ಮಲ ಮೂತ್ರ ಮಾಡುವಾಗ

(ಮಲ ಮೂತ್ರ ವಿಸರ್ಜನ) ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು ಒಲಿವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಡು ಘಳಿಗೆ ಬೆಳಗು ಇರಲು

(ಸ್ನಾನ) ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪವೇದ ಪರಮಪುಣ್ಯಾತ್ಮ ಬ್ರಾಹ್ಮಣ ಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು

(ಆಚಮನ) ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು ಉದ್ದು ಮುಣುಗುವಂತೆ ಇರಬೇಕು ನೀರು ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ ಅದನು ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದವಿಲ್ಲದ ಅಶಕ್ತನಿಗೆ

(ಸ್ನಾನ) ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ ಮೈದೊಳೆದು ಮಡಿವುಟ್ಟು ನಾಮಗಳಿಟ್ಟು ಚಂದದಲಿ ಸಂಧ್ಯಾವಂದನೆ ಮಾಡೆ ಫಲವಾಹುದು ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ ಇಂದ್ರ ಹದಿನಾಲ್ಕು ಮನುನರಕವೆಂದು ಅಂದು ಪುರಂದರ ವಿಠಲ ಪೇಳಿದನೆಂದು ಸಿದ್ಧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ ( ಶ್ರೀನಿವಾಸದೇವರು ಬೇಟೆಗೆ ಹೋದುದು)

( ರಾಗ ಕಾಂಭೋಜ ಏಕತಾಳ) ಡಂಗುರವ ತೀಡಿ ಮೈಯೊಳು ಗಂಧ ಪೂಸಿದ , ಸ್ವಾಮಿ, ಗಂಧ ಪೂಸಿದ ||೧|| ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ , ಸ್ವಾಮಿ , ಕಸ್ತೂರಿ ಹಚ್ಚಿದ ||೨|| ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ , ಸ್ವಾಮಿ , ತಿಲಕ ಧರಿಸಿದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆನ್ನ ಎಬ್ಬಿಸಿದೆ

(ರಾಗ ಭೂಪಾಳಿ ಝಂಪೆತಾಳ) ಯಾಕೆನ್ನ ಎಬ್ಬಿಸಿದೆ ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ|| ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶುದ್ಧಿಗಳ ಮಾಡಿ ನದಿಯಲಿ ನಿಂತು ಸ್ತೋತ್ರಂಗಳನೆ ಮಾಡಿ ತೀರ್ಥಾಭಿಮಾನಿ ಪ್ರಾರ್ಥನಂಗಳನೆ ಮಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಡಮಾಡಿದರು ಯಮನಾಳುಗಳು

(ರಾಗ ನಾದನಾಮಕ್ರಿಯೆ ಆದಿತಾಳ) ದಡಮಾಡಿದರು ಯಮನಾಳುಗಳು ಓಡಿ ಬಂದರು ಏಳೇಳೆನುತ ಏಳಾಲೆಳೆದರು , ಪಾಪಿಯ ಬೀಳಾಲೆಳೆದರು || ಪ|| ಭವಂತಿ ಮಾಳಿಗೆ ದೊಡ್ಡ ಪಡಸಾಲೆ ಚಿಕ್ಕಮಕ್ಕಳು ದೊಡ್ಡಮಕ್ಕಳು ಆದ ಮದುವೆಯು ಆಗದ ಮದುವೆಯು ಒಂದೊಂದು ಸಾವಿರ ಸಾಲವ ಕೊಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತ್ವಂ ಶಾರದಂ

(ರಾಗ ಕಾಂಭೋಜ ಆದಿತಾಳ) ತ್ವಂ ಶಾರದಂ ||ಪ|| ಒಂದೆಂಟು ಲೆಕ್ಕದ ದ್ವಾರ, ಅದು ಒಂದು ದಿನ ತೊಳೆಯದಿದ್ದರೆ ವಿಕಾರ , ಸಂದು- ಸಂದಿಲಿ ಕ್ರಿಮಿರಾಶಿ ಘೋರ , ಅದು ಶುಕ್ಲ ಶೋಣಿತ ಸಂಬಂಧ ಶರೀರ || ಕಣ್ಣಿಂದ ಸಿಕ್ಕು ಸೋರುವ್ಯ್ದು , ಮೂಗು ಕಣ್ಣಿಂದ ಶ್ಲೇಷ್ಮ ತೋರುವುದು , ಅದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳಯ್ಯ ಬೆಳಗಾಯಿತು (೨)

(ಉದಯರಾಗ ಝಂಪೆತಾಳ) ಏಳಯ್ಯ ಬೆಳಗಾಯಿತು ||ಪ|| ಏಳು ಹೃಷಿಕೇಶ ಏಳು ರವಿಶಶಿವಂದ್ಯ ಏಳು ಪಶುಗಳ ಕಾಯ್ದೆ ಪಾಲಿಸಿದೆ ಗೋಕುಲವ ಏಳು ಯಶೋದೆಸುತನೆ ಏಳು ಭೂಸತಿರಮಣ ||ಅ|| ಪಚ್ಚೆ ಮುಡಿವಾಳಗಳು ಅಚ್ಚ ಶಾವಂತಿಗೆಯು ಬಿಚ್ಚನೆ ಜಾಜಿ ಸಂಪಿಗೆಯು ಪುನ್ನಾಗ ಕುಕ್ಷಿಯೊಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳಯ್ಯ ಬೆಳಗಾಯಿತು

(ರಾಗ ಭೂಪಾಳಿ ಝಂಪೆತಾಳ) ಏಳಯ್ಯ ಬೆಳಗಾಯಿತು ||ಪ|| ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ ಸೆಳೆಮಂಚದಿಂದ ಏಳೊ || ವೇದವನು ತರಲೇಳು ಮಂದರವ ಪೊರಲೇಳು
ದಾಸ ಸಾಹಿತ್ಯ ಪ್ರಕಾರ
ಬರೆದವರು