ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ

(ರಾಗ ಭೂಪಾಳಿ ಅಟತಾಳ) ಎಂದಂಬುಜಮುಖಿ ಗೋಪಿ ಮಗನ ನಡೆಸಿದಳಾನೆ ||ಪ|| ಕ್ಷೀರಸಾಗರದಲ್ಲಿ ವಾಸವಾಗಿ ಮಲಗಿರುವಾನೆ ||ಅ|| ಅಸುರರನು ಸದೆದಾನೆ, ಆಸೆ ಕೊಟ್ಟಳಿದಾನೆ ಶಿಶುವ ಪಿಡಿದಂಬರಕೆ ಸಾಗಿಪಾನೆ ಎಸೆದು ತೃಣಾವರ್ತನ ಭರದಿ ಮುರಿದಾನೆ ಶಿಶುಕೃಷ್ಣ ತುರುಗಳನು ಕಾಯಿದಾನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಜೀವವಿದ್ದು ಫಲವೇನು

(ಉದಯರಾಗ ಝಂಪೆತಾಳ ) ಈ ಜೀವವಿದ್ದು ಫಲವೇನು ಚೆಲುವ ರಾಜೀವಲೋಚನನ ನೆನೆಯದ ಪಾಪಿತನುವಿನಲಿ ||ಪ|| ಅರುಣವುದಯದಲೆದ್ದು ಹರಿಯ ಸ್ಮರಣೆಯ ಮಾಡಿ ಗುರುಹಿರಿಯರ ಮನದಲ್ಲಿ ನೆನೆದು ನೆನೆದು ಪರಮಸುಖಿಯಾಗಿ ನದಿಯೊಳು ಮಿಂದು ರವಿ- ಗರ್ಘ್ಯವನೆರೆಯದ ಪಾಪಿತನುವಿನಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನಾದರು ನಿನಗೆ ನೀನು ತಿಳಿಯದೆ ಇಂಥ

(ರಾಗ ಪುನ್ನಾಗವರಾಳಿ ಝಂಪೆ ತಾಳ) ಇನ್ನಾದರು ನಿನಗೆ ನೀನು ತಿಳಿಯದೆ ಇಂಥ ಅನ್ಯಾಯವುಂಟೆ ಪೇಳೊ ಆತ್ಮ ||ಪ|| ಚೆನ್ನಾಗಿ ಕಂಡು ತಿಳಿದು ಚರಿಸುವರೆ ತಿರುಗಿ ತಿರುಗಿ ಬಿನ್ನಾಣ ಬೇಡ ಕಂಡ್ಯ ಆತ್ಮ ||ಅ|| ಎಷ್ಟು ಜನ್ಮವ ಪಡೆದೆ ಎಷ್ಟು ಬಸಿರಲಿ ಬಂದೆ ಎಷ್ಟು ತನುವಾಗಿ ಬೆಳೆದೆ ಆತ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ

(ರಾಗ ಭೈರವಿ ತ್ರಿಪುಟತಾಳ) ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ ವಲ್ಲಭ ಪರಿಪೂರ್ಣನೆಂದು ಭಜಿಪರಿಗೆ||ಪ|| ಆಶಾಪಾಶಗಳನ್ನು ಮರೆದು ಶ್ರೀಹರಿಯ ಮೇ- ಲಾಸೆಯನ್ನು ಮಾಡಿ ನೆಲೆಗೊಳಿಸಿ ವಾಸುಕಿಶಯನನ ದಾಸನಾಗಿ ಒಡನೆ ವಾಸುದೇವನ ದಿವ್ಯಮೂರ್ತಿ ನಿಟ್ಟಿಸುವಗೆ || ಕಾಮಕ್ರೋಧ ಲೋಭ ಮದಮತ್ಸರವಳಿದು ಕಾಮಜನಕನ ಕಾರುಣ್ಯದಿಂದ ನಾಮಾಮೃತವನುಂಡು ನವವಿಧಭಕ್ತಿ ನೇಮದಿಂದಚ್ಯುತನ ತಿಳಿದು ಭಜಿಪರಿಗೆ || ವರಕಾವೇರಿಯೆ ವಿರಜಾನದಿಯೆಂದು ಪರಮಪದವೆ ರಂಗಕ್ಷೇತ್ರವೆಂದು ಪರವಾಸುದೇವನೆ ರಂಗನಾಯಕನೆಂದು ಪರಮಭಕುತಿಯಲಿ ಭಜಿಸುವ ಜನರಿಗೆ || ಸ್ನಾನದಾನಾದಿ ಸತ್ಕರ್ಮವ ಮುದದಿಂದ ಶ್ರೀನರಹರಿಗೆ ಸಮರ್ಪಿಸುವ ಆನಂದವೈಕುಂಠ ಲಕ್ಷ್ಮೀಶನಡಿಗಳ ಸಾನುರಾಗದಿ ನಿತ್ಯ ಧ್ಯಾನಿಪ ಜನರಿಗೆ || ಉಭಯ ಕಾವೇರಿ ಮಧ್ಯದಲಿ ಪವಡಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜತನ ಮಾಡೊ ಜೀವನವ

(ರಾಗ ಬೇಗಡೆ ಅಟತಾಳ) ಜತನ ಮಾಡೊ ಜೀವನವ, ಮುಂದೆ ಮತಿಭ್ರಷ್ಟವಾಗಿ ನೀ ಕೆಡಬೇಡ ಮನುಜ ||ಪ|| ಅಸ್ಥಿ ಮಲ ಮಾಂಸಾದಿ ಮೂತ್ರ , ಅದರ ಸುತ್ತಿಕೊಂಡಿರೋದು ಅಮರ ಬಳ್ಳಿ ಇಟ್ಟಾಡೆಯಲಿ ಬಾಹೋ ರಭಸ , ಅದರ ಹುಟ್ಟು ನೋಡಿದರೆ ಕುಂಬಾರನ ತಿಮಿರಿ || ಹಿಂದೆ ತಗರು ಮುಂದೆ ಭಾವಿ , ಅದರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ

(ರಾಗ ಕಾಂಭೋಜ ಝಂಪೆತಾಳ) ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ ಇಂದ್ರಾದಿ ಲೋಕವೆಲ್ಲವು ಕಾಲ ಕಂಡ್ಯ ಎಂದಿನಂತಲ್ಲ ಈ ದೇಹ ಕಳೆ ಕಂಡ್ಯ ಹಿಂದು ಮುಂದಣ ಗತಿಯ ಅರಿತಿಹುದು ಕಂಡ್ಯ || ಎಳೆತುಳಸಿ ವನಮಾಲೆ ಧರಿಸಿಕೊಳಬೇಕು ಘಳಿಲನೇ ಹರಿಯ ಪೂಜಿಸುತಿರಲುಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವೆ ಚಂಚಲಮತಿಯ ಬಿಡು

(ರಾಗ ಮಧ್ಯಮಾವತಿ ) ಮನವೆ ಚಂಚಲಮತಿಯ ಬಿಡು ||ಪ|| ನಮ್ಮ , ವನಜನಾಭನ ಭಜನೆಯ ಮಾಡು ||ಅ|| ಬಡಮನುಜಗೆ ಬಾಯಬಿಡುತ ದೈನ್ಯದಲವನ ಅಡಿಗಲಿಗೆರಗಲು ಪಡೆವುದೇನೊ ಕಡಲಶಯನ ಜಗದೊಡೆಯನ ನೆನೆಯೆ ಕೈ- ಪಿಡಿದು ಸಲಹುವನು ಬಿಡದಲೆ ಅನುಗಾಲ || ಬಲ್ಲಿದ ಭಜಕರ ಬಲ್ಲವ, ಬಲುಸಿರಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ತುಳಸಿಯಾ ಸೇವಿಸಿ

ತುಳಸಿಯ ಮಹಿಮೆಯನ್ನು ಕೊಂಡಾಡುವ ಈ ಹಾಡನ್ನು ರಾಗಗಳ ಮಾಲಿಕೆಯಿಂದ ಪೋಣಿಸಿ ಹಲವಾರು ಶ್ರೋತೃಗಳನ್ನು ಪ್ರೀತಗೊಳಿಸಿ ’ತುಳಸೀ ಕೃಷ್ಣಮೂರ್ತಿಗಳು’ ಎಂದೇ ಪ್ರಖ್ಯಾತರಾದ ಶ್ರೀ ಬಿ.ಎಸ್.ಕೃಷ್ಣಮೂರ್ತಿಗಳಿಗೆ ನನ್ನ ಅನಂತ ವಂದನೆಗಳು. ಸ್ತೋತ್ರ: ಉದಯರಾಗ ರಾಗ: ಭೂಪಾಳಿ ----------------
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾಣಂತಿ ಎನ್ನ ಬಾ ಅಂತಿ

(ರಾಗ ಕಾಂಭೋಜ ಛಾಪುತಾಳ) ಬಾಣಂತಿ ಎನ್ನ ಬಾ ಅಂತಿ ||ಪ|| ಬಾಣಂತಿಯೆಂಬೋ ಬಗೆಯ ನೀನರಿತು ಬಾರೆಂದು ಕರೆಯೋದುಚಿತವೆ ರಂಗ ||ಅ|| ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ ಭಂಗಪಡಲಾರೆ ಕಂದನಿಗಾಗಿ || ಖಾರಕಷಾಯಂಗಳು, ಕೇಳೆಲೊ ರಂಗ ಒಪ್ಪೊತ್ತಿನಹಾರವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯವದೆ ಜಯವದೆ ಈ ಮನೆತನಕೆ

(ಜೋಗಿಪದ ಏಕತಾಳ) ಜಯವದೆ ಜಯವದೆ ಈ ಮನೆತನಕೆ ಭಯವಿಲ್ಲ ಎಂದೆಂದಿಗು ನಿಜವು ಬಿಡು ಬಿಡು ಬಿಡು ಬಿಡು ಮನಸಂಶಯವ ಶುಕನೆಂಬ್ಹಕ್ಕಿ ಹೇಳುತದಪ್ಪ ಜಗವೆಂಬಾ ಗಿಡ ಹುಟ್ಟಿತಣ್ಣ ಹಕ್ಕಿಗಳೆರಡು ಕೂಡೈದಾವೆ ಹಣ್ಣುಗಳೆರಡು ಐದಾವಪ್ಪ ಮೂರು ಮೂರು ಗುಣ ಕೇಳಣ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು