ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ

(ಭೈರವಿರಾಗ ದಾದರಾ ತಾಳ) ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ|| ಮೂಲದಲಿ ಮನಮೈಲ ತೊಳಿಯದೆ ಜಲಮುಣುಗುವದಿದ್ಯಾತಕೆ ಬಲುವಭಾವದ ಕೀಲ ತಿಳಿಯದೆ ಮಾಲೆಜಪ ಕೈಯಲ್ಯಾತಕೆ ನೆಲೆಯುಗೊಳ್ಳದೆ ಮೂಲಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ ಹಲವು ಜನ್ಮದ ಹೊಲಿಯು ತೊಳಿಯದೆ ಶೀಲ ಸ್ವಯಂಪಾಕ್ಯಾತಕೆ ||೧|| ಹರಿಯ ಚರಣಾಂಬುಜವನರಿಯದೆ ಬರಿಯ ಮಾತಿನ್ಯಾತಕೆ ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ ತರಣೋಪಾಯದ ಸ್ಮರಣೆ ಇಲ್ಲದೆ ತರ್ಕಭೇದಗಳ್ಯಾತಕೆ ||೨|| ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯದಾ ನುಡಿ ಹಿಡಿರೋ ಮನುಜರು

(ಕಾಫೀ ರಾಗ ತೀನ್ ತಾಳ) ಸತ್ಯದಾ ನುಡಿ ಹಿಡಿರೋ ಮನುಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ||ಪ|| ಸತ್ಯದಾ ನಡಿಗಿನ್ನು ಸತ್ಯ ನುಡಿಯಲುಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ತಾಡಿಸುವಂತೆ ||ಅ.ಪ|| ಕೈಯಾರ ಕೊಂಡಿನ್ನು ಬಾಯಾರಬ್ಯಾಡಿರೊ ಮೈಯೊಳಗಿಹ ಕಾವನಯ್ಯನ ಮರಿಯಬ್ಯಾಡಿ ||೧|| ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ ||೨|| ಆಶೆಯ ಕೊಟ್ಟು ನಿರಾಶೆಯ ಮಾಡಲಿಬ್ಯಾಡಿ ಮೋಸ ಮುರುಕದಿಂದ ಘಾಸಿ ಮಾಡಲುಬ್ಯಾಡಿ ||೩|| ಘಟ್ಟಿಸಿ ಒಬ್ಬರ ಹೊಟ್ಟೆ ಹೊರಿಯಬ್ಯಾಡಿ ಸಿಟ್ಟಿಲಿ ನೆಂಟರ ತುಟ್ಟಿಸಿ ಬಿಡಬ್ಯಾಡಿ ||೪|| ಗುಟ್ಟುನೊಳಿಹ ಮಾತು ತುಟ್ಟಿಗಿ ತರಬ್ಯಾಡಿ ಹೊಟ್ಟಿಲೆ ಹಡೆದವರ ಕಟ್ಟಿಗೆ ತರಬ್ಯಾಡಿ ||೫|| ಲೆತ್ತಪಗಡಿ ಆಡಿ ಹೊತ್ತುಗಳೆಯಲಿಬ್ಯಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ನಾನೊಂದು ಕೌತುಕವ

( ದುರ್ಗಾ ರಾಗ ದಾದರಾ ತಾಳ) ಕಂಡೆ ನಾನೊಂದು ಕೌತುಕವ ||ಧ್ರುವ || ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ- ಪ್ರದಕ್ಷಿಣೆ ಮಾಡುದು ಕಂಡೆ ||೧|| ಇರುಹೆ ವಿಷ್ಣುನ ನುಂಗಿದ ಕಂಡೆ ನರಿಯು ರಾಜ್ಯನಾಳುದ ಕಂಡೆ ಅರಿಯು ಮರಿಯ ನುಂಗಿದ ಕಂಡೆ ಕುರಿಯಿಂದ ಪರಲೋಕಯೆಯ್ದಿದ ಕಂಡೆ ||೨|| ಇಲಿಯು ಯುಕ್ತಿಯದೋರುದು ಕಂಡೆ ಹುಲಿಯು ಭಕ್ತಿಯ ಮಾಡುದು ಕಂಡೆ ಇಳೆಯೊಳು ಮಹಿಪತಿ ಕಳೇವರದೊಳಿನ್ನು ಮುಕ್ತಿಸಾಧನದೊಂದು ಬೆಡಗನು ಕಂಡೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೈಶ್ವದೇವೆಂಬುದು ಇದೇ ನೋಡಿ

