ಘಟಿಕಾಚಲದಿ ನಿಂತ ಶ್ರೀ ಹನುಮಂತ

ಘಟಿಕಾಚಲದಿ ನಿಂತ ಶ್ರೀ ಹನುಮಂತ

ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ|| ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧|| ಸರಸಿಜ ಭವಗೋಸ್ಕರ ಕಲ್ಮಷ ದೂರ ವರಚಕ್ರತೀರ್ಥ ಸರ ಮೆರವಾಚಲದಿ ನಿತ್ಯ ನರಹರಿಗೆದುರಾಗಿ ಸ್ಥಿರ ಯೋಗಾಸನದಿ ಕರೆದು ವರಗಳ ಕೊಡುತ ||೨|| ಶಂಖ ಚಕ್ರವ ಧರಿಸಿ ಭಕ್ತರ ಮನ ಭಂಗವ ಪರಿಹರಿಸಿ ಪಂಕಜನಾಭ ಶ್ರೀ ಪುರಂದರ ವಿಠಲನ ಬಿಂಕದ ಸೇವಕ ಸಂಕಟ ಕಳೆಯುತ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು