ಬಾರೊ ಬ್ರಹ್ಮಾದಿವಂದ್ಯ

ಬಾರೊ ಬ್ರಹ್ಮಾದಿವಂದ್ಯ

(ರಾಗ ಮಧ್ಯಮಾವತಿ ಅತತಾಳ) ಬಾರೊ ಬ್ರಹ್ಮಾದಿವಂದ್ಯ ||ಪ|| ಬಾರೊ ವಸುದೇವನಂದನ ||ಅ|| ಧಿಗಿಧಿಗಿ ನೀ ಕುಣಿದಾಡುತ ಬಾರೊ ದೀನರಕ್ಷಕನೆ , ಚೆಂದದಿ ಜಗದೀಶ ನೀ ಕುಣಿದಾಡುತ ಬಾರೊ ಚೆನ್ನಕೇಶವನೆ || ಗೊಲ್ಲರ ಮನೆಗೆ ಪೋಗಲುಬೇಡ ಗೋವಿಂದ ಕೇಳೊ, ನಿನಗೆ ಹಾಲು ಬೆಣ್ಣೆ ಮೊಸರನಿಕ್ಕುವೆ ಉಣ್ಣಬಾರೊ || ದೊಡ್ಡ ದೊಡ್ಡ ಮುತ್ತಿನ ಹಾರ ಹಾಕಿ ನೋಡುವೆನೊ , ನೀನು ದೊಡ್ಡಪುರದ ದ್ವಾರಕಾವಾಸ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು