ಇದೇ ನೋಡಿರೋ ಸುಸ್ನಾನ, ಸದ್ಬೋಧದಲಿಹುದು ಮನ

ಇದೇ ನೋಡಿರೋ ಸುಸ್ನಾನ, ಸದ್ಬೋಧದಲಿಹುದು ಮನ

(ಭೂಪ್ ರಾಗ ದೀಪಚಂದಿ ತಾಳ) ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ಮನ ||ಧ್ರುವ|| ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ ನಾನ್ಯಃ ಪಥವೆಂಬುದು ಓದಿ ಖೂನದೋರುದು ಸುಪಥದ ಹಾದಿ ||೧|| ಜ್ಞಾನ ಭಾಗೀರಥೀ ಸ್ನಾನ ಮಾಡಿ ಮನಮೈಲ ಹೋಯಿತು ನೋಡಿ ಘನಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ ||೨|| ನಿತ್ಯ ಮಹಿಪತಿಗಿದೇ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ ಉತ್ತಮೋತ್ತಮಿದೇ ಸಾಧನ ಹಿತದೋರುತಿದೆ ನಿಧಾನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು