ಹಣ್ಣು ಕೊಳ್ಳಿರೋ ಪುಣ್ಯವಂತರು

ಹಣ್ಣು ಕೊಳ್ಳಿರೋ ಪುಣ್ಯವಂತರು

(ಭೈರವಿ ರಾಗ ದಾದರಾ ತಾಳ) ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರಯ್ಯಾನಂತಗುಣಮಹಿಮೆಯುಳ್ಳ ||ಧ್ರುವ|| ಹಣ್ಣು ಬಂದದೆ ನೋಡ್ಯಾನಂದೋಬ್ರಹ್ಮಪ್ಯಾಟಿಯಿಂದ ಕಣ್ದೆರೆದುಕೊಂಡವರು ಧನ್ಯ ಧನ್ಯರೊ ||೧|| ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ ಚೆನ್ನಾಗಿ ಉನ್ಮನವಾಗಿ ಹಣ್ಣು ||೨|| ಅಣ್ಣಗಳು ಬಂದುಕಣ್ಣುಗೆಟ್ಟು ಹೋಗಬ್ಯಾಡಿ ಸಣ್ಣ ದೊಡ್ಡರೊಳಗಿಹ ಹಣ್ಣು ||೩|| ಉತ್ತಮರುದ್ದೇಶವಾಗಿ ಮತ್ತೆ ಹತ್ತುಬಾರೆ ಬಂದು ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು ||೪|| ಬಿತ್ತಿಬೆಳೆವ ಫಲವಲ್ಲ ಹೊತ್ತು ಮಾರುವದಲ್ಲ ಚಿತ್ತದೊಳಗ್ಹತ್ತಿಲಿಹ ಹಣ್ಣು ||೫|| ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ ||೬|| ಹಣ್ಣು ಕೊಂಡ ಮಹಿಪತಿಯು ಪುಣ್ಯಪೂರ್ವಾರ್ಜಿತ ತಾ ಧನ್ಯ ಧನ್ಯನಾದ ಗುರುಕೃಪೆಯಿಂದ ಕಾಣಿರೋ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು