ಮಾಡಬಾರದು ನೋಡಿ ಕೇಡಿಗರ ಸಂಗ

ಮಾಡಬಾರದು ನೋಡಿ ಕೇಡಿಗರ ಸಂಗ

(ರಾಗ ಮಾಂಡ್ ತಾಳ ಕೇರವಾ ) ಮಾಡಬಾರದು ನೋಡಿ ಕೇಡಿಗರ ಸಂಗ ಬೇಡಿ ಕಾಡದೆ ಬಾಹುದಭಿಮಾನ ಭಂಗ ||ಧ್ರುವ|| ಹೊಟ್ಟಿಯನು ಹೊಕ್ಕು ಕಟ್ಟಿಗೆ ತಂದು ನಿಲ್ಲಿಸುವರು ಗುಟ್ಟಿಲಿಹ ತುಟ್ಟಿಗೆ ತಾಹರು ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳತಾಹರು ನಟ್ಟಸ್ನೇಹದ ಬಳಕಿ ತುಟ್ಟಿಸುವರು ||೧|| ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ ಅಲ್ಲಹುದು ಮಾಡಿ ಗೆಲವಿಸಿಕೊಂಬರು ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ ||೨|| ಏನನಾದರೆ ಕೊಟ್ಟು ಹೀನಮನುಜರ ಸಂಗ ಮನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗ ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ ನೆನೆವರ ನೆರೆಲಿದ್ದು ಸುಖಿಸುವುದು ಲೇಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು