ಹನುಮನ ಮನೆಯವರು ನಾವು

ಹನುಮನ ಮನೆಯವರು ನಾವು

ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಅನುಮಾನ ಪಡದೆಲೆ ಸ್ಥಳವ ಕೊಡಿರಿ ಎಮಗೆ ||ಪಲ್ಲವಿ|| ಊರ್ಧ್ವಪುಂಡ್ರವ ನೋಡಿ, ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನು ನೋಡಿ ಇದ್ದುದನಿಲ್ಲೆಂದು ಅಪದ್ಧ ನುಡಿವರಲ್ಲಾ ಮಧ್ವ ಮುನಿಯು ನಮ್ಮ ತಿದ್ದಿರುವುದ ನೋಡಿ ||೧|| ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು ಉತ್ತಮ ನೀಚರೆಂಬುವ ಭೇದ ಬಲ್ಲೆವು ಸುತ್ತಲು ಕಂಡುಕಾಣದಿಹ ಎಲ್ಲಕ್ಕೂ ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||೨|| ಹಲವು ಲೋಕಗಳುಂಟೆಂಬುದ ಬಲ್ಲೆವು ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು ಅಲವಬೋಧರು ನಮ್ಮ ಕಳುಹಿದರಿಲ್ಲಿಗೆ ತಿಳಿಸಿ ‘ಪ್ರಸನ್ನ’ ಶ್ರೀಹರಿಗೆ ವಿಚಾರವ ||೩|| ***
ದಾಸ ಸಾಹಿತ್ಯ ಪ್ರಕಾರ
ಬರೆದವರು