ಯದುಕುಲನಂದನನ ನೋಡುವ ಬಾರೆ

ಯದುಕುಲನಂದನನ ನೋಡುವ ಬಾರೆ

(ರಾಗ ಶ್ರೀ ಆದಿತಾಳ ) ಯದುಕುಲನಂದನನ ನೋಡುವ ಬಾರೆ ಲಲಿತಾಂಗಿ ||ಪ|| ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ ||ಅ|| ಬಿಗಿದುಟ್ಟು ಕನಕಾಂಬರ ಕಾಂಚನದವನ , ನಗುಮುಖ ಶ್ರೀಧರನ ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ || ಸಣ್ಣ ಪೊಂಗೊಳನೂದುತ ಕಣ್ಣ ಸನ್ನೆಯ ಮಾಡುತ ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ || ಮಂದಹಾಸಮುಖಾಂಬುಜ ಪೊಂದಿದಂಥ ಗಂಧಕಸ್ತೂರಿತಿಲಕ ಬಂದ ನಮ್ಮ ಪುರಂದರವಿಠಲ ಇಂದಿರೇಶಯದುನಂದನನ ನೋಡುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು