ಬಾಣಂತಿ ಎನ್ನ ಬಾ ಅಂತಿ
(ರಾಗ ಕಾಂಭೋಜ ಛಾಪುತಾಳ)
ಬಾಣಂತಿ ಎನ್ನ ಬಾ ಅಂತಿ ||ಪ||
ಬಾಣಂತಿಯೆಂಬೋ ಬಗೆಯ ನೀನರಿತು
ಬಾರೆಂದು ಕರೆಯೋದುಚಿತವೆ ರಂಗ ||ಅ||
ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ
ಭಂಗಪಡಲಾರೆ ಕಂದನಿಗಾಗಿ ||
ಖಾರಕಷಾಯಂಗಳು, ಕೇಳೆಲೊ ರಂಗ
ಒಪ್ಪೊತ್ತಿನಹಾರವು
ಯಾರು ಹೇಳಿದರು ನೀ ತಿರುಗಿ ಹೇಳುತಿದ್ದೆ
ಊರ ನಾರಿಯರೆಲ್ಲ ನಗರೇನೊ ರಂಗ ||
ಗುಟ್ಟು ಗುಮ್ಮುತಲಿದೆಯೊ , ಕೇಳೆಲೊ ರಂಗ
ಮೈಯೊಳು ಕಷ್ಟವಾಗುತಲಿದೆಯೊ
ಎಷ್ಟು ಹೇಳಿದರು ಮತ್ತಷ್ಟು ಹೇಳುತಿದ್ದೆ
ನಿಷ್ಠೂರವೇತಕೆ ಬೇಡ ರಂಗಯ್ಯ ||
ಒಡವೆ ವಸ್ತುಗಳೆಲ್ಲ , ಕೇಳೆಲೊ ರಂಗ
ಚೆಂದದೊಳಿಡಬಾರದು ಮೈಮೇಲೆ
ಬಡತನವಾಗಿರುವುದೆಲ್ಲವ ನೋಡಿ
ದುಡುಕುಮಾಡಿ ಕೈ ಪಿಡಿವರೆ ರಂಗ ||
ಕಟ್ಟಿದ ಮಂಡೆ ಕಟ್ಟಿ , ಕೇಳೆಲೊ ರಂಗ
ಪಣೆಯೊಳಿಟ್ಟ ಸಾದಿನ ಬೊಟ್ಟು
ತೊಟ್ಟ ಕುಪ್ಪಸವೆಲ್ಲ ಗುಷ್ಟು ಎಣ್ಣೆಮಣಕು
ಮುಟ್ಟಬೇಡ ಸಿರಿಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments