನೊಡೆದ | ನಿಲ್ಲದೆ ನರಹರಿ ಚೆಲ್ವಿಕೆ ತೋರಿದ | ಫುಲ್ಲಲೋಚನ ಶಿಶು ಪ್ರಲ್ಹಾದನಾಗಿ ಬಾರೋ | ೧ | ದೋಷ ಕಳೆದು ಸಿಂಹಾಸನವೇರಿದ | ದಾಸ ಕುಲವ ಪೊರೆದ | ಶ್ರೀಶನರ್ಚಕನಾಗಿ ಪೋಷಿಸಿ ಹರಿಮತ | ವ್ಯಾಸ ತ್ರಯವಗೈದ ವೇಷ ಕಳೆದು ಬಾರೋ | ೨ | ಮೂಜಗ ಮಾನಿತ ತೇಜೋವಿರಾಜಿತ | ಮಾಜದ ಮಹಾಮಹಿಮ | ಓಜಗೊಳಿಸಿ ಮತಿ ರಾಜೀವ ಬೋಧದಿ | ಪೂಜೆಗೊಂಬುವ ಗುರುರಾಜ ರೂಪದಿ ಬಾರೋ | ೩ | ಮಂತ್ರ ಸದನದೊಳು ಸಂತಸುಜನರಿಗೆ | ಸಂತೋಷಸಿರಿಗರೆವಾ | ಕಂತುಪಿತನ ಪದ ಸಂತತ ಸೇವಿಪ | ಶಾಂತ ಮೂರುತಿ ಎನ್ನಂತರಂಗದಿ ಬಾರೋ | ೪ | ಈ ಸಮಯದಿ ಎನ್ನಾಶೆ ನಿನ್ನೊಳು ಬಲು | ಸೂಸಿ ಹರಿಯುತಿಹುದು | ಕೂಸಿಗೆ ಜನನಿ ನಿರಾಶೆಗೊಳಿಸುವಳೆ | ದೋಷ ಕಳೆದು ವಿಟ್ಠಲೇಶ ಹೃದಯ ಬಾರೋ | ೫ |
ದಾಸ ಸಾಹಿತ್ಯ ಪ್ರಕಾರ
ಬರೆದವರು