(ಕಾಫೀ ರಾಗ ತೀನ್ ತಾಳ ) ವೈಶ್ವದೇವೆಂಬುದು ಇದೇ ನೋಡಿ ಶ್ವಾಸೋಚ್ಛಾಸವೆಂಬುದು ಪುಟಮಾಡಿ ||ಧ್ರುವ|| ಬ್ರಹ್ಮಜ್ಞಾನವೆಂಬುದು ಕುಂಡಮಾಡಿ ಕರ್ಮಕಾಷ್ಠದಗ್ನಿ ಪುಟಗೂಡಿ ನಾಮ ದಿವ್ಯ ನೆನಹು ತಾ ಊದಿಬಿಡಿ ಕಾಮಕ್ರೋಧವೆಂಬ ಧೂಮ್ರ ಹೋಗಾಡಿ ||೧|| ಜ್ಞಾನವೈರಾಗ್ಯೆಂಬುದು ಅಗ್ನಿ , ನಾ- ನೀನೆಂಬುದು ಆಹುತಿ ಪೂರ್ಣ ನೀಡಿ ಭಿನ್ನ ಭೇದ ಭೂತಬಲಿ ಮಾಡಿ ಮನಮೈಲಿಗೆ ತೊಳೆದು ಶುದ್ಧಮಾಡಿ ||೨|| ವೈಶ್ವದೇವ ಮಹಿಪತಿಗಿದೇ ನೋಡಿ ವಿಶ್ವದೊಳಿದೇ ನಿಜ ನಿತ್ಯ ಮಾಡಿ ಹಸನಾದ ಸತ್ಕರ್ಮ ಇದೇ ನೋಡಿ ಲೇಸು ಲೇಸಾಯಿತು ಪುಣ್ಯಗೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ

(ಭೈರವಿರಾಗ ದಾದರಾ ತಾಳ) ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿ ಶೀಲವ ತಿಳಿದು ನಿಜವಿರಕ್ತತನದಲಿ ಬಾಳಿ ||ಧ್ರುವ|| ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ರೋಮರೋಮವನು ಕೋಮಲವಾಗಿ ನಿರ್ಮಲದಲಿ ನಡಿಬೇಕು ಶಮೆದಮೆಯಲಿ ತಾ ಕ್ಷಮೆಯನು ಪಡೆದು ಸಮದೃಷ್ಟಿಗುಡಬೇಕು ||೧|| ನಿತ್ಯನಿತ್ಯ ವಿವೇಕವ ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸುವೃತ್ತಿಯ ಮಾಡಿ ಸತ್ಯದಲಿ ನುಡಿಯಬೇಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು ||೨|| ಸೋಹ್ಯ ಸೊನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನಿ ಮುರಿಯಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುತ್ತು ಕೊಳ್ಳಿರೋ ಉತ್ತಮರೆಲ್ಲ

(ಬಿಹಾಗ್ ರಾಗ ದಾದರಾ ತಾಳ) ಮುತ್ತು ಕೊಳ್ಳಿರೋ ಉತ್ತಮರೆಲ್ಲ ||ಧ್ರುವ|| ಜ್ಞಾನಸಮುದ್ರದಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳೆಯಾದ ಮುತ್ತು ಕೊಳ್ಳಿರೋ ||೧|| ಪಿಂಡಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ ||೨|| ಸಾಧು ಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದ ನೀವು ಮುತ್ತು ಕೊಳ್ಳಿರೋ ||೩|| ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ ||೪|| ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹಪರವಸ್ತು ಮುತ್ತು ಕೊಳ್ಳಿರೋ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇವೆ ಪೂಜೆಯು ನೋಡಿ ಹೃದಯದಲಿ ಒಡಗೂಡಿ

(ಭೈರವಿ ರಾಗ ದೀಪಚಂದಿತಾಳ ) ಇದೇವೆ ಪೂಜೆಯು ನೋಡಿ , ಹೃದಯದಲಿ ಒಡಗೂಡಿ ||ಧ್ರುವ || ಮೂರ್ತಿ ಎಂಬುದೇ ಅಮೂರ್ತಿ ನಾಮಸ್ವರೂಪ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ ||೧|| ನಿತ್ಯ ನಿರ್ಗುಣ ನಿರ್ವಿಕಲ್ಪ ಸತ್ಯ ಸದ್ಗುರು ಸ್ವರೂಪ ನಿತ್ಯನಿತ್ಯ ನಿತ್ಯರ್ಥ ಸುದೀಪ ತತ್ವಜ್ಞಾನ ಮನ ಮಂಟಪ ||೨|| ಸ್ವಾನುಭವ ಸ್ವಾದೋದಕ ಜ್ಞಾನಭಾಗೀರಥಿ ಅಭಿಷೇಕ ಮೌನಮೌನ್ಯ ವಸ್ತ್ರಾಮೋಲಿಕಾ ಧ್ಯಾನವೆಂಬುದೇ ಸೇವೆ ಅನೇಕ ||೩|| ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪ ಸದ್ವಾಸನ್ಯಾಯಿತು ಧೂಪಧೀಪ ಸದ್ಭಾವನೆ ನೈವೇದ್ಯಮೋಪ ||೪|| ಫಲತಾಂಬೂಲವೆ ಸದ್ಭಕ್ತಿ ಮೂಲಭಿಭಾವನೆ ಮಂಗಳಾರ್ತಿ ಬಾಲಕ ಮಹಿಪತಿ ನಿಜಪೂಜಿಸ್ಥಿತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು

(ತೋಡಿ ರಾಗ ತೀನ್ ತಾಳ) ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮಸುಖವು ||ಧ್ರುವ|| ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ ನುಂಗಿತು ಮೇಲುವರಿಯಲಿ ಬಂದು ಜಲದೊಳಗಿನ ಕಪ್ಪೆ ಮೂಲಸರ್ಪದ ಹೆಡೆಯ ನುಂಗಿದುದು ನೋಡಿ ||೧|| ಬಾಲ ಇಲ್ಲದ ಇಲಿಯು ಜಾಲ ಹಾಕುತ ಬಂದು ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು ನಾಲಿಗಿಲ್ಲದ ಮೊಲವು ನಿಲುಕಿ ಜಪ್ಪವ ಹಾಕಿ ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ ||೨|| ದಿವ್ಯಯೋಗದ ಮಾತು ಕಿವಿ ಇಲ್ಲದವ ಕೇಳಿ ಕಣ್ಣಿಲ್ಲದವ ಕಂಡು ಬೆರಗಾದನು ಕೌತುಕವ ಕಂಡು ಮಹಿಪತಿಯು ತನ್ನೊಳು ತಾನು ತ್ರಾಹಿ ತ್ರಾಹಿಯೆಂದ ಮನದೊಳು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನೋಡಿ ಸ್ವತಃ ಸಿದ್ಧ ಮಡಿ

( ರಾಗ -ದುರ್ಗಾ ತಾಳ-ದಾದರಾ ) ಇದೇ ನೋಡಿ ಸ್ವತಃ ಸಿದ್ಧ ಮಡಿ ಸದಾ ಸರ್ವದಾ ಇದೇ ಮಾಡಿ ||ಧ್ರುವ|| ಅರಹು ಎಂಬುದೆ ಮಡಿ ಉಡಿ ಮರಹು ಮೈಲಗಿಯ ಮುಟ್ಟಬ್ಯಾಡಿ ಗುರುಸ್ಮರಣೆ ಎಂಬ ನಿಷ್ಠೆಯೊಳುಗೂಡಿ ಪರಬ್ರಹ್ಮ ಸ್ವರೂಪವ ನೋಡಿ ||೧|| ಕಾಮಕ್ರೋಧದ ಸ್ಪರ್ಶವ ಬ್ಯಾಡಿ ನೇಮ ನಿತ್ಯ ಇವನೇ ಮಾಡಿ ಶಮದಮೆಂಬುದು ಕೈಗೂಡಿ ಪ್ರೇಮಭಾವ ಭಕ್ತಿಯ ಮಾಡಿ ||೨|| ಮಿಥ್ಯಾ ಬೂಟಕಿ ಮಡಿ ಮಾಡಬೇಡಿ ಚಿತ್ತಚಿದ್ಘನ ಸಮರಸ ನೋಡಿ ನಿತ್ಯ ಮಹಿಪತಿಗಿದೆ ಮಡಿ ನೋಡಿ ಸತ್ಯ ಸನಾತನ ಪದ ಕೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನೋಡಿರೋ ಸಂಧ್ಯಾನ , ಸದಾ ಆತ್ಮಾನುಸಂಧಾನ

(ಹಂಸಧ್ವನಿ ರಾಗ ಏಕತಾಳ) ಇದೇ ನೋಡಿರೋ ಸಂಧ್ಯಾನ ಸದಾ ಆತ್ಮಾನುಸಂಧಾನ ||ಧ್ರುವ|| ತಿಳಿಯದೆನಗೆ ತ್ರಿಕಾಲ ಹೊಳವುತಿಹುದು ಸೂರ್ಯ ಅಚಲಾ ಕಾಳವ್ಯಾಳ್ಯಲ್ಲಿದಕ ಸಮೂಲಾ ಇಳೆಯೊಳಾಯಿತು ಧರ್ಮಾನುಕೂಲಾ ||೧|| ಚಂಚಲೆಂಬುದೆ ಆಚಮನ ಮುಂಚೆ ಸಂಧ್ಯಾನಕಿದೆ ಸಾಧನ ಸಂಚಿತ ಪ್ರಾಲಬ್ಧಕ್ರಿಯಮಾಣಾ ವಂಚನಿಲ್ಲದ್ದಾಯಿತು ಅರ್ಘ್ಯದಾನ ||೨|| ಪರಮೇಷ್ಠಿ ಪರಬ್ರಹ್ಮಋಷಿಃ ಅರಿತು ಪ್ರಣಮ್ಯ ಸಾಧಿಸಿ ತಿರುಗಿ ನೋಡಿ ಘನ ಸ್ಮರಿಸಿ ಕರಗಿ ಹೋಯಿತು ಪಾಪದ ರಾಶಿ ||೩|| ಆ ಜಪವೆ ಗಾಯತ್ರಿ ಮಂತ್ರ ಬೀಜಾಕ್ಷರವಿದು ಪವಿತ್ರ ರಾಜಿಸುತಿಹುದು ಸರ್ವಾಂತರಾ ನಿಜಗುಹ್ಯ ಋಷಿಮುನಿ ಗೋತ್ರ ||೪|| ಸದೋದಿತ ಗುರುಬೋಧ ಪೂರ್ಣ ಇದಕಿಲ್ಲ ಉದಯಾಸ್ತಮಾನ ಇದೇ ಮಹಿಪತಿ ಸಂಧ್ಯಾನ ಸದಾ ನಿತ್ಯಾನುಸಂಧಾನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು