ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಇದೇ ನೋಡಿರೋ ಸುಸ್ನಾನ, ಸದ್ಬೋಧದಲಿಹುದು ಮನ

(ಭೂಪ್ ರಾಗ ದೀಪಚಂದಿ ತಾಳ) ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ಮನ ||ಧ್ರುವ|| ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ ನಾನ್ಯಃ ಪಥವೆಂಬುದು ಓದಿ ಖೂನದೋರುದು ಸುಪಥದ ಹಾದಿ ||೧|| ಜ್ಞಾನ ಭಾಗೀರಥೀ ಸ್ನಾನ ಮಾಡಿ ಮನಮೈಲ ಹೋಯಿತು ನೋಡಿ ಘನಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ ||೨|| ನಿತ್ಯ ಮಹಿಪತಿಗಿದೇ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ ಉತ್ತಮೋತ್ತಮಿದೇ ಸಾಧನ ಹಿತದೋರುತಿದೆ ನಿಧಾನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ

(ಭೈರವಿ ರಾಗ ತ್ರಿತಾಳ) ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ||ಧ್ರುವ|| ಮಾಯಾಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು ಕಾಯಸೌಖ್ಯಕೆ ಬಾಯಿದೆರಿಯಬ್ಯಾಡವೋ ||೧|| ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಬಣ್ಣ ಪರಿಯಲಿನ್ನು ಕಣ್ಣುಗೆಟ್ಟು ಕುರುದನಂತೆ ದಣಿಯಬ್ಯಾಡವೋ ||೨|| ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿ ತೇಜನಂಘ್ರಿ ಬೆರೆದು ಮನಕೂಡವೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಥಾದೇವೋ ತಥಾಗುರೌ

(ಭೈರವಿ ರಾಗ ದೀಪಚಂದಿ ತಾಳ) ಯಥಾದೇವೋ ತಥಾಗುರೌ ಶ್ರುತಿ ಹೇಳಿದ ಸನ್ಮತದಲಿರೋ ||ಧ್ರುವ|| ವೃಥಾ ಅಭಾವ ನೀ ಹಿಡುವರೆ ಸ್ವತಃ ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವುದು ಕಣ್ಣಾರೆ ||೧|| ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಮತ್ತು ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ ||೨|| ಅನುಭವಕಿದರಿಟ್ಟು ಬಾಹುದು ಖೂನ ಹೇಳ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿ ತೇಜವೊಂದೇ ತಾನಾದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ

( ಖಮಾಜ್ ರಾಗ ದಾದರಾ ತಾಳ) ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ||ಧ್ರುವ|| ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲಿಹ ವಸ್ತುಗಾಣದ ಜ್ಞಾನವ್ಯಾತಕೆ ಉದರಕುದಿಯು ಶಾಂತಿಹೊಂದದ ಸಾಧನೆ ಯಾತಕೆ ಬುಧರ ಸೇವೆಗೊದಗದಿಹ ಸ್ವಧನವ್ಯಾತಕೆ ||೧|| ಭಾವ ನೆಲೆಗೊಳ್ಳದಿಹ ಭಕುತಿದ್ಯಾತಕೆ ಕಾವನಯ್ಯನ ಕಾಣದಿಹ ಯುಕುತಿದ್ಯಾತಕೆ ದೇವದೇವನ ಸೇವೆಗಲ್ಲದ ಶಕುತಿದ್ಯಾತಕೆ ಹ್ಯಾವ ಹೆಮ್ಮೆ ಅಳಿಯದಿಹ ವಿರಕ್ತಿ ಯಾತಕೆ ||೨|| ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದಲಾಚರಿಸದಿಹ ಕವಿತ್ವವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತದಾಸೆಯು ಅಳಿಯದಿಹ ಸಿದ್ಧತ್ವವ್ಯಾತಕೆ ||೩|| ನೀತಿಮಾರ್ಗ ಅರಿಯದಿಹ ರೀತಿ ಅದ್ಯಾತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ

(ಚಾಂದ್ ರಾಗ ತೀನ್ ತಾಳ) ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗೆಯೊಳು ದೋರಿಕೊಡುವರು ಅಂತರಂಗವ ||ಧ್ರುವ|| ಹೊಟ್ಟಿಗೆ ಮೊಟ್ಟಿಗೆ ಕೆಟ್ಟು ಹೋಗಬ್ಯಾಡಿರೊ ಹುಟ್ಟಿಬಂದಮ್ಯಾಲೆ ಹರಿನಾಮ ಘಟ್ಟಿಗೊಳ್ಳಿರೊ ಗುಟ್ಟಿಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ ||೧|| ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣುಗೆಟ್ಟು ಹೋಗಿ ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ ||೨|| ಉರ್ವಿಯೊಳು ಬಂದು ನೀವು ಗರ್ವ ಹಿಡಿಯಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟನೋಡಿರೊ ಅರ್ವಪಥವ ಬಿಟ್ಟು ಮರ್ಮಿಗ್ಹೋಗಬ್ಯಾಡಿರೊ ಸರ್ವ ಸಾರಾಯ ಸುಖ ಹರಿಯ ಭಕ್ತಿ ಮಾಡಿರೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ

( ವಸಂತ ರಾಗ ಝಪ್ ತಾಳ) ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ ಚೇತಿಸಿ ಬ್ಯಾರಿಹ ವಸ್ತು ಗಾಣಿ ||ಧ್ರುವ|| ದ್ವೈತ ಎನಲಿಕ್ಕೆ ತಾಂ ಅದದೆ ಅದ್ವೈತ ಅದ್ವೈತ ಎನಲಿಕ್ಕೆ ಅದೆನೆ ತಾ ದ್ವೈತ ||೧|| ಹಿಂದುಮುಂದಾಗಿ ಆಡಿಸುತಿಹ ನಿಜ ಖೂನ ಎಂದಿಗಾದರು ತಿಳಿಯಗುಡದು ಪೂರ್ಣ ||೨|| ಅತಿ ಸೂಕ್ಷ್ಮ ತಿಳುವದಾರಲ್ಲೆ ಬಿದ್ದದ ಮಲಕು ನೇತಿ ನೇತೆಂದು ಶ್ರುತಿ ಇದಕೆ ತಿಳಕೊ ||೩|| ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ ಅದ್ವೈತನೆಂದವನೆ ಸ್ಮಾರ್ತನಲ್ಲ ||೪|| ಸ್ಮಾರ್ತ ವೈಷ್ಣವರ ಈ ಮತ ಗುರುಮಧ್ವ ಮುನಿ ಬಲ್ಲ ಅರ್ತು ಸ್ಥಾಪಿಸುವದು ಮನುಜಗಲ್ಲ ||೫|| ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ ದೋರುವರೆ ತರ್ಕಸ್ಯಾಡುವ ಸೊಲ್ಲ ||೬|| ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಕೊಳ್ಳಿರೋ ಪುಣ್ಯವಂತರು

(ಭೈರವಿ ರಾಗ ದಾದರಾ ತಾಳ) ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರಯ್ಯಾನಂತಗುಣಮಹಿಮೆಯುಳ್ಳ ||ಧ್ರುವ|| ಹಣ್ಣು ಬಂದದೆ ನೋಡ್ಯಾನಂದೋಬ್ರಹ್ಮಪ್ಯಾಟಿಯಿಂದ ಕಣ್ದೆರೆದುಕೊಂಡವರು ಧನ್ಯ ಧನ್ಯರೊ ||೧|| ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ ಚೆನ್ನಾಗಿ ಉನ್ಮನವಾಗಿ ಹಣ್ಣು ||೨|| ಅಣ್ಣಗಳು ಬಂದುಕಣ್ಣುಗೆಟ್ಟು ಹೋಗಬ್ಯಾಡಿ ಸಣ್ಣ ದೊಡ್ಡರೊಳಗಿಹ ಹಣ್ಣು ||೩|| ಉತ್ತಮರುದ್ದೇಶವಾಗಿ ಮತ್ತೆ ಹತ್ತುಬಾರೆ ಬಂದು ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು ||೪|| ಬಿತ್ತಿಬೆಳೆವ ಫಲವಲ್ಲ ಹೊತ್ತು ಮಾರುವದಲ್ಲ ಚಿತ್ತದೊಳಗ್ಹತ್ತಿಲಿಹ ಹಣ್ಣು ||೫|| ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ

( ಭೈರವಿ ರಾಗ ಕೇರವಾ ತಾಳ) ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿಯುದೊಂದೆ ಜ್ಞಾನಾಭ್ಯಾಸ ಮಾಡಿ ||ಧ್ರುವ|| ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರ ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ನ್ಯಾಕೆ ||೧|| ಪ್ರಾಣವಿಲ್ಲದ ಸುಂದರವಾದ ಶರೀರವ್ಯಾಕೆ ಖೂನವಿಲ್ಲದೆ ತನ್ನ ನೂರುಕಾಲ ಬದುಕುವದ್ಯಾಕೆ ಸ್ವಾನುಭವದ ಸುಖ ನೆಲೆಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ ವಸ್ತು ದೊರಕಿಲ್ಲದೆ ನಾ ನೀನೆಂಬುವದ್ಯಾಕೆ ||೨|| ಶ್ರೀಹರಿ ಮಹಿಮೆಯ ಸೋಹ್ಯ ತಿಳಿಯದೆ ದೇಹವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಡಬಾರದು ನೋಡಿ ಕೇಡಿಗರ ಸಂಗ

(ರಾಗ ಮಾಂಡ್ ತಾಳ ಕೇರವಾ ) ಮಾಡಬಾರದು ನೋಡಿ ಕೇಡಿಗರ ಸಂಗ ಬೇಡಿ ಕಾಡದೆ ಬಾಹುದಭಿಮಾನ ಭಂಗ ||ಧ್ರುವ|| ಹೊಟ್ಟಿಯನು ಹೊಕ್ಕು ಕಟ್ಟಿಗೆ ತಂದು ನಿಲ್ಲಿಸುವರು ಗುಟ್ಟಿಲಿಹ ತುಟ್ಟಿಗೆ ತಾಹರು ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳತಾಹರು ನಟ್ಟಸ್ನೇಹದ ಬಳಕಿ ತುಟ್ಟಿಸುವರು ||೧|| ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ ಅಲ್ಲಹುದು ಮಾಡಿ ಗೆಲವಿಸಿಕೊಂಬರು ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ ||೨|| ಏನನಾದರೆ ಕೊಟ್ಟು ಹೀನಮನುಜರ ಸಂಗ ಮನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗ ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ ನೆನೆವರ ನೆರೆಲಿದ್ದು ಸುಖಿಸುವುದು ಲೇಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು

(ಮಾಂಡ್ ರಾಗ ಕೇರವಾ ತಾಳ) ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವರು ||ಧ್ರುವ|| ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು ||೧|| ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವವನೆ ವೈಷ್ಣವನು ||೨|| ಹರಿ ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು ||೩|| ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವನೇ ವೈಷ್ಣವನು ||೪|| ಪರದೆ ಇಲ್ಲದಪಾರಬ್ರಹ್ಮಸ್ವರೂಪವನು ಗುರುತ ಕಂಡವನೇ ಪರಮ ವೈಷ್ಣವನು ||೫|| ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟೆ ಅರಿತು ಬೆರೆದವನೆ ಪರಮ ವೈಷ್ಣವನು ||೬|| ಮೂಲಮೂರುತಿಗಾಗಿ ಮೇಲ್ಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು