ಕರೆದು ಭಿಕ್ಷೆಯ ನೀಡೆ

(ರಾಗ ಆರಭಿ ಅಟತಾಳ) ಕರೆದು ಭಿಕ್ಷೆಯ ನೀಡೆ , ಗೋಪ್ಯಮ್ಮ ನಿಮ್ಮ ತರಳ ಗೋಪಾಲನಿಗೆ ||ಪ|| ಅಂಗೈಯ ತಾವರೆಯು , ಹೊಳೆವ ಮುಂಗೈಯ ಸರಪಣಿಯು ಅಂಗಳದೊಳಗೆ ನಲಿನಲಿದಾಡುತ ಮಂಗಳಚರಣಂಗಳ ಚೆಲುವಗೆ || ಅಂಬೆಗಾಲಿಡುವವಗೆ , ಮುಂಗುರಳಲಿ ಅರಳೋಲೆ ಮಾಗಾಯಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು

(ರಾಗ ಶಂಕರಾಭರಣ ಅಟತಾಳ) ಕಪ್ಪು ಎನ್ನಲು ಬೇಡವೋ , ಶ್ರೀ ಹರಿಯನ್ನು ಕಪ್ಪು ಎನ್ನಲು ಬೇಡವೋ ||ಪ|| ಹರಿಯ ಮಧ್ಯದಿ ಕಪ್ಪು ,ಹಾಲಾಹಲವು ಕಪ್ಪು , ಪರಮ ಅಶ್ವವೆ ಕಪ್ಪು ಪಾರಿಜಾತವೆ ಕಪ್ಪು , ಕರಿಗಳೆಲ್ಲವು ಕಪ್ಪು , ಸುಲಲಿತವರನೆ ಕಪ್ಪು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆನು ಕೋದಂಡಪಾಣಿಯನು

(ರಾಗ ಸಾವೇರಿ ಆದಿತಾಳ) ಕಂಡೆ ಕಂಡೆನು ಕೋದಂಡಪಾಣಿಯನು ||ಪ|| ಕಂಡು ಈಗ ಕೊಂಡಾಡಿದೆ ನಿನ್ನ ನಾಮವನನುದಿನ ಸ್ಮರಣೆಯ ದಿನದಿನ ಹರುಷದಿ ಮಾಡು ||ಅ|| ಜನಮುನಿ ಋಷಿಗಳು ಘನಪ್ರಮುಖರೆಲ್ಲ ಮನಭೀಷ್ಟಗಳ ಬೇಡಲು ಪೊನ್ನು ಹೆಣ್ಣು ಕೋಟಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು

(ಗುರು) ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ ಒಂದಿಷ್ಟು ಅಪಮಾನ ಮಾಡಿದರೆ ತಪ್ಪದೆ ಒಂದು ನೂರು ಶ್ವಾನಜನ್ಮ ಕೋಟಿ ಹೊಲೆಜನ್ಮ ತಂದೀವನು ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧ ಹತ್ತಕ್ಕೆ ಅಭಿಷೇಕ ಉದಕ

(ಅಭಿಷೇಕ ಮಹಿಮೆ) ಅಪರಾಧ ಹತ್ತಕ್ಕೆ ಅಭಿಷೇಕ ಉದಕ ಅಪರಾಧ ನೂರಕೆ ಕ್ಷೀರ ಹರಿಗೆ ಅಪರಾಧ ಸಹಸ್ರಕೆ ಹಾಲು ಮೊಸರು ಕಾಣೊ || ಅಪರಾಧ ಲಕ್ಷಕೆ ಜೇನು ಘೃತ ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ ಅಪರಾಧ ಕ್ಷಮೆಗೆ ಅಚ್ಚ ತೆಂಗಿನ ಹಾಲು ಅಪರಾಧ ಕೋಟಿಗೆ ಸ್ವಚ್ಛ ಜಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು

(ಜಪ) ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ (ಬಗ್ಗಿಸಿ?) ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿಯ ಬುದ್ಧಿಪೂರ್ವಕದಿಂದ ಗೆಯ್ವುತಲಿರಬೇಕು ಮುದ್ದುಮೂರುತಿ ನಮ್ಮ ಪುರಂದರವಿಠಲನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನಾಮಿಕಾಖ್ಯ ಮಧ್ಯದ

(ಜಪ) ಅನಾಮಿಕಾಖ್ಯ ಮಧ್ಯದ ಎರಡನೆಯ ಗೆರೆಯಾದಿ ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ ಎಣಿಸು ತರ್ಜನಿಮೂಲ ಪರ್ಯಂತರ ಘನ ಹತ್ತು ಗೆರೆ ಜಪ ಪುರಂದರವಿಠಲಗೆ ಮನದಿ ಅರ್ಪಿಸುತ ಗಾಯತ್ರಿ ಜಪವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು

(ಜಪ) ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿಬಿಡುತ ಮಂತ್ರಾರ್ಥ ನೋಡದಲೆ ಅಡಿಗಡಿಗೆ ಜಪವ ಮಾಡೆ ದೈತ್ಯರಿಗೆ ಆಹುದಯ್ಯ ಒಡೆಯ ಪುರಂದರವಿಠಲನೊಲಿಸಬೇಕಾದರೆ ಹಿಡಿಯೊ ಈ ಪರಿ ಹೇಳಿದ ವಚನತತ್ವಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ

(ಅರ್ಘ್ಯ) ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ ಸುಮನಸರೊಳು ಸೂರ್ಯಗರ್ಘ್ಯವನಿತ್ತು ನಿಮ್ಮ ಪಾಪಗಳನೆಲ್ಲ ಚಿಮ್ಮಿ ಕಳೆಯಿರೆಂದು ಬೊಮ್ಮಮೂರುತಿ ತಾನು ಘಮ್ಮನೆ ಪೇಳಿರೆ ನಿಮ್ಮಜ್ಞಾನಕೆ ಸಿಲುಕಿ ಸುಮ್ಮನೆ ಕೆಡದಿರಿ ನಿಮ್ಮ ಶಿಕ್ಷಿಪನು ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೃದಯದ ಮಲವನ್ನು ತೊಳೆಯಲರಿಯದೆ

(ಮನ ಶುದ್ಧಿ) ಹೃದಯದ ಮಲವನ್ನು ತೊಳೆಯಲರಿಯದೆ ತಾವು ಉದಯದಲೆದ್ದು ಮಿಂದು ಗದಗದಗುಟ್ಟುವಂತೆ ಅದರಿಂದೇನು ಫಲ ಅದಕಿಂತ ಉದಯಾಸ್ತಮಾನ ನೀರೊಳಗಿಪ್ಪ ಮುದಿಕಪ್ಪೆ ಮಾಡಿದ ತಪ್ಪೇನಯ್ಯ ಪುರಂದರವಿಠಲನ ನಾಮವ ನೆನೆಯದೆ ದಿನಕ್ಕೆ ನೂರು ಬಾರಿ ಮುಳುಗಿದರೇನಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು